Home
ಸುದ್ದಿಜಾಲ

Realme: ಬರ್ತಿದೆ ಶಕ್ತಿಶಾಲಿ ಫೋನ್: 5600mAh ಬ್ಯಾಟರಿ.. 24GB RAM.. ಬೆಲೆಯೂ ಕಡಿಮೆ!

ರಿಯಲ್‌ಮಿ ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದನ್ನು ತನ್ನ 'C' ಸರಣಿಯಲ್ಲಿ ಮಾರುಕಟ್ಟೆ ಪರಿಚಯಿಸಲಿದೆ. ಹೌದು, ಕಂಪನಿಯು ಶೀಘ್ರದಲ್ಲೇ ರಿಯಲ್‌ಮಿ C75x (Realme C75x) ಮೊಬೈಲ್ ಅನ್ನು ರಿಲೀಸ್ ಮಾಡಲಿದೆ. ಸಾಮಾಜಿಕ ಜಾಲತಾಣದಲ್ಲಿ ರಿಯಲ್‌ಮಿ C75X ಫೋನಿನ ಫೋಟೋಗಳು ಮತ್ತು ವೈಶಿಷ್ಟ್ಯಗಳ ವಿವರಗಳು ಭಾರೀ ಸದ್ದು ಮಾಡುತ್ತಿವೆ. ಜೊತೆಗೆ, ಫೋನಿನ ಪೋಸ್ಟರ್ ಸಹ ಹಂಚಿಕೊಳ್ಳಲಾಗಿದೆ. ಬನ್ನಿ, ಈ ರಿಯಲ್‌ಮಿ C75x ಫೋನಿನ ವಿಶೇಷತೆಗಳು ಮತ್ತು ಇನ್ನಿತರ ಮಾಹಿತಿಯನ್ನು ತಿಳಿಯೋಣ.

ರಿಯಲ್‌ಮಿ ಸಂಸ್ಥೆಯು ಕಳೆದ ವರ್ಷ ನವೆಂಬರ್‌ನಲ್ಲಿ ವಿಯೆಟ್ನಾಂನಲ್ಲಿ ರಿಯಲ್‌ಮಿ C75 ಅನ್ನು ಬಿಡುಗಡೆ ಮಾಡಿತ್ತು. ಇದನ್ನು ಬಜೆಟ್ ವಿಭಾಗದಲ್ಲಿ ಪರಿಚಯಿಸಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಲಭ್ಯವಿದೆ. ಇದು 120Hz ದರದೊಂದಿಗೆ 6.72 ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 24GB RAM (12GB + 12GB), 5,600mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಬರ್ತಿದೆ ಹೊಸ Realme ಫೋನ್: 5600mAh ಬ್ಯಾಟರಿ.. 24GB RAM.. ಕಡಿಮೆ ಬೆಲೆ!

ರಿಯಲ್‌ಮಿ C75X ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಪೋಸ್ಟರ್ ಪ್ರಕಾರ, ಇದು ರಿಯಲ್‌ಮಿ C75 ಫೋನನಂತೆಯೇ ವಿನ್ಯಾಸವನ್ನು ಹೊಂದಿದೆ. ಇದು ಫ್ಲಾಟ್ ಮುಂಭಾಗ ಮತ್ತು ಹಿಂಭಾಗದ ಫಲಕದೊಂದಿಗೆ ಬರುತ್ತದೆ. ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್‌ ಪಡೆದಿದೆ. ಇದರೊಂದಿಗೆ ಇದು ಮಿಲಿಟರಿ ದರ್ಜೆಯ ಪ್ರಮಾಣೀಕರಣವನ್ನು ಸಹ ಹೊಂದಿದೆ.

