ರಿಯಲ್‌ಮಿ ಫೇಸ್ಟಿವ್ ಡೇಸ್ ಸೇಲ್ ಡೇಟ್ ಫಿಕ್ಸ್!..ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಸಂಸ್ಥೆ ತನ್ನ ರಿಯಲ್‌ಮಿ ಫೇಸ್ಟಿವ್ ಡೇಸ್ ಸೇಲ್ ದಿನಾಂಕವನ್ನು ಘೋಷಿಸಿದೆ. ಈ ಸೇಲ್ ಇದೇ ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದ್ದು ಅಕ್ಟೋಬರ್ 21, 2020 ರವರೆಗೆ ಮುಂದುವರಿಸಲಿದೆ ಎಂದು ಘೋಷಿಸಿದೆ. ಇನ್ನು ಈ ಮಾರಾಟದ ಸಮಯದಲ್ಲಿ, ಗ್ರಾಹಕರು ರಿಯಲ್‌ಮಿ C11, C12, C15, ರಿಯಲ್‌ಮಿ 6, X3, X3 ಸೂಪರ್ ಜೂಮ್ ಮತ್ತು ಇತರ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ರಿಯಾಯಿತಿಯನ್ನು ಘೋಷಿಸಿದ್ದು, ರಿಯಲ್‌ಮಿ ಸ್ಮಾರ್ಟ್‌ಫೋನ್ ಖರೀದಿಗೆ ಇದು ಸಕಾಲ ಎಂದು ಹೇಳಬಹುದಾಗಿದೆ.

ಹೌದು, ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ ಪೇಸ್ಟಿವ್ ಡೇಸ್ ಸೇಲ್‌ಗೆ ದಿನಗಣನೆ ಆರಂಭವಾಗಿದೆ. ಆಕರ್ಷಕ ರಿಯಾಯಿತಿ ಧರದಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್ ಖರೀದಿಸಲು ಇದು ಸಕಾಲವಾಗಿದೆ. ಕೇವಲ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ, AIOT ಉತ್ಪನ್ನಗಳು ವೈವಿಧ್ಯಮಯ ಆಡಿಯೊ ಪರಿಕರಗಳು, ವೆರಿಯೆಬಲ್ಸ್ ಪ್ರಾಡಕ್ಟ್‌ಗಳು ಮತ್ತು ರಿಯಲ್‌ಮಿ ಸ್ಮಾರ್ಟ್ ಟಿವಿ ಗಳು ಕೂಡ ಈ ಫೇಸ್ಟಿವ್ ಡೇಸ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ದೊರೆಯಲಿವೆ. ಇನ್ನು ಈ ಎಲ್ಲಾ ಕೊಡುಗೆಗಳು ರಿಯಲ್‌ಮಿ.ಕಾಮ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಮಾತ್ರ ಲಭ್ಯವಾಗಲಿವೆ. ಇನ್ನುಳಿದಂತೆ ಈ ಫೆಸ್ಟಿವ್ ಡೇಸ್ ಸೇಲ್‌ನಲ್ಲಿ ಯಾವೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ ಫೇಸ್ಟಿವ್ ಡೇಸ್ ಸೇಲ್ ದಿನಾಂಕವನ್ನು ರಿಯಲ್‌ಮಿ ಸಂಸ್ಥೆ ಘೋಷಣೆ ಮಾಡಿದೆ. ಇದು ಅಕ್ಟೋಬರ್ 16 ರಂದು ಬೆಳಿಗ್ಗೆ 12 ಗಂಟೆಗೆ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ರಿಯಲ್‌ಮಿ C11, C12, C15, ರಿಯಲ್‌ಮಿ 6, X3, X3 ಸೂಪರ್ ಜೂಮ್ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ 500 ರೂನಿಂದ 1,000 ರೂಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದಲ್ಲದೆ ರಿಯಲ್‌ಮಿ ಇಯರ್‌ಫೋನ್‌ಗಳು, ಪವರ್ ಬ್ಯಾಂಕುಗಳು ಕೂಡ ಅದರ ಶ್ರೇಣಿಯ ಉತ್ಪನ್ನಗಳ ಮೇಲೆ ರಿಯಾಯಿತಿಯನ್ನು ಹೊಂದಿರುತ್ತದೆ. ಇನ್ನು ರಿಯಲ್‌ಮಿ ಫೇಸ್ಟಿವ್ ಡೇಸ್ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ನೀಡಲಾಗಿದೆ. ಯಾವ ಸ್ಮಾರ್ಟ್‌ಫೋನ್‌ಗೆ ಎಷ್ಟು ರಿಯಾಯಿತಿ ನೀಡಲಾಗಿದೆ ಅನ್ನೊದನ್ನ ಈ ಕೆಳಗಿನ ಪಟ್ಟಿಯಲ್ಲಿ ತಿಳಿಯೋಣ ಬನ್ನಿರಿ.

