Home
ಸುದ್ದಿಜಾಲ

Realme GT 6 Vs GT 6T: ಈ ಫೋನ್‌ಗಳಲ್ಲಿ ಯಾವುದು ಬೆಸ್ಟ್‌? ಇಲ್ಲಿದೆ ಫುಲ್ ಡಿಟೇಲ್ಸ್!

Realme ಸಂಸ್ಥೆ ಒಂದು ತಿಂಗಳ ಅಂತರದಲ್ಲಿ ತನ್ನ GT ಸರಣಿಯು ಎರಡು ನೂತನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಈ ವರ್ಷ ಭಾರತದಲ್ಲಿ ಪುನರಾಗಮನ ಮಾಡಿದೆ. Realme GT 6T ಯನ್ನು ಮೇ 22ರಂದು ಮತ್ತು Realme GT 6 ಅನ್ನು ಜೂನ್ 20 ರಂದು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 6.78 ಡಿಸ್‌ಪ್ಲೇ ಮತ್ತು 5500mAh ಬ್ಯಾಟರಿಯನ್ನು 120W ಫಾಸ್ಟ್ ಚಾರ್ಜಿಂಗ್‌ ಹೊಂದಿವೆ. ಇದರ ಹೊರತಾಗಿಯೂ ಈ ಸ್ಮಾರ್ಟ್‌ಫೋನ್‌ಗಳು ಕೆಲವು ವ್ಯತ್ಯಾಸಗಳನ್ನು ಹೊಂದಿವೆ. ಆ ರೀತಿಯಾದ ವ್ಯತ್ಯಾಸಗಳನ್ನು ತಿಳಿಯಲು ಈ ಎರಡು ಮೊಬೈಲ್‌ಗಳ ಹೋಲಿಕೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ.

Realme GT 6 Vs Realme GT 6T ವಿನ್ಯಾಸ: GT 6 ಮತ್ತು GT 6T ವಿನ್ಯಾಸದಲ್ಲಿ ಬಹುತೇಕ ಒಂದೇ ರೀತಿ ಕಾಣುತ್ತವೆ, ಆದರೆ ಅವುಗಳ ನಿರ್ಮಾಣ ಗುಣಮಟ್ಟದಲ್ಲಿ ಪ್ರಮುಖ ವ್ಯತ್ಯಾಸಗಳಿವೆ. GT 6 ಪ್ರೀಮಿಯಂ ಗ್ಲಾಸ್ ಹಿಂಭಾಗವನ್ನು ಹೊಂದಿದೆ, ಆದರೆ GT 6T ಪ್ಲಾಸ್ಟಿಕ್‌ನ ಹಿಂಭಾಗ ಹೊಂದಿದೆ. ಇದರ ಹೊರತಾಗಿ ತೂಕದ ವ್ಯತ್ಯಾಸ ನೋಡುವುದಾದರೆ GT 6 199 ಗ್ರಾಂ ಮತ್ತು GT 6T 191 ಗ್ರಾಂ. ತೂಕ ಹೊಂದಿದೆ ಒಜತೆಗೆ GT 6 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಹೊಂದಿದ್ದರೆ, GT 6T ಹೊಂದಿರುವುದಿಲ್ಲ.

Realme GT 6 Vs GT 6T: ಈ ಫೋನ್‌ಗಳಲ್ಲಿ ಯಾವುದು ಬೆಸ್ಟ್‌?

Realme GT 6 Vs Realme GT 6T ಡಿಸ್‌ಪ್ಲೇ: ಎರಡೂ ಮಾದರಿಗಳು 6.78 ಇಂಚಿನ LTPO AMOLED ಡಿಸ್‌ಪ್ಲೇ ಜೊತೆಗೆ 120Hz ಸ್ಕ್ರೀನ್ ರಿಫ್ರೆಶ್ ರೇಟ್, HDR10+ ಬೆಂಬಲ ಮತ್ತು 1,000nits ಬ್ರೈಟ್‌ನೆಸ್ ಹೊಂದಿವೆ. ಅವುಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ, 1.5k ರೆಸಲ್ಯೂಶನ್ ಮತ್ತು 450ppi ಸಾಂದ್ರತೆಯನ್ನು ಸಹ ಹೊಂದಿವೆ.

Realme GT 6 Vs Realme GT 6T ಕ್ಯಾಮೆರಾ: GT 6 ಇದು 50MP ಮುಖ್ಯ ಲೆನ್ಸ್, 50MP ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಉತ್ತಮ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. GT 6T ಟೆಲಿಫೋಟೋ ಲೆನ್ಸ್ ಅನ್ನು ಹೊಂದಿಲ್ಲ ಆದರೆ ಉಳಿದ ಕ್ಯಾಮರಾ ಸೆಟಪ್ ಒಂದೇ ರೀತಿಯಲ್ಲಿದೆ. ಎರಡೂ ಫೋನ್‌ಗಳು 60fps ನಲ್ಲಿ 4K ವೀಡಿಯೊಗಳನ್ನು ಶೂಟ್ ಮಾಡಬಹುದು ಮತ್ತು ಸೆಲ್ಫಿಗಳಿಗಾಗಿ 32MP ಮುಂಭಾಗದ ಕ್ಯಾಮೆರಾ ಹೊಂದಿವೆ.

