Home
ಸುದ್ದಿಜಾಲ

ವರ್ಷಾಂತ್ಯಕ್ಕೆ Realme GT 7 Pro ಲಾಂಚ್! Qualcomm Snapdragon 8 Gen 4 ಚಿಪ್‌ಸೆಟ್ ಜೊತೆ ಹಲವು ವಿಶೇಷತೆಗಳು

ಜಾಗತಿಕ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಹೊಂದಿರುವ ರಿಯಲ್‌ಮಿ (Realme) ಸಂಸ್ಥೆ ಇತ್ತೀಚೆಗೆ Realme GT 6 ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಈ ನಡುವೆ ಸಂಸ್ಥೆ ಈ ವರ್ಷದ ಅಂತ್ಯದ ವೇಳೆಗೆ Realme GT 7 Pro ಸರಣಿಯ ನೂತನ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡಲಿದೆ ಎಂದು ಹಲವಾರು ಊಹಾಪೋಹಗಳು ಮತ್ತು ವದಂತಿಗಳು ಆನ್‌ಲೈನ್‌ನಲ್ಲಿ ಹರಿದಾಡಲು ಪ್ರಾರಂಭಿಸಿದೆ. ಹಾಗಿದ್ರೆ ವದಂತಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಹೊಂದಿರಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ವರ್ಷಾಂತ್ಯದ ವೇಳೆಗೆ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ Realme GT 7 Pro ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ ಎಂಬುದರ ಕುರಿತು ಹಲವಾರು ಊಹಾಪೋಹಗಳು ಹರಿದಾಡಲು ಆರಂಭಿಸಿವೆ. ಈ ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್‌ ನ ಡಿಸ್‌ಪ್ಲೇ, Qualcomm Snapdragon 8 Gen 4 ಚಿಪ್‌ಸೆಟ್, 50MP ಕ್ಯಾಮೆರಾ, IP68/IP69 ರೇಟಿಂಗ್ ಸೇರಿದಂತೆ ಅನೇಕ ವಿಶೇಷತೆಗಳನ್ನು ಹೊಂದಿರುವ ಸಾಧ್ಯತೆಗಳಿವೆ ಎಂದು ಟಿಪ್‌ಸ್ಟರ್ ಸುಳಿವು ನೀಡಿದ್ದಾರೆ. ಮುಂಬರಲಿರುವ Realme GT 7 Pro ಇದು Realme GT 5 Pro ನ ಮುಂದುವರೆದ ಸರಣಿಯಾಗಿರಲಿದೆ ಎಂದು ತಿಳಿಸಿದ್ದಾರೆ.

ವರ್ಷಾಂತ್ಯಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme GT 7 Pro ಸ್ಮಾರ್ಟ್‌ಫೋನ್!

ವದಂತಿ ಪ್ರಕಾರ Realme GT 7 Pro ಪ್ರಮುಖ ವಿಶೇಷತೆಗಳು:
ಟಿಪ್‌ಸ್ಟರ್ ಡಿಜಿಟಲ್ ಚಾಟ್ ಸ್ಟೇಷನ್ Weibo ಮೂಲಕ ಮಾಹಿತಿ ನೀಡಿದ್ದು, ಮುಂಬರಲಿರುವ ಸ್ಮಾರ್ಟ್‌ಫೋನ್ Qualcomm Snapdragon 8 Gen 4 SoC ಯೊಂದಿಗೆ ಸಜ್ಜುಗೊಳ್ಳಲಿದೆ ಎಂದು ಮಾಹಿತಿ ಬಹಿರಂಗಪಡಿಸಿದೆ. ಇದು ಇತ್ತೀಚಿನ ವರದಿಯನ್ನು ದೃಢೀಕರಿಸುತ್ತದೆ. ಗಮನಾರ್ಹ ವಿಷಯವೆಂದರೆ ಇನ್ನೂ ಪ್ರಾರಂಭಿಸಬೇಕಾದ Snapdragon 8 Gen 4 SoC ಅನ್ನು Samsung Galaxy S25 ಸರಣಿ, OnePlus Open 2, iQOO 13, ಮತ್ತು Xiaomi 15 ನಂತಹ ಫೋನ್‌ಗಳಲ್ಲಿಯೂ ನಿರೀಕ್ಷಿಸಲಾಗಿದೆ. ಈ ನಡುವೆ Realme GT 5 Pro ಕೂಡ Qualcomm Snapdragon 8 Gen 3 SoC ಯನ್ನೇ ಹೊಂದಿದೆ.

