ಭಾರತದಲ್ಲಿ Realme GT 6 ಸ್ಮಾರ್ಟ್‌ಫೋನ್ ಲಾಂಚ್; 5,500mAh ಬ್ಯಾಟರಿ ಜೊತೆಗೆ ಅತ್ಯಾಕರ್ಷಕ ಫೀಚರ್ಸ್
ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಹುಟ್ಟಿಹಾಕಿದ್ದ Realme GT 6 ಸ್ಮಾರ್ಟ್‌ಫೋನ್ ಅನ್ನು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುವಾರ ಬಿಡುಗಡೆ ಮಾಡಲಾಗಿದೆ. ಇದೀಗ ಬಿಡುಗಡೆಯಾಗಿರುವ GT ಸರಣಿಯ ಸ್ಮಾರ್ಟ್‌ಫೋನ್ Qualcomm ನ ಸ್ನಾಪ್‌ಡ್ರಾಗನ್ 8s Gen 3 SoC ನಲ್ಲಿ ಕಾರ್ಯ ನಿರ್ವಹಿಸಲಿದೆ ಹಾಗೂ ಸ್ಯಾಮ್‌ಸಂಗ್ ಮತ್ತು ಗೂಗಲ್ ಸ್ಮಾರ್ಟ್‌ಫೋನ್‌ಗಳಂತೆಯೇ ಗಮನಾರ್ಹ AI ಆಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. Realme GT 6 ಜನರೇಟಿವ್ AI (Gen AI) ವೈಶಿಷ್ಟ್ಯಗಳನ್ನು ಒಳಗೊಂಡಿರುವ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಸಹ ಆಗಿದೆ.
ಜೊತೆಗೆ ಈ ಸ್ಮಾರ್ಟ್‌ಫೋನ್ ಫುಲ್ HD+ ರೆಸಲ್ಯೂಶನ್ ಜೊತೆಗೆ AMOLED ಡಿಸ್‌ಪ್ಲೇ ಹೊಂದಿದೆ ಮತ್ತು 50MP Sony LYT 808 ಪ್ರಾಥಮಿಕ ಸೆನ್ಸಾರ್ ಕ್ಯಾಮೆರಾ, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಇದು 120W SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿ ಹೊಂದಿದೆ.

Realme GT 6 ಬೆಲೆ, ಲಭ್ಯತೆ:
ಈ ಸ್ಮಾರ್ಟ್‌ಫೋನ್‌ನ ಮೂಲ ವೇರಿಯಂಟ್ ಆಗಿರುವ 8GB + 256GB ಮೊಬೈಲ್‌ನ ಬೆಲೆ 40,999 ರೂ. ಗಳಾಗಿವೆ. 12GB + 256GB ಮಾದರಿಯ ಬೆಲೆ ರೂ. 42,999 ಮತ್ತು 16GB + 512GB ಹೊಂದಿರುವ ಟಾಪ್ ಎಂಡ್ ರೂಪಾಂತರವು 44,999 ರೂ. ಬೆಲೆ ಹೊಂದಿದೆ.
ಹೊಸದಾಗಿ ಪ್ರಾರಂಭಿಸಿರುವ Realme GT 6 ಜೂನ್ 20ರ ಮಧ್ಯಾಹ್ನ 2.30 ರಿಂದ ಜೂನ್ 24ರ 11.59 ರವರೆಗೆ ಕಂಪನಿಯ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಪ್ರೀ ಬುಕಿಂಗ್ ಇರಲಿದೆ. ಫೋನ್ ಅನ್ನು ಮುಂಗಡವಾಗಿ ಆರ್ಡರ್ ಮಾಡುವ ಗ್ರಾಹಕರು ಆರು ತಿಂಗಳ ಸ್ಕ್ರೀನ್ ಡ್ಯಾಮೇಜ್ ಇನ್ಶೂರೆನ್ಸ್ ಪಡೆಯಬಹುದು ಮತ್ತು ರೂ. 4,000 ವರೆಗೆ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು Realme ನೀಡುತ್ತಿದೆ. ಎಕ್ಸ್‌ಚೇಂಜ್ ಮೇಲೆ ಹೆಚ್ಚುವರಿಯಾಗಿ 1,000 ರೂ ರಿಯಾಯಿತಿ ಪಡೆಯಬಹುದು ಮತ್ತು 12 ತಿಂಗಳವರೆಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದ EMI ಆಯ್ಕೆಗಳನ್ನು ಪಡೆಯಬಹುದಾಗಿದೆ.
Realme GT 6 ವಿಶೇಷತೆಗಳು:
ಇದು ಆಂಡ್ರಾಯ್ಡ್ 14 ಆಧಾರಿತ Realme UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.78 ಇಂಚಿನ ಫುಲ್ HD+ (1,264x2,780 ಪಿಕ್ಸೆಲ್‌ಗಳ) 8T LTPO ಅಮೋಲ್ಡ್ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, HDR 10+ ಬೆಂಬಲ ಮತ್ತು ಡಾಲ್ಬಿ ವಿಷನ್ ಬೆಂಬಲ ಹೊಂದಿದೆ. ಡಿಸ್‌ಪ್ಲೇ 6,000 ನಿಟ್ಸ್‌ಗಳ ಗರಿಷ್ಟ ಬ್ರೈಟ್‌ನೆಸ್ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿರಲಿದೆ. ಹೊಸ ಫೋನ್ 4nm ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s Gen 3 SoC ಯಿಂದ ಚಾಲಿತವಾಗಿದೆ ಜೊತೆಗೆ 16GB RAM ಮತ್ತು 512B ವರೆಗಿನ ಗರಿಷ್ಠ ಸ್ಟೋರೆಜ್ ಸಾಮರ್ಥ್ಯ ಹೊಂದಿದೆ. ಇದು ಕೂಲಿಂಗ್ ದಕ್ಷತೆಯನ್ನು ಹೆಚ್ಚಿಸಲು 10,014mm ಚದರ 3D ಟೆಂಪರ್ಡ್ ಡ್ಯುಯಲ್ VC ವ್ಯವಸ್ಥೆಯನ್ನು ಹೊಂದಿದೆ.
