Home
ಸುದ್ದಿಜಾಲ

ರಿಯಲ್‌ಮಿ GT5 ಸ್ಮಾರ್ಟ್‌ಫೋನ್‌ ಡಿಸೈನ್‌ ರಿವೀಲ್‌.. ಏನಿದು ಫ್ಲೋವಿಂಗ್ ಸಿಲ್ವರ್ ಮಿರರ್ ವಿನ್ಯಾಸ!

ಬಹು ನಿರೀಕ್ಷಿತ ರಿಯಲ್‌ಮಿ GT5 ಸ್ಮಾರ್ಟ್‌ಫೋನ್‌ ವಿನ್ಯಾಸ ಬಹಿರಂಗವಾಗಿದೆ. ಈಗಾಗಲೇ ಬಿಡುಗಡೆಗೂ ಮುನ್ನವೇ ಸಖತ್‌ ಸೌಂಡ್‌ ಮಾಡ್ತಿರುವ ರಿಯಲ್‌ಮಿ GT5 ತನ್ನ ಡಿಸೈನ್‌ ಲುಕ್‌ ಮೂಲಕ ಇನ್ನಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ರಿಯಲ್‌ಮಿ GT5 ಸ್ಮಾರ್ಟ್‌ಫೋನ್‌ ವಿನ್ಯಾಸ ಬಹಿರಂಗವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್‌ "ಫ್ಲೋವಿಂಗ್ ಸಿಲ್ವರ್ ಮಿರರ್" ವಿನ್ಯಾಸವನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ದ್ರವ ಲೋಹದ ಬೆಳ್ಳಿ ವಿನ್ಯಾಸವನ್ನು ನೀಡಲಿದೆ. ಇದರೊಂದಿಗೆ ಕ್ಯಾಮರಾ ಮಾಡ್ಯೂಲ್‌ "ಮೈಕ್ರೋ-ಸಸ್ಪೆನ್ಷನ್ ಪೆನೆಟ್ರೇಟಿಂಗ್ ಡಿಸೈನ್" ಹೊಂದಿದೆ ಎಂದು ವರದಿಯಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ GT5 ಡಿಸೈನ್‌ ರಿವೀಲ್‌.. ಏನಿದು ಫ್ಲೋವಿಂಗ್ ಸಿಲ್ವರ್ ಮಿರರ್ ವಿನ್ಯಾಸ!

ರಿಯಲ್‌ಮಿ GT5 ಡಿಸೈನ್‌ ಹೇಗಿರಲಿದೆ ಗೊತ್ತಾ?
ರಿಯಲ್‌ಮಿ GT5 ಸ್ಮಾರ್ಟ್‌ಫೋನ್‌ 6.67 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1240×2772 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿರಲಿದೆ. ಜೊತೆಗೆ ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದೆ ಎನ್ನಲಾಗಿದೆ.

ರಿಯಲ್‌ಮಿ GT5 ಪ್ರೊಸೆಸರ್‌ ನಿರೀಕ್ಷೆ ಏನು?
ರಿಯಲ್‌ಮಿ GT5 ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 24GB RAM ಮತ್ತು 1TB ವರೆಗಿನ ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಆಯ್ಕೆಯನ್ನು ಸಹ ನೀಡಲಿದೆ.

ರಿಯಲ್‌ಮಿ GT5 ಕ್ಯಾಮೆರಾ ಸೆಟ್‌ಅಪ್‌
ರಿಯಲ್‌ಮಿ GT5 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ನೀಡಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ. ಇದು 1/1.56 Sony IMX890 ಸೆನ್ಸಾರ್‌ ಹೊಂದಿರಲಿದೆ ಎಂದು ವರದಿಯಾಗಿದೆ. ಇದರ ಇನ್ನುಳಿದ ಎರಡು ಕ್ಯಾಮೆರಾಗಳ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಜೊತೆಗೆ ಸೆಲ್ಫಿ ಕ್ಯಾಮೆರಾ ವಿವರ ಕೂಡ ಬಹಿರಂಗವಾಗಿಲ್ಲ. ಹಿಂಭಾಗದ ಕ್ಯಾಮೆರಾದೊಂದಿಗೆ ಎಲ್ಇಡಿ ಫ್ಲ್ಯಾಷ್ ಅನ್ನು ಜೋಡಿಸಲಾಗಿದೆ.

ರಿಯಲ್‌ಮಿ GT5 ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ GT5 ಸ್ಮಾರ್ಟ್‌ಫೋನ್‌ 5240mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯಲ್ಲಿ ಬರಲಿದೆ ಎನ್ನಲಾಗಿದೆ. ಜೊತೆಗೆ ಇದಯ 240W ವೇಗದ ಚಾರ್ಜಿಂಗ್‌ ಬೆಂಬಲಿಸುವ ವಿಶ್ವದ ಮೊದಲ ಫೋನ್‌ ಆಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ರಿಯಲ್‌ಮಿ GT5 ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ GT5 ಸ್ಮಾರ್ಟ್‌ಫೋನ್‌ ಇದೇ ಆಗಸ್ಟ್‌ 28 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಮೊದಲಿಗೆ ಈ ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಮಾತ್ರ ಬಿಡುಗಡೆ ಆಗಲಿದೆ. ನಂತರದ ದಿನಗಳಲ್ಲಿ ಭಾರತವೂ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಕೂಡ ಬಿಡುಗಡೆ ಆಗುವ ನಿರೀಕ್ಷೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟಿರಲಿದೆ? ಇದರ ಕಲರ್‌ ಆಯ್ಕೆಗಳೇನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ.

ಇನ್ನು ಇತ್ತೀಚಿಗೆ ಭಾರತದಲ್ಲಿ ರಿಯಲ್‌ಮಿ ಕಂಪೆನಿ ರಿಯಲ್‌ಮಿ 11 5G ಮತ್ತು ರಿಯಲ್‌ಮಿ 11X 5G ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಿವೆ. ಈ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ 6100+ 5G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಜೊತೆಗೆ ವರ್ಚುವಲ್ RAM ವಿಸ್ತರಣೆಯನ್ನು 16GB ವರೆಗೆ ಬೆಂಬಲಿಸಲಿವೆ.

Best Mobiles in India

English summary
Realme GT 5 Design Revealed: Expected Specs and price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+