Realme GT 6 Vs Realme GT 6T ಕಾರ್ಯಕ್ಷಮತೆ: ಎರಡು ಫೋನ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಕಾರ್ಯಕ್ಷಮತೆ GT 6T ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7+ Gen 3 ಚಿಪ್‌ಸೆಟ್‌ನೊಂದಿಗೆ ಮಧ್ಯಮ ಶ್ರೇಣಿಯ ಕಾರ್ಯಕ್ಷಮತೆಯನ್ನು ಹೊಂದಿದ್ದರೆ, ಆದರೆ GT 6 ಸ್ನಾಪ್‌ಡ್ರಾಗನ್ 8s Gen 3 SoC ಜೊತೆಗೆ ಹೆಚ್ಚು ಶಕ್ತಿಶಾಲಿಯಾಗಿದೆ. GT 6T ಇದು 12GB RAM ಮತ್ತು 512GB ಸಂಗ್ರಹ ಸಾಮರ್ಥ್ಯ ಹೊಂದಿದೆ ಮತ್ತು GT 6 ಇದು 16GB RAM ಮತ್ತು 512GB ಸಂಗ್ರಹ ಸಾಮರ್ಥ್ಯ ಹೊಂದಿದೆ. ಎರಡೂ ಕೂಡ ಆಂಡ್ರಾಯ್ಡ್ 14 OS ನಲ್ಲಿ Realme UI 5.0 ಜೊತೆಗೆ ರನ್ ಆಗುತ್ತವೆ.

Realme GT 6 Vs Realme GT 6T ಬ್ಯಾಟರಿ: ಎರಡೂ ಫೋನ್‌ಗಳು 120W ವೈರ್ಡ್ ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5,500mAh ಬ್ಯಾಟರಿಯನ್ನು ಹೊಂದಿವೆ, ಸುಮಾರು 10 ನಿಮಿಷಗಳಲ್ಲಿ 50 ಪ್ರತಿಶತದವರೆಗೆ ಚಾರ್ಜ್‌ ಮತ್ತು ಅರ್ಧ ಗಂಟೆಯೊಳಗೆ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ.

Realme GT 6 Vs Realme GT 6T ತೀರ್ಮಾನ: Realme GT 6 ಬೆಲೆ 40,999 ರೂ. ಆದರೆ GT 6T 30,999 ರೂ.ಗಳಿಂದ ಪ್ರಾರಂಭವಾಗುತ್ತದೆ ಅಂದರೆ GT 6T ಸ್ಮಾರ್ಟ್‌ಫೋನ್‌ ಖರೀದಿಸಿದರೆ ನೀವು ಬರೋಬ್ಬರಿ 10,000 ರೂ. ಉಳಿತಾಯ ಮಾಡಬಹುದಾಗಿದೆ. GT 6 ಪ್ರೀಮಿಯಂ ಬಿಲ್ಡ್, ಟೆಲಿಫೋಟೋ ಲೆನ್ಸ್ ಮತ್ತು ಫ್ಲ್ಯಾಗ್‌ಶಿಪ್ ತರಹದ ಕಾರ್ಯಕ್ಷಮತೆ ಸೇರಿದಂತೆ ಉತ್ತಮ ಸ್ಪೆಕ್ಸ್ ಅನ್ನು ನೀಡುತ್ತದೆ.

ಈ ಎಲ್ಲಾ ಹೋಲಿಕೆಗಳ ಬಳಿಕ ನೋಡುವುದಾದರೆ, 4nm ಪ್ರಕ್ರಿಯೆಯ ಆಧಾರದ ಮೇಲೆ ಎರಡೂ ಹೊಸ ಚಿಪ್‌ಗಳನ್ನು ಹೊಂದಿರುವುದರಿಂದ ದೈನಂದಿನ ಬಳಕೆಯ ಕಾರ್ಯಕ್ಷಮತೆಯ ವ್ಯತ್ಯಾಸವು ಹೆಚ್ಚು ಗಮನಕ್ಕೆ ಬರುವುದಿಲ್ಲ. ನಿಮಗೆ ಟೆಲಿಫೋಟೋ ಲೆನ್ಸ್ ಅಗತ್ಯವಿಲ್ಲದಿದ್ದರೆ GT 6T ಉತ್ತಮ ಆಯ್ಕೆಯಾಗಲಿದೆ.

Best Mobiles in India

English summary
Realme has launched two new smartphones of its GT series within a month. Let's know some of the differences of these smartphones in this article
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+