ಸ್ಮಾರ್ಟ್‌ಫೋನ್, ಮೂಲ ಬೆಲೆ, ಫೇಸ್ಟಿವ್ ಡೇಸ್ ಸೇಲ್ ಬೆಲೆ, ಡಿಸ್ಕೌಂಟ್
ರಿಯಲ್‌ಮಿ c11(2GB+32GB) 7,499ರೂ. 6,999ರೂ. 500ರೂ.
ರಿಯಲ್‌ಮಿ c12(3GB+32GB) 8,999ರೂ. 7,999ರೂ. 1,000ರೂ.
ರಿಯಲ್‌ಮಿ c15(3GB+32GB) 9,999ರೂ. 8,999ರೂ. 1,000ರೂ.
ರಿಯಲ್‌ಮಿ c15(4GB+64GB) 10,999ರೂ. 9,999ರೂ. 1,000ರೂ.
ರಿಯಲ್‌ಮಿ 6 (6GB+32GB) 14,999ರೂ. 13,999ರೂ. 1,000ರೂ.
ರಿಯಲ್‌ಮಿ 6 (8GB+128GB) 16,999ರೂ. 15,999ರೂ. 1,000ರೂ.
ರಿಯಲ್‌ಮಿ X3(6GB+128GB) 24,999ರೂ. 21,999ರೂ. 3,000ರೂ.
ರಿಯಲ್‌ಮಿ X3(8GB+128GB) 25,999ರೂ. 22,999ರೂ. 3,000ರೂ.

ಇದಲ್ಲದೆ ಈ ಫೇಸ್ಟಿವ್ ಡೇಸ್ ಸೇಲ್‌ನಲ್ಲಿ ರಿಯಲ್ಮೆ ಬಡ್ಸ್ ಏರ್ ಪ್ರೊ 500 ರೂಗಳ ರಿಯಾಯಿತಿಯನ್ನು ಪಡೆದುಕೊಂಡಿದ್ದು, ಇದು ಕೇವಲ 4,499 ರೂ.ಗಳಿಗೆ ಲಭ್ಯವಾಗಲಿದೆ. ಅಲ್ಲದೆ ರಿಯಲ್‌ಮಿ ಬಡ್ಸ್ ಕ್ಯೂ ಕೂಡ 1,000ರೂ,ಗಳ ರಿಯಾಯಿತಿಯನ್ನು ಹೊಂದಿದ್ದು, 1,499 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ರಿಯಲ್‌ಮಿ ಸ್ಮಾರ್ಟ್ ವಾಚ್ ಸಾವಿರ ರೂಗಳ ರಿಯಾಯಿತಿಯನ್ನ ಪಡೆದಿದ್ದು 2,999ರೂ ಗಳಿಗೆ ಲಬ್ಯವಾಗಲಿದೆ. ಇದಲ್ಲದೆ ರಿಯಲ್‌ಮಿ 32 ಇಂಚಿನ ಸ್ಮಾರ್ಟ್ ಟಿವಿ 12,999 ರೂಗಳಿಗೆ, 43 ಇಂಚಿನ ಮಾದರಿ 21,999 ರೂಗಳಿಗೆ ರಿಯಾಯಿತಿ ದರದಲ್ಲಿ ದೊರೆಯಲಿವೆ.


Click it and Unblock the Notifications