ಭಾರತಕ್ಕೆ ಎಂಟ್ರಿ ಕೊಟ್ಟ ರಿಯಲ್‌ಮಿ ಡಿಜೊ ವಾಚ್‌ 2! ಆಕರ್ಷಕ ಫೀಚರ್ಸ್‌!

|

ರಿಯಲ್‌ಮಿ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಯಾಗಿ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಟಿವಿ ಸೇರಿದಂತೆ ಇತರೆ ಗ್ಯಾಡ್ಜೆಟ್ಸ್‌ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಭಾರತದ ಮಾರುಕಟ್ಟೆಯಲ್ಲಿ ರಿಯಲ್‌ಮಿ ಡಿಜೊ ವಾಚ್‌ 2 ಮತ್ತು ರಿಯಲ್‌ಮಿ ಡಿಜೊ ವಾಚ್‌ ಪ್ರೊ ಸ್ಮಾರ್ಟ್ ವಾಚ್‌ಗಳನ್ನು ಪರಿಚಯಿಸಿದೆ. ಇನ್ನು ಈ ಎರಡು ಸ್ಮಾರ್ಟ್‌ವಾಚ್‌ಗಳು ಕೂಡ SpO2 ಮೇಲ್ವಿಚಾರಣೆ ಫೀಚರ್ಸ್‌ ಅನ್ನು ಒಳಗೊಂಡಿವೆ.

ಭಾರತಕ್ಕೆ ಎಂಟ್ರಿ ಕೊಟ್ಟ ರಿಯಲ್‌ಮಿ ಡಿಜೊ ವಾಚ್‌ 2! ಆಕರ್ಷಕ ಫೀಚರ್ಸ್‌!

ಹೌದು, ರಿಯಲ್‌ಮಿ ಕಂಪೆನಿ ಹೊಸ ರಿಯಲ್‌ಮಿ ಡಿಜೊ ವಾಚ್‌ 2 ಮತ್ತು ರಿಯಲ್‌ಮಿ ಡಿಜೊ ವಾಚ್‌ ಪ್ರೊ ವಾಚ್‌ ಲಾಂಚ್‌ ಮಾಡಿದೆ. ಈ ಎರಡು ವಾಚ್‌ಗಳು ಹೃದಯ ಬಡಿತದ ಮೇಲ್ವಿಚಾರಣೆ ಫೀಚರ್ಸ್‌ ಒಳಗೊಂಡಿವೆ. ಇದರಲ್ಲಿ ಡಿಜೊ ವಾಚ್ 2 1.69 ಇಂಚಿನ ಫುಲ್‌ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಜೊ ವಾಚ್‌ ಪ್ರೊ ಮಾದರಿಯು ಇಂಟರ್‌ಬಿಲ್ಟ್‌ ಜಿಪಿಎಸ್ ಅನ್ನು ಹೊಂದಿದೆ. ಇನ್ನುಳಿದಂತೆ ರಿಯಲ್‌ಮಿ ಡಿಜೊ ವಾಚ್‌ 2 ಮತ್ತು ಪ್ರೊ ಮಾದರಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಟ್ಟ ರಿಯಲ್‌ಮಿ ಡಿಜೊ ವಾಚ್‌ 2! ಆಕರ್ಷಕ ಫೀಚರ್ಸ್‌!

ರಿಯಲ್‌ಮಿ ಡಿಜೋ ವಾಚ್ 2
ರಿಯಲ್ಮೆ ಡಿಜೊ ವಾಚ್ 2 1.69 ಇಂಚಿನ ಫುಲ್‌ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಇದು 600 ನಿಟ್ಸ್‌ ಬ್ರೈಟ್‌‌ನೆಸ್‌ಮತ್ತು 2.5 ಡಿ ಗ್ಲಾಸ್ ಪ್ರೊಟೆಕ್ಷನ್‌ ಹೊಂದಿದೆ. ಈ ವಾಚ್‌ 20 ಎಂಎಂ ಡಿಟ್ಯಾಚೇಬಲ್ ಸ್ಟ್ರಾಪ್‌ಗಳನ್ನು ಒಳಗೊಂಡ ಡಯಲ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಕಸ್ಟಮೈಸೇಶನ್ ಆಯ್ಕೆಗಳೊಂದಿಗೆ 100 ಕ್ಕೂ ಹೆಚ್ಚು ಡೈನಾಮಿಕ್ ವಾಚ್ ಫೇಸ್‌ಗಳನ್ನು ಹೊಂದಿದೆ. ಇದು ಸೈಕ್ಲಿಂಗ್, ವಾಕಿಂಗ್, ರನ್ನಿಂಗ್‌, ಬ್ಯಾಸ್ಕೆಟ್‌ಬಾಲ್, ಕ್ರಿಕೆಟ್, ಬ್ಯಾಡ್ಮಿಂಟನ್ ಒಳಗೊಂಡ 15 ಸ್ಪೋರ್ಟ್ಸ್‌ ಮೋಡ್‌ ಅನ್ನು ಸಂಯೋಜಿಸಲ್ಪಟ್ಟಿದೆ. ಇನ್ನು ವಾಚ್‌ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಲಭ್ಯವಿರುವ ಡಿಜೊ ಆಪ್ ಅನ್ನು ಬೆಂಬಿಸಲಿದೆ. ಈ ವಾಚ್‌ 24x7 ಹೃದಯ ಬಡಿತದ ಮೇಲ್ವಿಚಾರಣೆ, ಸ್ಲೀಪ್ ಟ್ರ್ಯಾಕಿಂಗ್ ಮತ್ತು SpO2 ಮಾನಿಟರ್‌ ಅನ್ನು ಕೂಡ ಒಳಗೊಂಡಿದೆ. ಈ ವಾಚ್‌ 260mAh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದು ಬಾರಿ ಚಾರ್ಜ್ ಮಾಡಿದರೆ 10 ದಿನಗಳವರೆಗೆ ಬಾಳಿಕೆ ಬರುತ್ತದೆ.

