Realme: ಬರ್ತಿದೆ ರಗಡ್ ಫೋನ್; ಬಿಡುಗಡೆ ದಿನಾಂಕ ಘೋಷಣೆ.. 6500mAh ಬ್ಯಾಟರಿ ಖಚಿತ! ಇಷ್ಟೆನಾ ಬೆಲೆ?
ರಿಯಲ್‌ಮಿ ಹೊಸ ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೂಲಕ ತನ್ನ ಅಭಿಮನಿಗಳಿಗೆ ದೊಡ್ಡ ಉಡುಗೊರೆ ನೀಡಿದೆ. ಹೌದು, ಭಾರತದಲ್ಲಿ ರಿಯಲ್‌ಮಿ GT 7 ಪ್ರೊ (Realme GT 7 Pro) ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ. ಈ ಮೊಬೈಲ್ 59,999 ರೂ.ಗಳ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಕ್ಕೆ ಇದೀಗ, ಈಗ ಕಂಪನಿಯು ಈ ಫೋನಿನ ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯನ್ನು (Realme GT 7 Pro Racing Edition) ಪರಿಚಯಿಸುತ್ತಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿ ಫೆಬ್ರವರಿ 13 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಮೊಬೈಲ್ ಮೊದಲು ಚೀನಾದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದೇ ತಿಂಗಳು ಮಾರಾಟ ಸಹ ಪ್ರಾರಂಭಿಸಲಿದೆ. ಆದರೆ, ರಿಯಲ್‌ಮಿ ಈ ವಿಶೇಷ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಈ ಮೊಬೈಲ್ ಭಾರತದಲ್ಲಿ ಲಭ್ಯವಿರುವ ರಿಯಲ್‌ಮಿ GT 7 ಪ್ರೊ ಫೋನಿಗಿಂತ ಹಗುರವಾಗಿರುತ್ತದೆ. ಇದರ ಬೆಲೆಯೂ ಕಡಿಮೆ ಇರುತ್ತದೆ.

ರಿಯಲ್‌ಮಿ GT 7 ಪ್ರೊ ರೇಸಿಂಗ್ ಆವೃತ್ತಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುತ್ತದೆ. ಈ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುತ್ತಿರುವ ಅಗ್ಗದ ಫೋನ್ ಇದಾಗಿದೆ. ಈ ಫೋನನ್ನು 6,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ ಈ ಮೊಬೈಲ್ 120W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿರುತ್ತದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುತ್ತದೆ. ಫೆಬ್ರವರಿ 13 ರಂದು ರಿಯಲ್‌ಮಿ ಜಿಟಿ 7 ಪ್ರೊ ರೇಸಿಂಗ್ ಆವೃತ್ತಿಯ ಬೆಲೆ, ಫೀಚರ್ಸ್ ಬಹಿರಂಗವಾಗಲಿದೆ.
ರಿಯಲ್‌ಮಿ GT 7 ಪ್ರೊ ಬೆಲೆ
ರಿಯಲ್‌ಮಿ GT 7 ಪ್ರೊ ಫೋನಿನ ಬೆಲೆ 59,999 ರೂ. ಆಗಿದೆ. ಇದು 12GB RAM + 256GB ಸ್ಟೋರೇಜ್‌ನೊಂದಿಗೆ ಬರುತ್ತದೆ. 16GB RAM + 512GB ಸ್ಟೋರೇಜ್ ರೂಪಾಂತರವನ್ನು 65,999 ರೂ.ಗಳಿಗೆ ಬಿಡುಗಡೆ ಮಾಡಲಾಗಿದೆ. ನೀವು ಮಾರ್ಸ್ ಆರೆಂಜ್ ಮತ್ತು ಗ್ಯಾಲಕ್ಸಿ ಗ್ರೇ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು.
ರಿಯಲ್‌ಮಿ GT 7 ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ GT 7 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ 1.5k ಡಿಸ್ಪ್ಲೇ ಹೊಂದಿದೆ. ಇದು 2780 x 1264 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು Eco OLED Plus ತಂತ್ರಜ್ಞಾನ ಮತ್ತು 8T LTPO ಪ್ಯಾನೆಲ್‌ನಲ್ಲಿ ನಿರ್ಮಿಸಿರುವ ಕ್ವಾಡ್ ಕರ್ವ್ಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ, 6500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ GT 7 ಪ್ರೊ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿದೆ. ಇದನ್ನು 3 ನ್ಯಾನೋಮೀಟರ್ ಫ್ಯಾಬ್ರಿಕೇಶನ್‌ಗಳಲ್ಲಿ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಒರಿಜಿನ್ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ 12GB RAM + 256GB ಮತ್ತು 16GB RAM + 512GB ಸ್ಟೋರೇಜ್ ಹೊಂದಿದೆ.
ಕ್ಯಾಮೆರಾ ಸೆಟಪ್
ರಿಯಲ್‌ಮಿ GT7 ಪ್ರೊ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ GT7 ಪ್ರೊ ಸ್ಮಾರ್ಟ್‌ಫೋನ್ 5800mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ವೈ-ಫೈ, ಬ್ಲೂಟೂತ್ 5.4 ಮತ್ತು ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








