Home
ಸುದ್ದಿಜಾಲ

ನಾಳೆ ಅಬ್ಬರಿಸಲಿದೆ ಹೊಸ Realme ಫೋನ್; 6500mAh ಬ್ಯಾಟರಿ.. 512GB ಸ್ಟೋರೇಜ್.. ಬೆಲೆ ಎಷ್ಟು?

ರಿಯಲ್‌ಮಿ ತನ್ನ ಬಹುನಿರೀಕ್ಷಿತ ಹೊಸ ಫೋನನ್ನು ನಾಳೆ (ಫೆಬ್ರವರಿ 13) ಬಿಡುಗಡೆ ಮಾಡಲಿದೆ. ಇದು ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿ (Realme GT 7 Pro Racing Edition) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಕಂಪನಿಯು ಈ ಮೊಬೈಲ್‌ನ ಹಲವು ವಿಶೇಷತೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಬಿಡುಗಡೆಗೂ ಮುನ್ನವೇ, ಕೆಲವು ಟೀಸರ್‌ಗಳನ್ನು ಹಂಚಿಕೊಂಡಿದೆ. ಈ ಮೂಲಕ ಮುಂಬರುವ ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೌದು, ಕಂಪನಿಯು ರಿಯಲ್‌ಮಿ ವೈಬೊದಲ್ಲಿ ಕೆಲವು ಪೋಸ್ಟರ್‌ಗಳನ್ನು ಹಂಚಿಕೊಂಡಿದೆ. ಇದರಲ್ಲಿ ಹೊಸ ಫೋನಿನ ಡಿಸ್ಪ್ಲೇ, ಪ್ರೊಸೆಸರ್, ಕೂಲಿಂಗ್ ಸಿಸ್ಟಮ್, ಸ್ಟೋರೇಜ್ ಆಯ್ಕೆ, ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ಸೌಲಭ್ಯದ ಬಗ್ಗೆ ಬಹಿರಂಗಪಡಿಸಲಾಗಿದೆ. ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯು ಅತ್ಯಂತ ಅಗ್ಗದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಮೊಬೈಲ್ ಎಂದು ಹೇಳಲಾಗುತ್ತದೆ. ಇದು 6500mAh ಬ್ಯಾಟರಿ ಹೊಂದಿರುತ್ತದೆ ಮತ್ತು 120W ವೈರ್ಡ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರುತ್ತದೆ.

ನಾಳೆ Realme GT 7 Pro ಲಾಂಚ್; 6500mAh ಬ್ಯಾಟರಿ, 512GB ಸ್ಟೋರೇಜ್; ಬೆಲೆ ನೋಡಿ

ನಾಳೆ ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿ ಬಿಡುಗಡೆ

ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯು ನಾಳೆ (ಫೆಬ್ರವರಿ 13) ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಮೊಬೈಲ್ ಮೊದಲು ಚೀನಾದಲ್ಲಿ ರಿಲೀಸ್ ಆಗಲಿದೆ. ಇದೇ ತಿಂಗಳು ಮಾರಾಟ ಸಹ ಪ್ರಾರಂಭಿಸಲಿದೆ. ಆದರೆ, ರಿಯಲ್‌ಮಿ ಈ ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಮಾಹಿತಿ ನೀಡಿಲ್ಲ. ಈ ಮೊಬೈಲ್ ರಿಯಲ್‌ಮಿ GT 7 ಪ್ರೊ ಮೊಬೈಲ್‌ಗಿಂತ ಹಗುರವಾಗಿರುತ್ತದೆ. ಇದರ ಬೆಲೆಯೂ ಕಡಿಮೆ ಇರಲಿದೆ. ಈ ಫೋನ್ ಸ್ಟಾರ್ ಟ್ರಯಲ್ ಟೈಟಾನಿಯಂ ಮತ್ತು ನೆಪ್ಚೂನ್ ಎಕ್ಸ್‌ಪ್ಲೋರೇಶನ್ ಎಡಿಷನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ರಿಯಲ್‌ಮಿ GT 7 ಪ್ರೊ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯು ಕ್ವಾಡ್ ಕರ್ವ್ಡ್ ಡಿಸ್ಪ್ಲೇ ಹೊಂದಿರಲಿದೆ. ಇದು 6,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 1,600 ನಿಟ್ಸ್‌ ಜಾಗತಿಕ ಬ್ರೈಟ್‌ನೆಸ್ ಬೆಂಬಲ ಪಡೆದಿರಲಿದೆ. ಈ ಡಿಸ್ಪ್ಲೇಯು 2,600Hz ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ. ಇದನ್ನು ಟೂರ್ನಮೆಂಟ್ ಮಟ್ಟದ ಗೇಮಿಂಗ್‌ಗಾಗಿ ತಯಾರಿಸಲಾಗಿದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಫೋನ್ ಆಂಡ್ರಾಯ್ಡ್‌ 15 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತದೆ. ಇದು ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಒಳಗೊಂಡಿರುವ ಅತ್ಯಂತ ಅಗ್ಗದ ಸ್ಮಾರ್ಟ್‌ಫೋನ್ ಆಗಿರಲಿದೆ. ಈ ಸ್ಮಾರ್ಟ್‌ಫೋನ್ 16GB RAM + 512GB ಸ್ಟೋರೇಜ್ ಆಯ್ಕೆ ಹೊಂದಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿರುವ ಎಂದು ಸಾಧ್ಯತೆಯಿದೆ. ರಿಯಲ್‌ಮಿ GT 7 ಪ್ರೊ ಮೊಬೈಲ್ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯ ಸ್ಮಾರ್ಟ್‌ಫೋನ್ 6,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗುತ್ತದೆ. ಈ ಮೊಬೈಲ್ ಗ್ಲೋಬಲ್ ಐಸ್ ಕೋರ್ ಕೂಲಿಂಗ್ ಸಿಸ್ಟಮ್‌ ಒಳಗೊಂಡಿರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ವೈ-ಫೈ, ಬ್ಲೂಟೂತ್ ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರಲಿದೆ.

Best Mobiles in India

English summary
Realme GT 7 Pro Racing Edition key specifications revealed ahead of launch: Here’s What to Expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+