realme GT 7 Pro ಬಿಡುಗಡೆ ದಿನಾಂಕ ಘೋಷಣೆ; 6500mAh ಬ್ಯಾಟರಿ.. 512GB ಸ್ಟೋರೇಜ್ ಖಚಿತ!
ರಿಯಲ್‌ಮಿ ಪ್ರಿಯರಿಗೆ ಸಿಹಿಸುದ್ದಿ ಇದೆ. ಈ ದಿನಾಂಕವನ್ನು ತಪ್ಪದೇ ನೆನಪಿಟ್ಟುಕೊಳ್ಳಿ. ಹೌದು, ರಿಯಲ್‌ಮಿ (Realme) ತನ್ನ ಹೊಸ ರಿಯಲ್‌ಮಿ GT7 ಪ್ರೊ (Realme GT7 Pro) ಫೋನಿನ ಭಾರತೀಯ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದು ಈಗಾಗಲೇ ಚೀನಾ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಂಪನಿಯು ಈ ತಿಂಗಳು (ನವರಂಬರ್) ಭಾರತದಲ್ಲಿ ಅದ್ಧೂರಿಯಾಗಿ ರಿಲೀಸ್ ಮಾಡಲಿದೆ. ವಿಶೇಷವೆಂದರೆ, ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಂಪನಿಯು ಅಧಿಕೃತ ಟೀಸರ್ ಹಂಚಿಕೊಂಡಿದೆ. ಈ ಮೂಲಕ ರಿಯಲ್‌ಮಿ GT7 ಪ್ರೊ ಅನ್ನು ಭಾರತದಲ್ಲಿ ನವೆಂಬರ್ 26 ರಂದು ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಲಾಂಚ್ ಈವೆಂಟ್ ಆಯೋಜಿಸಲಾಗಿದೆ. ಇದರೊಂದಿಗೆ ನೂತನ ಮೊಬೈಲ್ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಕಂಪನಿಯು ಫೋನಿನ ಮೈಕ್ರೋಸೈಟ್ ಅನ್ನು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಲೈವ್ ಮಾಡಿದೆ. ಫೋನನ್ನು ಕಿತ್ತಳೆ ಬಣ್ಣದಲ್ಲಿ ತೋರಿಸಲಾಗಿದೆ. ಹೊಸ ಟೀಸರ್‌ನಲ್ಲಿ ಯಾವೆಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ ತಿಳಿಯೋಣ ಬನ್ನಿ.

ರಿಯಲ್‌ಮಿ GT7 ಪ್ರೊ ವಿನ್ಯಾಸ
ರಿಯಲ್‌ಮಿ GT7 ಪ್ರೊ ವಿಭಿನ್ನವಾದ ಮಾರ್ಸ್ ವಿನ್ಯಾಸದೊಂದಿಗೆ ಬರಲಿದೆ ಎಂದು ಕಂಪನಿ ಖಚಿತಪಡಿಸಿದೆ. ಇದರಲ್ಲಿ ಮಲ್ಟಿ ಲೇಯರ್ ಆ್ಯಂಟಿ ಗ್ಲೇರ್ ತಂತ್ರಜ್ಞಾನ ಲಭ್ಯವಿರಲಿದೆ. ಫೋನ್ ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ, ಹೈಪರ್ ಇಮೇಜ್ ಪ್ಲಸ್ ತಂತ್ರಜ್ಞಾನದ ಬ್ರ್ಯಾಂಡಿಂಗ್ ಸಹ ಕಾಣಬಹುದು. ಗೀಕ್‌ಬೆಂಚ್ (Geekbench) ಪಟ್ಟಿಯಲ್ಲಿ, ರಿಯಲ್‌ಮಿ GT7 ಪ್ರೊನ ಸಿಂಗಲ್ ಕೋರ್ ಸ್ಕೋರ್ 3,178 ಮತ್ತು ಮಲ್ಟಿ ಕೋರ್ ಸ್ಕೋರ್ 9,558 ಆಗಿದೆ.
ಫೋನಿನಲ್ಲಿವೆ ಹಲವು ಎಐ ಫೀಚರ್ಸ್!
ರಿಯಲ್‌ಮಿ GT7 ಪ್ರೊ ಮೊಬೈಲ್ ಹಲವು ಎಐ (AI) ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ಕಂಪನಿಯು ಸುಧಾರಿತ ಎಐ ಚಾಲಿತ ವೈಶಿಷ್ಟ್ಯಗಳನ್ನು ಅಳವಡಿಸಿದೆ. ಇದು ಎಐ ಸ್ಕೆಚ್ ಟು ಇಮೇಜ್, ಎಐ ಮೋಷನ್ ಡಿಸೇಬಲ್ ತಂತ್ರಜ್ಞಾನ, ಎಐ ಟೆಲಿಫೋಟೋ ಅಲ್ಟ್ರಾ ಕ್ಲಾರಿಟಿ ಮತ್ತು ಎಐ ಗೇಮ್ ಸೂಪರ್ ರೆಸಲ್ಯೂಶನ್ ಸೇರಿದಂತೆ ಇಮೇಜಿಂಗ್ ಮತ್ತು ಗೇಮಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ರಿಯಲ್‌ಮಿ GT7 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಕಂಪನಿಯು ಹಂಚಿಕೊಂಡ ಟೀಸರ್ ಚಿತ್ರವು, ರಿಯಲ್‌ಮಿ GT7 ಪ್ರೊ 8T LTPO ಪ್ಯಾನೆಲ್ ಮತ್ತು 120 ಪ್ರತಿಶತ ಅಲ್ಟ್ರಾ ವೈಡ್ P3 ಬಣ್ಣದ ಹರವುಗಳೊಂದಿಗೆ ಬರುತ್ತದೆ ಎಂದು ಖಚಿತಪಡಿಸುತ್ತದೆ. ಇದು ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಮೊದಲನೆಯದು ಎಂದು ಹೇಳಲಾಗಿದೆ. ಜೊತೆಗೆ, ಫೋನ್ 6,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ರಿಯಲ್‌ಮಿ GT7 ಪ್ರೊ ಮೊಬೈಲ್ ಅನ್ನು ಬಿಡುಗಡೆ ಮಾಡಲಿದೆ. ವರದಿಯ ಪ್ರಕಾರ, ಈ ಫೋನ್ 16GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಆಯ್ಕೆ ಒಳಗೊಂಡಿರುತ್ತದೆ.
ಕ್ಯಾಮೆರಾ ಸೆಟಪ್
ಮುಂಬರುವ ರಿಯಲ್‌ಮಿ GT7 ಪ್ರೊ ಮೊಬೈಲ್ 3X ಆಪ್ಟಿಕಲ್ ಜೂಮ್, 6X ನಷ್ಟವಿಲ್ಲದ ಜೂಮ್ ಮತ್ತು ಟೆಲಿಫೋಟೋ ಕ್ಯಾಮೆರಾ ಮೂಲಕ 120X ಡಿಜಿಟಲ್ ಜೂಮ್ ಸೌಲಭ್ಯವನ್ನು ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ರಿಯಲ್‌ಮಿ GT7 ಪ್ರೊ ಅನ್ನು 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಬೆಂಬಲ ಒದಗಿಸಲಾಗುತ್ತದೆ. ಆದರೆ, ಪಟ್ಟಿಯಲ್ಲಿ ಇದು 100W ಚಾರ್ಜಿಂಗ್‌ನೊಂದಿಗೆ ಕಂಡುಬಂದಿದೆ.


Click it and Unblock the Notifications