ಕ್ಯಾಮೆರಾ:
ಈ ಸ್ಮಾರ್ಟ್‌ಫೋನ್ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಘಟಕ ಹೊಂದಿದ್ದು, 50MP Sony LYT 808 ಸೆನ್ಸಾರ್, f/1.69 ಅಪರ್ಚರ್ ಮತ್ತು OIS ಬೆಂಬಲ ಹೊಂದಿದೆ. ಕ್ಯಾಮೆರಾ ಸೆಟಪ್ 50MP ಸ್ಯಾಮ್‌ಸಂಗ್ JN5 ಟೆಲಿಫೋಟೋ ಸೆನ್ಸಾರ್ ಮತ್ತು 8MP ಸೋನಿ IMX355 ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಸೆಲ್ಫಿ ಕ್ಯಾಮೆರಾ: ಸೆಲ್ಫಿ ಮತ್ತು ವೀಡಿಯೊ ಚಾಟ್‌ಗಳಿಗಾಗಿ ಇದು ಮುಂಭಾಗದಲ್ಲಿ f/2.45 ದ್ಯುತಿರಂಧ್ರದೊಂದಿಗೆ 32MP ಕ್ಯಾಮೆರಾ ಹೊಂದಿದೆ.
ಕ್ಯಾಮೆರಾ ಸೆಟಪ್ ಡಾಲ್ಬಿ ವಿಷನ್ ಬೆಂಬಲದೊಂದಿಗೆ 30fps ನಲ್ಲಿ 4K ವೀಡಿಯೊ ಸೆರೆ ಹಿಡಿಯಬಹುದಾಗಿದೆ. ಇದು ಮೀಸಲಾದ AI ನೈಟ್ ವಿಷನ್ ಮೋಡ್ ಅನ್ನು ನೀಡುತ್ತದೆ. AI ಸ್ಮಾರ್ಟ್ ರಿಮೂವಲ್ ಮತ್ತು AI ಸ್ಮಾರ್ಟ್ ಲೂಪ್‌ನಂತಹ ಹಲವಾರು ಇತರ AI ಆಧಾರಿತ ವೈಶಿಷ್ಟ್ಯಗಳನ್ನು ಹ್ಯಾಂಡ್‌ಸೆಟ್ ಹೊಂದಿದೆ. ಇದು ಫೋಟೋಗಳಿಂದ ಅನಗತ್ಯ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
Realme GT 6 ನ ಕನೆಕ್ಟಿವಿಟಿ ಆಯ್ಕೆಗಳು:
ಬ್ಲೂಟೂತ್ 5.4, GPS, NFC ಮತ್ತು Wi-Fi 6 ಸೇರಿವೆ. ಇದು X ಆಕ್ಸಿಸ್ ಲೀನಿಯರ್ ಮೋಟಾರ್‌ನೊಂದಿಗೆ ಬರುತ್ತದೆ ಮತ್ತು ಹೈ-ರೆಸ್ ಪ್ರಮಾಣೀಕರಣವನ್ನು ಹೊಂದಿದೆ. GT 6 ಡ್ಯುಯಲ್ ಮೈಕ್ರೊಫೋನ್‌ಗಳನ್ನು ಸಹ ಹೊಂದಿದೆ. ಇದು ಸ್ಮಾರ್ಟ್‌ಫೋನ್ ಅನ್‌ಲಾಕ್ ಮಾಡಲು ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ.
Realme GT 6 ಬ್ಯಾಟರಿ: 120W ಚಾರ್ಜಿಂಗ್ ಬೆಂಬಲದೊಂದಿಗೆ 5,500mAh ಬ್ಯಾಟರಿಯನ್ನು ಹೊಂದಿದೆ. ಈ ವೇಗದ ಚಾರ್ಜಿಂಗ್ ತಂತ್ರಜ್ಞಾನವು ಹತ್ತು ನಿಮಿಷಗಳಲ್ಲಿ ಬ್ಯಾಟರಿಯನ್ನು ಶೂನ್ಯದಿಂದ 50 ಪ್ರತಿಶತದವರೆಗೆ ಚಾರ್ಜ್ ಮಾಡುತ್ತದೆ. 28 ನಿಮಿಷಗಳಲ್ಲಿ ಹ್ಯಾಂಡ್‌ಸೆಟ್ ಅನ್ನು ಶೂನ್ಯದಿಂದ 100 ಪ್ರತಿಶತಕ್ಕೆ ಚಾರ್ಜ್ ಮಾಡುತ್ತದೆ. ಮತ್ತು ಒಂದೇ ಚಾರ್ಜ್‌ನಲ್ಲಿ 46 ಗಂಟೆಗಳ ಟಾಕ್ ಟೈಮ್ ಮತ್ತು ಎಂಟು ಗಂಟೆಗಳ PUBG ಗೇಮ್‌ಪ್ಲೇ ಮಾಡಬಹುದಾಗಿದೆ.


Click it and Unblock the Notifications








