ಭಾರತದಲ್ಲಿ Realme GT 7 ಮತ್ತು GT 7T ಮಾರಾಟ ಆರಂಭ: ಏನೆಲ್ಲಾ ಕೊಡುಗೆಗಳು ನೋಡಿ!
ಕಳೆದ ವಾರ ದೇಶದಲ್ಲಿ ಬಿಡುಗಡೆ ಮಾಡಲಾದ Realme GT 7 ಮತ್ತು Realme GT 7T ಸ್ಮಾರ್ಟ್‌ಫೋನ್‌ಗಳು ಈಗ ಭಾರತದಲ್ಲಿ ಖರೀದಿಗೆ ಲಭ್ಯವಿದೆ. Realme GT 7 ಮತ್ತು Realme GT 7T ಪ್ರಸ್ತುತ ರಿಯಲ್‌ಮಿ ಇಂಡಿಯಾ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಮಾರಾಟಕ್ಕೆ ಬಂದಿದ್ದು, 3,000 ರೂ. ಬ್ಯಾಂಕ್ ರಿಯಾಯಿತಿ ಮತ್ತು 6,000 ರೂ. ವಿನಿಮಯ ರಿಯಾಯಿತಿಯನ್ನು ಒದಗಿಸಲಾಗಿದೆ. ಇದಲ್ಲದೆ, Realme GT 7 ಸರಣಿ ಸ್ಮಾರ್ಟ್‌ಫೋನ್‌ಗಳ ಖರೀದಿಯ ಮೇಲೆ ಖರೀದಿದಾರರು ಒಂಬತ್ತು ತಿಂಗಳುಗಳವರೆಗೆ ಯಾವುದೇ ವೆಚ್ಚವಿಲ್ಲದ ಇಎಂಐಗಳನ್ನು ಪಡೆಯಬಹುದು ಎಂದು ರಿಯಲ್‌ಮಿ ಕಂಪೆನಿ ತಿಳಿಸಿದೆ. Realme GT 7 ಖರೀದಿಯ ಮೇಲೆ ಯಾವುದೇ ವೆಚ್ಚವಿಲ್ಲದೆ 4,444 ರೂ. ಮತ್ತು Realme GT 7T ಖರೀದಿಗೆ 3,889 ರೂ.ಗಳ ಇಎಂಐ ಆಯ್ಕೆ ನೀಡಲಾಗಿದೆ. ಜೊತೆಗೆ ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ರೂ. 1,199 ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಹಾಗಾದರೆ, ಹಾಗಾದರೆ, Realme GT ಸರಣಿಯಲ್ಲಿ ಬಿಡುಗಡೆಯಾಗಿರುವ Realme GT 7, Realme GT 7T, ಮತ್ತು ವಿಶೇಷವಾದ Realme GT 7 Dream ಆವೃತ್ತಿ ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.
Realme GT ಸರಣಿ: ಬೆಲೆ
Realme GT 7 ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ: 8GB RAM + 256GB ಸಂಗ್ರಹಣೆ: ರೂ. 39,999, 12GB RAM + 256GB ಸಂಗ್ರಹಣೆ: ರೂ. 42,999, 12GB RAM + 512GB ಸಂಗ್ರಹಣೆ: ರೂ. 46,999 ಇದು ಐಸ್‌ಸೆನ್ಸ್ ಕಪ್ಪು ಮತ್ತು ಐಸ್‌ಸೆನ್ಸ್ ನೀಲಿ ಬಣ್ಣಗಳಲ್ಲಿ ಲಭ್ಯವಿದೆ.
