ಸದ್ದಿಲ್ಲದೆ ಸಿದ್ದವಾಗುತ್ತಿದೆ Realme ನೋಟ್ ಸರಣಿಯ ಈ ಸ್ಮಾರ್ಟ್‌ಫೋನ್! Unisoc T612 SoC ಚಿಪ್‌ಸೆಟ್ ಸಾಧ್ಯತೆ
ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ರಿಯಲ್‌ಮಿ (Realme) ಕೂಡ ಒಂದು. ಅಗ್ಗದ ದರದಲ್ಲಿ ಅತ್ಯಾಕರ್ಷಕ ಫೀಚರ್ಸ್ ಹೊಂದಿರುವ ಮೊಬೈಲ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ. ಆಗಾಗ ನೂತನ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿರುವ Realme ಸಂಸ್ಥೆ ಇದೀಗ ನೂತನ ಮೊಬೈಲ್ ಒಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ ಎಂದು ಪ್ರಮಾಣೀಕರಣ ವೆಬ್‌ಸೈಟ್ ಒಂದು ಮಾಹಿತಿ ಬಹಿರಂಗಪಡಿಸಿದೆ. ಹಾಗಿದ್ರೆ ಯಾವುದು ರಿಯಲ್‌ಮಿಯ ಮುಂಬರುವ ಫೋನ್, ಏನೆಲ್ಲಾ ಫೀಚರ್ಸ್ ಹೊಂದಿರಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
Realme Note 50 ಯನ್ನು ಕೆಲ ದಿನಗಳ ಹಿಂದೆ ಜಾಗತಿಕ ಮಾರುಕಟ್ಟೆಗೆ ಬ್ರ್ಯಾಂಡ್‌ನ ಮೊದಲ ನೋಟ್ ಸರಣಿಯ ಫೋನ್ ಆಗಿ ಬಿಡುಗಡೆ ಮಾಡಲಾಗಿದೆ. ಇದೀಗ ಕಂಪನಿಯು ಈ ಸ್ಮಾರ್ಟ್‌ಫೋನ್‌ನ ಮುಂದುವರೆದ ಸರಣಿಯಾಗಿ Realme Note 60 ಯನ್ನು ಪರಿಚಯಿಸಲು ಯೋಚಿಸುತ್ತಿದೆ. ಮುಂಬರುವ ಫೋನ್ ಕುರಿತು Realme ಇದುವರೆಗೂ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ ಆದರೂ Geekbench ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ Realme Note 60 ಸ್ಮಾರ್ಟ್‌ಫೋನ್ ಕುರಿತು ಕೆಲವು ಪ್ರಮುಖ ವಿವರಗಳನ್ನು ಹೊರಬಿದ್ದಿವೆ.

Realme Note 60 ಕುರಿತು Geekbench ವಿವರಗಳು:
* ಮುಂಬರುವ Realme Note 60 ಮಾದರಿ ಸಂಖ್ಯೆ RMX3933 ನೊಂದಿಗೆ Geekbench ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ.
* ಮುಂಬರುವ ಸ್ಮಾರ್ಟ್‌ಫೋನ್ ಸಿಂಗಲ್-ಕೋರ್ ಮತ್ತು ಮಲ್ಟಿ-ಕೋರ್ ಪರೀಕ್ಷೆಗಳಲ್ಲಿ ಕ್ರಮವಾಗಿ 432 ಮತ್ತು 1341 ಅಂಕಗಳನ್ನು ಗಳಿಸಿದೆ ಎಂದು ಪಟ್ಟಿಯು ತಿಳಿಸುತ್ತದೆ.
* Realme Note 60 ಯುನಿಸಾಕ್ T612 ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ, ಇದನ್ನು ನಾವು Realme Note 50, Realme C53 ಮತ್ತು Narzo N53 ತರಹದ ಕೆಲವೇ ಕೆಲವು ಫೋನ್‌ಗಳಲ್ಲಿ ನೋಡಬಹುದು.
* ಹಿಂದಿನ 4G ಗೆ ಹೋಲಿಸಿದರೆ Realme Note 60 ಕನಿಷ್ಠ 6GB RAM ಅನ್ನು ಹೊಂದಿರುತ್ತದೆ ಮತ್ತು ಆಂಡ್ರಾಯ್ಡ್ 14 ಆಧಾರಿತ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
Realme Note 60 ನಿರೀಕ್ಷಿತ ವಿಶೇಷತೆಗಳು:
Geekbench ಪ್ರಮಾಣೀಕರಣ ವೆಬ್‌ಸೈಟ್ ಜೊತೆಗೆ Realme Note 60 NBTC, TUV ಮತ್ತು SIRIM ಪ್ರಮಾಣೀಕರಣ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಿಸಿಕೊಂಡಿದೆ. ಇದು Note 60 ಯ ಕೆಲವು ಪ್ರಮುಖ ವಿವರಗಳನ್ನು ಸೂಚಿಸಿವೆ. TUV ಪಟ್ಟಿಯು ಇದು 5,000mAh ಬ್ಯಾಟರಿಯನ್ನು ಹೊಂದಿರಬಹುದು ಎಂದು ಸೂಚಿಸಿದೆ. Realme Note 60 ಇದು Note 50 ಗೆ ಹೋಲುವಂತೆ ತೋರುತ್ತಿದೆ ಎಂದು ತಿಳಿಸಿವೆ.
Realme Note 50:
ಇದು 6.74 ಇಂಚಿನ LCD HD+ 90Hz ಡಿಸ್‌ಪ್ಲೇ, UniSoC T612 SoC ಜೊತೆಗೆ 4GB RAM ಮತ್ತು 64GB ಸ್ಟೋರೇಜ್ ಹೊಂದಿದೆ. ಇದು 13MP ಮುಖ್ಯ ಸೆನ್ಸಾರ್, B&W ಡೆಪ್ತ್ ಸೆನ್ಸಾರ್ ಮತ್ತು 5MP ಸೆಲ್ಫಿ ಶೂಟರ್ ಅನ್ನು ಹೊಂದಿದೆ.
Realme Note 50 10W ವೈರ್ಡ್ ಚಾರ್ಜಿಂಗ್ ಜೊತೆಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, IP54 ನೀರು ಮತ್ತು ಧೂಳು ನಿರೋಧಕ ರೇಟಿಂಗ್, 3.5mm ಹೆಡ್‌ಫೋನ್ ಜಾಕ್, USB ಟೈಪ್-ಸಿ ಪೋರ್ಟ್ ಮತ್ತು ಬ್ಲೂಟೂತ್ v5.0 ಹೊಂದಿದೆ.
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (BIS) ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವಂತೆ Realme Note 60 ಇದು ಜಾಗತಿಕ ಮಾರುಕಟ್ಟೆಗಳ ಜೊತೆಗೆ ಭಾರತದಲ್ಲಿ ಕೂಡ ಬಿಡುಗಡೆ ಹೊಂದಬಹುದು ಎಂದು ಹೇಳಲಾಗುತ್ತಿದೆ. ಅದರ ಹಿಂದಿನ ಸರಣಿಯ ಮೊಬೈಲ್‌ನಂತೆ ಇದು ಕೈಗೆಟುಕುವ ದರದಲ್ಲಿ ದೊರಕಲಿದೆ ಎನ್ನಲಾಗುತ್ತಿದೆ.


Click it and Unblock the Notifications