ರಿಯಲ್‌ಮಿ C75X ವೈಶಿಷ್ಟ್ಯಗಳು (ಸೋರಿಕೆ)

ಡಿಸ್ಪ್ಲೇ ವಿವರ

ರಿಯಲ್‌ಮಿ C75x ಸ್ಮಾರ್ಟ್‌ಫೋನ್ 6.72 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ ಡಿಸ್ಪ್ಲೇ ಆಗಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ರೆಸಲ್ಯೂಶನ್, 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಈ ರಿಯಲ್‌ಮಿ ಫೋನ್ IP66, IP68 ಮತ್ತು IP69 ಪ್ರಮಾಣೀಕರ ಹೊಂದಿದೆ.

RAM ಮತ್ತು ಸ್ಟೋರೇಜ್

ರಿಯಲ್‌ಮಿ C75x ಮೊಬೈಲ್ 24GB RAM ಹೊಂದಿರುತ್ತದೆ. ಇದು ಫೋನಿನ ವಿಸ್ತರಿಸಬಹುದಾದ RAM ತಂತ್ರಜ್ಞಾನದ ಮೂಲಕ ಮಾತ್ರ ಸಾಧ್ಯವಾಗುತ್ತದೆ. ಈ ಫೋನ್ 12GB RAM ನೊಂದಿಗೆ ಬಿಡುಗಡೆಯಾಗಲಿದೆ. ಇದು ಉನ್ನತ ರೂಪಾಂತರದಲ್ಲಿ ಲಭ್ಯವಿರುತ್ತದೆ. ಈ ಫೋನ್ 12GB ವರ್ಚುವಲ್ RAM ಹೊಂದಿದ್ದು, ಭೌತಿಕ RAM ಜೊತೆಗೆ 24GB (12GB+12GB) ಅನ್ನು ಬಳಸಬಹುದು.

ಬರ್ತಿದೆ ಹೊಸ Realme ಫೋನ್: 5600mAh ಬ್ಯಾಟರಿ.. 24GB RAM.. ಕಡಿಮೆ ಬೆಲೆ!

ಕ್ಯಾಮೆರಾ ಸೆಟಪ್

ರಿಯಲ್‌ಮಿ C75x ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರುತ್ತದೆ. ಜೊತೆಗೆ ಅಲ್ಟ್ರಾ ವೈಡ್ ಸೆಕೆಂಡರಿ ಲೆನ್ಸ್ ಒದಗಿಸುವ ನಿರೀಕ್ಷೆಯಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿರಲಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ C75x ಸ್ಮಾರ್ಟ್‌ಫೋನ್ 5,600mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಮೊಬೈಲ್‌ನಲ್ಲಿ 45W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು. ಈ ಫೋನ್ 90 ನಿಮಿಷಗಳಲ್ಲಿ ಶೇ.0 ರಿಂದ ಶೇ.100 ರಷ್ಟು ಸಂಪೂರ್ಣ ಚಾರ್ಜ್ ಆಗಲಿದೆ.

ರಿಯಲ್‌ಮಿ C75x ಬಿಡುಗಡೆ ಯಾವಾಗ?

ಕಂಪನಿಯು ತನ್ನ ಹೊಸ ರಿಯಲ್‌ಮಿ C75x (Realme C75x) ಫೋನನ್ನು ಮೊದಲು ಮಲೇಷಿಯಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ಇದು ಕೋರಲ್ ಪಿಂಕ್ ಮತ್ತು ಓಷಿಯಾನಿಕ್ ಬ್ಲೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಮಾರ್ಕೆಟಿಂಗ್ ಪೋಸ್ಟರ್ ಹೊರಬಂದ ನಂತರ, ಕಂಪನಿಯು ಶೀಘ್ರದಲ್ಲೇ ರಿಯಲ್‌ಮಿ C75X ಫೋನಿನ ಅಧಿಕೃತ ನಿಡುಗಡೆ ದಿನಾಂಕವನ್ನು ಘೋಷಿಸಲಿದೆ.

Best Mobiles in India

English summary
Realme C75x launching soon with 24GB RAM,120Hz Display, 5600mAh and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+