Realme GT 7T ಅನ್ನು ಸಹ ಮೂರು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ: 8GB RAM + 256GB ಸಂಗ್ರಹಣೆ: ರೂ. 34,999, 12GB RAM + 256GB ಸಂಗ್ರಹಣೆ: ರೂ. 37,999, 12GB RAM + 512GB ಸಂಗ್ರಹಣೆ: ರೂ. 41,999ಇದು ಐಸ್‌ಸೆನ್ಸ್ ಬ್ಲಾಕ್, ಐಸ್‌ಸೆನ್ಸ್ ಬ್ಲೂ ಮತ್ತು ರೇಸಿಂಗ್ ಹಳದಿ ಬಣ್ಣಗಳಲ್ಲಿ ಲಭ್ಯವಿದೆ.
Realme GT 7 Dream ಆವೃತ್ತಿಯನ್ನು ಏಕೈಕ ಆಸ್ಟನ್ ಮಾರ್ಟಿನ್ ರೇಸಿಂಗ್ ಗ್ರೀನ್ ಬಣ್ಣದಲ್ಲಿ ಪರಿಚಯಿಸಲಾಗಿದೆ. ಇದು 16GB RAM + 512GB ಸಂಗ್ರಹಣೆಯೊಂದಿಗೆ ರೂ. 49,999 ಬೆಲೆಯಲ್ಲಿ ಲಭ್ಯವಿದೆ. Realme GT 7 Dream ಆವೃತ್ತಿಯು ಮಾತ್ರ ಜೂನ್ 13 ರಿಂದ ಮಾರಾಟಕ್ಕೆ ಬರಲಿದೆ.
Realme GT 7 ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
Realme GT 7 ಸ್ಮಾರ್ಟ್‌ಫೋನ್ Android 15 ಆಧಾರಿತ Realme UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.78-ಇಂಚಿನ 1.5K (1,264x2,780 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 6,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 360Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 120Hz ರಿಫ್ರೆಶ್ ದರವನ್ನು ಒದಗಿಸುತ್ತದೆ. ಪರದೆಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯೊಂದಿಗೆ ಬಂದಿದೆ. ಈ ಫೋನ್ ಆಕ್ಟಾ-ಕೋರ್ 4nm MediaTek Dimensity 9400e ಚಿಪ್‌ಸೆಟ್ ಅನ್ನು ಹೊಂದಿದ್ದು, ಇದು ಭಾರತದಲ್ಲಿ ಈ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. PUBG ಮತ್ತು BGMI ನಂತಹ ಆಟಗಳಿಗೆ 120fps ಫ್ರೇಮ್ ದರವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ, Realme GT 7 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ, ಇದರಲ್ಲಿ OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ Sony IMX906 ಮುಖ್ಯ ಕ್ಯಾಮೆರಾ, 50-ಮೆಗಾಪಿಕ್ಸೆಲ್ S5KJN5 ಟೆಲಿಫೋಟೋ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ OV08D10 ಅಲ್ಟ್ರಾ-ವೈಡ್ ಕ್ಯಾಮೆರಾಗಳಿವೆ. ಸೆಲ್ಫಿಗಳಿಗಾಗಿ, ಇದು 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಹಿಂಭಾಗದ ಕ್ಯಾಮೆರಾ 120fps ನಲ್ಲಿ 4K ಸ್ಲೋ-ಮೋಷನ್ ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತರೆ, ಮುಂಭಾಗದ ಕ್ಯಾಮೆರಾ 60fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳಲ್ಲಿ, Realme GT 7 ಸ್ಮಾರ್ಟ್‌ಫೋನ್ ಬ್ಲೂಟೂತ್ 5.4, ಡ್ಯುಯಲ್-ಬ್ಯಾಂಡ್ GPS, NFC ಮತ್ತು Wi-Fi 7 ಅನ್ನು ಒಳಗೊಂಡಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69 ರೇಟಿಂಗ್ ಹೊಂದಿದೆ. AI