ಭಾರತಕ್ಕೆ ಎಂಟ್ರಿ ಕೊಟ್ಟ ರಿಯಲ್‌ಮಿ ಡಿಜೊ ವಾಚ್‌ 2! ಆಕರ್ಷಕ ಫೀಚರ್ಸ್‌!

ರಿಯಲ್‌ಮಿ ಡಿಜೊ ವಾಚ್ ಪ್ರೊ
ರಿಯಲ್‌ಮಿ ಡಿಜೊ ವಾಚ್ ಪ್ರೊ 1.75-ಇಂಚಿನ HD ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 600 ನಿಟ್ಸ್‌ ಬ್ರೈಟ್‌ನೆಟ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಇಂಟರ್‌ಬಿಲ್ಟ್‌ ಜಿಪಿಎಸ್ ಒಳಗೊಂಡಿದೆ. ಈ ವಾಚ್‌ ಕೂಡ ಕಸ್ಟಮೈಸೇಶ್‌ ಮಾಡಿದ ಆಯ್ಕೆಗಳೊಂದಿಗೆ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ನೀಡುತ್ತದೆ. ಇದು ರನ್ನಿಂಗ್‌, ವಾಕಿಂಗ್, ಸೈಕ್ಲಿಂಗ್, ಪಾದಯಾತ್ರೆ, ಬ್ಯಾಸ್ಕೆಟ್‌ಬಾಲ್, ಯೋಗ, ರೋಯಿಂಗ್, ಎಲಿಪ್ಟಿಕಲ್, ಕ್ರಿಕೆಟ್ ನಂತಹ 90 ಕ್ರೀಡೆಗಳನ್ನು ಒಳಗೊಂಡಿದೆ . ಇನ್ನು ರಿಯಲ್‌ಮಿ ಡಿಜೊ ವಾಚ್‌ ಪ್ರೊ 24x7 ಹೃದಯ ಬಡಿತ, ನಿದ್ರೆ ಮತ್ತು SpO2 ಮೇಲ್ವಿಚಾರಣೆಯನ್ನು ಮಾಡಲಿದೆ. ಇದಲ್ಲದೆ ಮ್ಯೂಸಿಕ್‌ ಕಂಟ್ರೋಲ್‌, ಕ್ಯಾಮೆರಾ ಕಂಟ್ರೋಲ್‌, ಅನ್‌ಲಾಕ್ ಸ್ಮಾರ್ಟ್‌ಫೋನ್ ಮತ್ತು ಸರ್ಚ್ ಸ್ಮಾರ್ಟ್‌ಫೋನ್ ನಂತಹ ಹೆಚ್ಚುವರಿ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ವಾಚ್‌ 390mAh ಬ್ಯಾಟರಿ ಹೊಂದಿದ್ದು, ಇದು 14 ದಿನಗಳ ಬಾಳಿಕೆ ನೀಡಲಿದೆ.

ಭಾರತಕ್ಕೆ ಎಂಟ್ರಿ ಕೊಟ್ಟ ರಿಯಲ್‌ಮಿ ಡಿಜೊ ವಾಚ್‌ 2! ಆಕರ್ಷಕ ಫೀಚರ್ಸ್‌!

ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ ಡಿಜೋ ವಾಚ್ 2 ಭಾರತದಲ್ಲಿ 2,999ರೂ. ಬೆಲೆಯನ್ನು ಹೊಂದಿದೆ. ಲಾಂಚ್‌ ಆಫರ್‌ನಲ್ಲಿ 1,999.ರೂ ಗಳಿಗೆ ಖರೀದಿಸಬಹುದಾಗಿದೆ. ಹಾಗೆಯೇ ರಿಯಲ್‌ಮಿ ಡಿಜೋ ವಾಚ್ ಪ್ರೊ 4,999ರೂ.ಬೆಲೆ ಹೊಂದಿದ್ದು, ವಿಶೇಷ ಲಾಂಚ್‌ ಆಫರ್‌ನಲ್ಲಿ 4,499ರೂ,ಗಳಿಗೆ ಲಬ್ಯವಾಗಲಿದೆ. ಈ ಎರಡೂ ಸ್ಮಾರ್ಟ್ ವಾಚ್‌ಗಳು ಸೆಪ್ಟೆಂಬರ್ 22 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಧ್ಯಾಹ್ನ 12 ಗಂಟೆಯಿಂದ ಮಾರಾಟಕ್ಕೆ ಬರಲಿವೆ. ಇದರಲ್ಲಿ ರಿಯಲ್‌ಮಿ ಡಿಜೊ ವಾಚ್ 2 ಕ್ಲಾಸಿಕ್ ಬ್ಲಾಕ್, ಗೋಲ್ಡನ್ ಪಿಂಕ್, ಐವರಿ ವೈಟ್ ಮತ್ತು ಸಿಲ್ವರ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಬರಿದೆ. ಆದರೆ ಡಿಜೋ ವಾಚ್ ಪ್ರೊ ಕಪ್ಪು ಮತ್ತು ಸ್ಪೇಸ್ ಬ್ಲೂ ಕಲರ್‌ ಆಯ್ಕೆಯಲ್ಲಿ ದೊರೆಯಲಿದೆ.

Best Mobiles in India

English summary
Realme Dizo Watch 2 and Realme Dizo Watch Pro smartwatches have been launched in the Indian market.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X