ನಾಳೆ Realme GT 7 Pro ಲಾಂಚ್; 50MP ಟ್ರಿಪಲ್ ಕ್ಯಾಮೆರಾ.. 6500mAh ಬ್ಯಾಟರಿ.. ಬೆಲೆ ಎಷ್ಟು ಗೊತ್ತಾ?
ರಿಯಲ್‌ಮಿ ಪ್ರಿಯರ ಕಾಯುವಿಕೆ ಮುಗಿಯಿತು! ನಾಳೆ ಹೊಸ ರಿಯಲ್‌ಮಿ ಮೊಬೈಲ್ ಗ್ರಾಹಕರ ಕೈ ಸೇರಲಿದೆ. ಹೌದು, ರಿಯಲ್‌ಮಿ ಸಂಸ್ಥೆ ನವೆಂಬರ್ 26 ರಂದು (ನಾಳೆ) ಭಾರತದಲ್ಲಿ ನೂತನ ರಿಯಲ್‌ಮಿ GT7 ಪ್ರೊ (Realme GT7 Pro) ಫೋನನ್ನು ಬಿಡುಗಡೆ ಮಾಡಲಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈಗಾಗಲೇ ಮುಂಗಡ ಬುಕಿಂಗ್ ಸಹ ಪ್ರಾರಂಭವಾಗಿದೆ. ಬನ್ನಿ, ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ರಿಯಲ್‌ಮಿ GT7 ಪ್ರೊ ಮೊಬೈಲ್ ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿದೆ. ಇದೀಗ, ಕಂಪನಿಯು ಭಾರತಕ್ಕೆ ಪರಿಚಯಿಸಲು ಸಜ್ಜಾಗಿದೆ. ಅಮೆಜಾನ್‌ನಲ್ಲಿ ಫೋನಿನ ಮೈಕ್ರೋಸೈಟ್ ಲೈವ್ ಆಗಿದೆ. ಭಾರತದಲ್ಲಿ ಈ ಫೋನಿನ ಬೆಲೆ 40 ಸಾವಿರ ರೂ.ಗಿಂತ ಹೆಚ್ಚಿರಲಿದೆ. ಇದು 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಹೊಂದಿದೆ. ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿರಲಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 6500mAh ಬ್ಯಾಟರಿ ಮತ್ತು 120W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ರಿಯಲ್‌ಮಿ GT7 ಪ್ರೊ ಬೆಲೆ ಎಷ್ಟು?
ರಿಯಲ್‌ಮಿ GT7 ಪ್ರೊ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿದೆ. ಇದರ ಬೆಲೆ 50 ಸಾವಿರ ರೂ.ಗಿಂತ ಹೆಚ್ಚು ಇರಲಿದೆ. ಭಾರತದಲ್ಲಿ ಫೋನಿ ಆರಂಭಿಕ ಬೆಲೆ 39,999 ರೂ. ಇರಲಿದೆ. ಈ ಫೋನ್ 12GB RAM + 256GB ಸ್ಟೋರೇಜ್ ಆಯ್ಕೆ ಹೊಂದಿರಲಿದೆ. ಈ ಫೋನಿನ 16GB RAM ರೂಪಾಂತರವು 55,000 ರೂ.ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ರಿಯಲ್‌ಮಿ GT7 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ GT7 ಪ್ರೊ ಮೊಬೈಲ್ 6.78 ಇಂಚಿನ 8T LTPO ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು ಸ್ಯಾಮ್‌ಸಂಗ್ Eco2 1.5K ಓಎಲ್‌ಇಡಿ ಪಂಚ್ ಹೋಲ್ ಡಿಸ್ಪ್ಲೇ ಆಗಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ, 6000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್, 2000 ನಿಟ್ಸ್ ಜಾಗತಿಕ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ತಂತ್ರಜ್ಞಾನವನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ರಿಯಲ್‌ಮಿ GT7 ಪ್ರೊ ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡುವುದು ಖಚಿತವಾಗಿದೆ. ಈ ಪ್ರೊಸೆಸರ್ ಅನ್ನು 3 ನ್ಯಾನೋಮೀಟರ್ ಫ್ಯಾಬ್ರಿಕೇಶನ್ ಮತ್ತು 64bit ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ OriginOS ನಲ್ಲಿ ಕೆಲಸ ನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆ
ಮುಂಬರುವ ರಿಯಲ್‌ಮಿ GT7 ಸ್ಮಾರ್ಟ್‌ಫೋನ್ 12GB RAM + 256GB ಸ್ಟೋರೇಜ್ ಮತ್ತು 16GB RAM + 512GB ಸ್ಟೋರೇಜ್ ಆಯ್ಕೆ ಒಳಗೊಂಡಿರುತ್ತದೆ.

ಕ್ಯಾಮೆರಾ ಸೆಟಪ್
ನೂತನ ರಿಯಲ್‌ಮಿ GT7 ಪ್ರೊ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದರಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರಲಿದೆ. ಜೊತೆಗೆ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ (ಅಲ್ಟ್ರಾ ವೈಡ್ ಆಂಗಲ್) ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲೊ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ GT7 ಪ್ರೊ ಸ್ಮಾರ್ಟ್‌ಫೋನ್ 6500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ಸಿಲಿಕಾನ್ ಕಾರ್ಬನ್ ಋಣಾತ್ಮಕ ಎಲೆಕ್ಟ್ರೋಡ್ ಬ್ಯಾಟರಿಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ GT7 ಪ್ರೊ ಮೊಬೈಲ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ಮತ್ತು IP68 ರೇಟಿಂಗ್ ಪಡೆದಿದೆ. ಈ ಫೋನ್ ಹೈ ರೆಸ್ ಆಡಿಯೋ, ಓರಿಯಾಲಿಟಿ ಆಡಿಯೋ, ಎಕ್ಸ್ ಆಕ್ಸಿಸ್ ಲೀನಿಯರ್ ಮೋಟಾರ್ ಮತ್ತು ಡ್ಯುಯಲ್ ವಿಸಿ ಹೀಟ್ ಡಿಸ್ಸಿಪೇಶನ್ ಟೆಕ್ನಾಲಜಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ, ಬ್ಲೂಟೂತ್ 5.4 ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