ಗ್ಲೇರ್ ರಿಮೂವಲ್, AI ಲ್ಯಾಂಡ್‌ಸ್ಕೇಪ್ + ಮತ್ತು AI ಟ್ರಾನ್ಸ್‌ಲೇಟರ್‌ನಂತಹ ಹಲವಾರು AI-ಆಧಾರಿತ ವೈಶಿಷ್ಟ್ಯಗಳನ್ನು ಸಹ ಒದಗಿಸುತ್ತದೆ. Realme GT 7 7,000mAh ಬ್ಯಾಟರಿಯನ್ನು ಹೊಂದಿದ್ದು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒದಗಿಸುತ್ತದೆ. ಕಂಪನಿಯ ಪ್ರಕಾರ, ಇದು ಒಂದೇ ಚಾರ್ಜ್‌ನಲ್ಲಿ 63.43 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ ಮತ್ತು 20.66 ಗಂಟೆಗಳ YouTube ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ. ಬ್ಯಾಟರಿಯನ್ನು 1 ರಿಂದ 100% ಗೆ 40 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು. ಇದು ಸ್ಮಾರ್ಟ್ ಬೈಪಾಸ್ ಚಾರ್ಜಿಂಗ್ ವಿಧಾನವನ್ನು ಒಳಗೊಂಡಿದ್ದು, ಇದು ಮದರ್‌ಬೋರ್ಡ್‌ಗೆ ನೇರವಾಗಿ ವಿದ್ಯುತ್ ನೀಡುವ ಮೂಲಕ ಹೆಚ್ಚಿನ ತಾಪಮಾನ ಮತ್ತು ಗೇಮಿಂಗ್ ಸಂದರ್ಭಗಳಲ್ಲಿ ಬ್ಯಾಟರಿ ಸವೆತವನ್ನು ಕಡಿಮೆ ಮಾಡುತ್ತದೆ. ಫೋನ್ 162.42x76.13x8.30mm ಅಳತೆ ಮತ್ತು 206 ಗ್ರಾಂ ತೂಕ ಹೊಂದಿದೆ.

Realme GT 7T ವೈಶಿಷ್ಟಗಳು
Realme GT 7T ಸ್ಮಾರ್ಟ್‌ಫೋನ್ Realme GT 7 ನಂತೆಯೇ ಸಿಮ್, ಸಾಫ್ಟ್‌ವೇರ್, ಸೆಲ್ಫಿ ಕ್ಯಾಮೆರಾ, ಬ್ಯಾಟರಿ ಮತ್ತು ಚಾರ್ಜಿಂಗ್ ವೇಗವನ್ನು ಹಂಚಿಕೊಳ್ಳುತ್ತದೆ. ಇದು 120Hz ರಿಫ್ರೆಶ್ ದರ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.80-ಇಂಚಿನ (1,280x2,800 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ MediaTek Dimensity 8400-Max ಚಿಪ್‌ಸೆಟ್, 12GB RAM ಮತ್ತು 512GB ವರೆಗಿನ ಸಂಗ್ರಹಣೆಯೊಂದಿಗೆ ಸಜ್ಜುಗೊಂಡಿದೆ. ಉತ್ತಮ ಉಷ್ಣ ನಿರ್ವಹಣೆಗೆ 7,700mm² ಸಿಂಗಲ್-ಯೂನಿಟ್ ವೇಪರ್ ಚೇಂಬರ್ ಅನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, Realme GT 7T ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 50-ಮೆಗಾಪಿಕ್ಸೆಲ್ Sony IMX896 ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ OV08D10 ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಒಳಗೊಂಡಿದೆ. ಸಂಪರ್ಕ ಆಯ್ಕೆಗಳಲ್ಲಿ ಬ್ಲೂಟೂತ್ 6, ಡ್ಯುಯಲ್-ಬ್ಯಾಂಡ್ GPS, NFC ಮತ್ತು Wi-Fi 6 ಸೇರಿವೆ. Realme GT 7T ಸಹ 120W ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ಹೊಂದಿದೆ. ಇದರ ಅಳತೆ 162.42x75.97x8.88mm ಮತ್ತು ತೂಕ ಸುಮಾರು 205 ಗ್ರಾಂ. Realme GT 7 ಮತ್ತು Realme GT 7T ಎರಡಕ್ಕೂ ನಾಲ್ಕು ವರ್ಷಗಳ OS ಅಪ್‌ಗ್ರೇಡ್‌ಗಳು ಮತ್ತು ಆರು ವರ್ಷಗಳ ಭದ್ರತಾ ನವೀಕರಣಗಳನ್ನು Realme ಭರವಸೆ ನೀಡಿದೆ. ಈ ಫೋನ್‌ಗಳು ಸುಧಾರಿತ ಉಷ್ಣ ಕಾರ್ಯಕ್ಷಮತೆಗಾಗಿ ವಿಶ್ವದ ಮೊದಲ ಗ್ರ್ಯಾಫೀನ್ ಆಧಾರಿತ ಐಸ್‌ಸೆನ್ಸ್ ವಿನ್ಯಾಸವನ್ನು ಹೊಂದಿವೆ.