Realme GT 7 Pro ಮುಂಭಾಗದಲ್ಲಿ ಸ್ವಲ್ಪ ಬಾಗಿದ ಅಂಚುಗಳೊಂದಿಗೆ 1.5K ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿರಲಿದೆ ಎಂದು ಟಿಪ್‌ಸ್ಟರ್ ಉಲ್ಲೇಖಿಸಿದ್ದಾರೆ. ಈ ನಡುವೆ ಫೋನ್‌ನ ಹಿಂಭಾಗದ ಫಲಕವು ಮೇಲಿನ ಎಡಭಾಗದಲ್ಲಿ ಚದರ ಆಕಾರದ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.

ಕ್ಯಾಮೆರಾ:
DCS ಪ್ರಕಾರ, ಮುಂಬರುವ Realme ಫೋನ್ 50MP ಮಲ್ಟಿ ಫೋಕಲ್ ಲೆನ್ಸ್ ಮತ್ತು 3x ಪೆರಿಸ್ಕೋಪ್ ಟೆಲಿಫೋಟೋ Sony IMX882 ಸೆನ್ಸಾರ್‌ ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾವನ್ನು ಹೊಂದಿರಬಹುದು. ಇದಲ್ಲದೆ, ಫೋನ್ ಟೆಲಿಫೋಟೋ ಮ್ಯಾಕ್ರೋ ಕ್ಯಾಮೆರಾವನ್ನು ಡಿಚ್ ಮಾಡಲಿದೆ ಎಂದು ತಿಳಿಸಿದೆ.

ಬ್ಯಾಟರಿ:
Realme GT 7 Pro ಸ್ಮಾರ್ಟ್‌ಫೋನ್ ಸುಮಾರು 6,000mAh ಬ್ಯಾಟರಿ ಜೊತೆಗೆ ಬರುವ ನಿರೀಕ್ಷೆ ಇದೆ ಎಂದು ಟಿಪ್‌ಸ್ಟರ್ ಉಲ್ಲೇಖಿಸಿದ್ದಾರೆ, ಹಿಂದಿನ 5,400mAh ಗೆ ಹೋಲಿಸಿದರೆ ಕನಿಷ್ಠ 5,800mAh ಬ್ಯಾಟರಿ. GT 7 Pro 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಬಹುದು ಎಂದು ಸಹ ಉಲ್ಲೇಖಿಸಿದ್ದಾರೆ.

Realme ಫೋನ್ IP68 ರೇಟಿಂಗ್ ಅಥವಾ IP69 ರೇಟಿಂಗ್ ಅನ್ನು ನೀಡಬಹುದು ಎಂದು DCS ತಿಳಿಸಿದೆ. ಇತ್ತೀಚಿನ ವರದಿಯು IP69 ರೇಟಿಂಗ್‌ನಲ್ಲಿ ಸುಳಿವು ನೀಡುತ್ತದೆ. ಇದು ಧೂಳು ನಿರೋಧಕವಾಗಿರಬಹುದು ಮತ್ತು ಹೆಚ್ಚಿನ ಒತ್ತಡ, ಹೆಚ್ಚಿನ ತಾಪಮಾನದ ನೀರಿನ ಜೆಟ್‌ಗಳನ್ನು ತಡೆದುಕೊಳ್ಳುತ್ತದೆ ಎಂದು ಸೂಚಿಸುತ್ತದೆ. ಗಮನಾರ್ಹವಾಗಿ OPPO F27 Pro+ IP69 ರೇಟಿಂಗ್ ಅನ್ನು ಒಳಗೊಂಡಿರುವ ಮೊದಲ ಫೋನ್ ಆಗಿರಲಿದೆ.

Realme GT 7 Pro ಕುರಿತು ಟಿಪ್‌ಸ್ಟರ್ ಬೇರೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ, ಆದರೆ ಇತ್ತೀಚಿನ ವರದಿಗಳು ಇದು ಸಿಂಗಲ್ ಪಾಯಿಂಟ್ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಜೊತೆಗೆ ಬರಬಹುದು ಎಂದು ಸುಳಿವು ನೀಡಿದೆ. ಇದು ಕೆಪ್ಯಾಸಿಟಿವ್ ಫಿಂಗರ್‌ಪ್ರಿಂಟ್ ಸಂವೇದಕಗಳಿಗಿಂತ ಹೆಚ್ಚು ನಿಖರವಾಗಿದೆ ಎಂದು ಹೇಳಲಾಗುತ್ತದೆ. ಹೆಚ್ಚುವರಿಯಾಗಿ, ಇದು ಕನಿಷ್ಠ 16GB RAM ಮತ್ತು 1TB ಆಂತರಿಕ ಸಂಗ್ರಹಣೆಯನ್ನು ನೀಡುವ ಸಾಧ್ಯತೆ ಇದೆ.

Best Mobiles in India

English summary
Many speculations have started doing the rounds about the Realme GT 7 Pro smartphone being launched later this year. The tipster hints that the smartphone is likely to feature a 1.5K resolution display, Qualcomm Snapdragon 8 Gen 4 chipset, 50MP camera, and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+