Home
ಸುದ್ದಿಜಾಲ

ನಾಳೆ Realme GT 7 Pro ಫಸ್ಟ್ ಸೇಲ್; 3000 ಡಿಸ್ಕೌಂಟ್.. ಬೆಲೆ, ವಿಶೇಷತೆಗಳೇನು?

ರಿಯಲ್‌ಮಿ ಇತ್ತೀಚೆಗೆ ಭಾರತದಲ್ಲಿ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಇದು ರಿಯಲ್‌ಮಿ GT7 ಪ್ರೊ (Realme GT7 Pro) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಂದಹಾಗೆ, ಈ ಮೊಬೈಲ್ ನಾಳೆ (ನವೆಂಬರ್ 29) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಈ ಫೋನನ್ನು ಖರೀದಿಸಬಹುದು. ಕಂಪನಿಯು, ಮುಂಗಡ ಬುಕಿಂಗ್‌ ಮಾಡುವ ಗ್ರಾಹಕರಿಗೆ ಕೆಲವು ಆಫರ್‌ಗಳನ್ನು ನೀಡುತ್ತಿದೆ. ಜೊತೆಗೆ, 3000 ರೂ. ಡಿಸ್ಕೌಂಟ್ ಪಡೆಯಬಹುದು. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರಿಯಲ್‌ಮಿ GT7 ಪ್ರೊ ಮೊಬೈಲ್‌ ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ನೀವು, ಮಾರ್ಸ್ ಆರೆಂಜ್ ಮತ್ತು ಗ್ಯಾಲಕ್ಸಿ ಗ್ರೇ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಲಭ್ಯವಿದೆ. ಇದು 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 512GB ಸ್ಟೋರೇಜ್, 5800mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಸಿದ್ಧವಾಗಿದೆ.

ನಾಳೆ Realme GT 7 Pro ಫಸ್ಟ್ ಸೇಲ್; 3000 ಡಿಸ್ಕೌಂಟ್.. ಬೆಲೆ, ವಿಶೇಷತೆಗಳೇನು?

ರಿಯಲ್‌ಮಿ GT7 ಪ್ರೊ ಫೋನಿನ ಬೆಲೆ ಮತ್ತು ಆಫರ್‌ಗಳು

ಕಂಪನಿಯು ರಿಯಲ್‌ಮಿ GT7 ಪ್ರೊ ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರವನ್ನು 59,999 ರೂ.ಗೆ ಬಿಡುಗಡೆ ಮಾಡಿದೆ. 16GB RAM + 512GB ಸ್ಟೋರೇಜ್ ಆಯ್ಕೆಯ ಬೆಲೆ 65,999 ರೂ. ಆಗಿದೆ. ಮೊದಲ ಮಾರಾಟದ ಪ್ರಯುಕ್ತ ಕಂಪನಿಯು, 3,000 ರೂ. ಬ್ಯಾಂಕ್ ಕಾರ್ಡ್ ಡಿಸ್ಕೌಂಟ್ ಘೋಷಿಸಿದೆ. ಮುಂಗಡವಾಗಿ ಬುಕ್ ಮಾಡಿದರೆ, 2 ವರ್ಷಗಳ ವಾರಂಟಿ ಮತ್ತು 1 ವರ್ಷ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಆಫರ್‌ ಲಭ್ಯವಿದೆ. ಈ ಫೋನ್ ನಾಳೆ (ನ.29) ಮಧ್ಯಾಹ್ನ 12 ಗಂಟೆಗೆ ರಿಯಲ್‌ಮಿ ವೆಬ್‌ಸೈಟ್ ಮತ್ತು ಅಮೆಜಾನ್‌ ಮೂಲಕ ಮಾರಾಟವಾಗಲಿದೆ.

ರಿಯಲ್‌ಮಿ GT7 ಪ್ರೊ: ಟಾಪ್‌ 5 ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ?

ರಿಯಲ್‌ಮಿ GT7 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ 1.5K ಓಎಲ್‌ಇಡಿ ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2780 x 1264 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಬೆಂಬಲ ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ದರ ಮತ್ತು 6500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ಪ್ರೊಸೆಸರ್ ಯಾವುದು?

ಹೊಸ ರಿಯಲ್‌ಮಿ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾಕೋರ್‌ ಪ್ರೊಸೆಸರ್‌ ಹೊಂದಿದೆ. ಇದು ಈ ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಪ್ರೊಸೆಸರ್‌ ಅನ್ನು 3 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್‌ 15 ಆಧಾರಿತ Origin ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.

RAM ಮತ್ತು ಸ್ಟೋರೇಜ್‌

ರಿಯಲ್‌ಮಿ GT7 ಪ್ರೊ ಫೋನ್ ಡೈನಾಮಿಕ್ RAM ತಂತ್ರಜ್ಞಾನವನ್ನು ಹೊಂದಿದೆ. ನೀವು ಭೌತಿಕ RAM ಜೊತೆಗೆ 28GB RAM ಬಳಸಬಹುದು. ಫೋನಿನಲ್ಲಿ 12GB RAM + 256GB ಮತ್ತು 16GB RAM + 512GB ಸ್ಟೋರೇಜ್ ಆಯ್ಕೆ ಲಭ್ಯವಿದೆ.

ನಾಳೆ Realme GT 7 Pro ಫಸ್ಟ್ ಸೇಲ್; 3000 ಡಿಸ್ಕೌಂಟ್.. ಬೆಲೆ, ವಿಶೇಷತೆಗಳೇನು?

ಮೂರು ಅದ್ಭುತ ಕ್ಯಾಮೆರಾಗಳು

ನೂತನ ರಿಯಲ್‌ಮಿ GT7 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಹಾಗೆಯೇ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೋನಿ ಫ್ರಂಟ್ ಕ್ಯಾಮೆರಾ ಲಭ್ಯವಿದೆ.

ಪವರ್‌ಫುಲ್ ಬ್ಯಾಟರಿ

ರಿಯಲ್‌ಮಿ GT7 ಪ್ರೊ ಸ್ಮಾರ್ಟ್‌ಫೋನ್ 5800mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ನೀವು, ಕೇವಲ 11 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ GT7 ಪ್ರೊ ಫೋನ್ ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗೆ IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ, ಬ್ಲೂಟೂತ್ 5.4 ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Realme GT 7 Pro First Sale Start Tomorrow via Amazon: Check price, offers, specs and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+