Realme GT 7 Dream ಆವೃತ್ತಿ ವೈಶಿಷ್ಟ್ಯಗಳು
Realme GT 7 Dream ಆವೃತ್ತಿಯು ವಿಶೇಷ ಆವೃತ್ತಿಯಾಗಿದ್ದು, ಆಸ್ಟನ್ ಮಾರ್ಟಿನ್ ಅರಾಮ್ಕೊ ಫಾರ್ಮುಲಾ ಒನ್ ತಂಡದ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಆಸ್ಟನ್ ಮಾರ್ಟಿನ್‌ನ ವಿಶಿಷ್ಟ ಹಸಿರು ಬಣ್ಣವನ್ನು ಹೊಂದಿದ್ದು, ಹಿಂಭಾಗದಲ್ಲಿ ಬೆಳ್ಳಿ ರೆಕ್ಕೆ ಲೋಗೋ ಮತ್ತು 'ಫಾರ್ಮುಲಾ ಒನ್ ತಂಡ' ಎಂದು ಬೆಳ್ಳಿಯಲ್ಲಿ ಕೆತ್ತಲಾಗಿದೆ. ಈ ವಿಶೇಷ ಆವೃತ್ತಿಯು F1 ರೇಸ್‌ಕಾರ್ ಸಿಮ್ ಕಾರ್ಡ್ ಪಿನ್ ಮತ್ತು ಆಸ್ಟನ್ ಮಾರ್ಟಿನ್ F1 ರೇಸ್‌ಕಾರ್‌ಗಳನ್ನು ಹೋಲಿಸುವ ಸಿಲ್ವರ್ ವಿಂಗ್ ಫೋನ್ ಕೇಸ್ ಅನ್ನು ಒಳಗೊಂಡ ವಿಶೇಷ ಬಾಕ್ಸ್‌ನಲ್ಲಿ ಬರುತ್ತದೆ. ಇದು ಕಸ್ಟಮ್ ವಾಲ್‌ಪೇಪರ್‌ಗಳು, ಐಕಾನ್‌ಗಳು ಮತ್ತು ಥೀಮ್‌ಗಳನ್ನು ಸಹ ಒದಗಿಸುತ್ತದೆ. Realme GT 7 ನಂತೆ, ಇದು 16GB RAM ಮತ್ತು 512GB ಸಂಗ್ರಹಣೆಯೊಂದಿಗೆ ಬರುತ್ತದೆ. ಒಟ್ಟಾರೆಯಾಗಿ, Realme ಯ ಈ ಹೊಸ GT ಸರಣಿಯು ಶಕ್ತಿಯುತ ಕಾರ್ಯಕ್ಷಮತೆ, ವೇಗದ ಚಾರ್ಜಿಂಗ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸುವ ನಿರೀಕ್ಷೆ ಇದೆ.


Click it and Unblock the Notifications








