Home
ಸುದ್ದಿಜಾಲ

7,200mAh ಬ್ಯಾಟರಿ, 'ಸ್ಟ್ರಾ'ದಷ್ಟು ತೆಳುವಾದ Realme GT 7 ರಿಲೀಸ್ ಡೇಟ್ ಫಿಕ್ಸ್!

7,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದರೂ ಸಹ ಅತ್ಯಂತ ತೆಳುವಾದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿರಲಿದೆ ಎನ್ನಲಾದ Realme GT 7 ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕವನ್ನು ಕಂಪನಿಯು ಅಧಿಕೃತವಾಗಿ ಪ್ರಕಟಿಸಿದೆ. ಈ ಸ್ಮಾರ್ಟ್‌ಫೋನ್ ಏಪ್ರಿಲ್ 23 ರಂದು ಚೀನಾದಲ್ಲಿ ಸ್ಥಳೀಯ ಸಮಯ ಸಂಜೆ 4 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1:30) ಅನಾವರಣಗೊಳ್ಳಲಿದೆ ಎಂದು ರಿಯಲ್‌ಮಿ ತನ್ನ ವೈಬೊ ಖಾತೆಯಲ್ಲಿ ತಿಳಿಸಿದ್ದು, ಈ ಸ್ಮಾರ್ಟ್‌ಫೋನ್ ಶಕ್ತಿಯುತ ಮೀಡಿಯಾ ಟೆಕ್ ಡೈಮೆನ್ಸಿಟಿ 9400+ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯು ಈಗಾಗಲೇ ಖಚಿತಪಡಿಸಿದೆ.

ಮುಂಬರುವ ಈ Realme GT 7 ಸ್ಮಾರ್ಟ್‌ಫೋನ್ ಬೃಹತ್ 7,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದರೂ ಸಹ, ಅದರ ದೇಹವು ಗಮನಾರ್ಹವಾಗಿ ತೆಳುವಾಗಿರಲಿದೆ. ಈ ಸ್ಮಾರ್ಟ್‌ಫೋನ್ ಕೇವಲ 8.25mm ದಪ್ಪ ಮತ್ತು 203g ತೂಕವನ್ನು ಹೊಂದಿದೆ ಎಂದು ಕಂಪನಿ ಈಗಾಗಲೇ ತಿಳಿಸಿತ್ತು. ಇಂತಹ ದೊಡ್ಡ ಬ್ಯಾಟರಿಯನ್ನು ಹೊಂದಿರುವ ಫೋನ್ ಈ ಪರಿಮಾಣದಲ್ಲಿರುವುದು ನಿಜಕ್ಕೂ ಅಚ್ಚರಿ ಮೂಡಿಸುವ ಸಂಗತಿಯಾಗಿದ್ದು, ರಿಯಲ್‌ಮಿ ತನ್ನ ಪ್ರಚಾರ ಚಿತ್ರಗಳಲ್ಲಿ Realme GT 7 ಫೋನಿನ ತೆಳುವಾದ ವಿನ್ಯಾಸವನ್ನು ಮತ್ತು ಅದರ ದಪ್ಪವನ್ನು ಸ್ಟ್ರಾ ಮತ್ತು ಜಿಪ್ಪರ್‌ಗೆ ಹೋಲಿಸಿರುವುದು ಗಮನಾರ್ಹವಾಗಿದೆ.

ರಿಯಲ್‌ಮಿ ಉಪಾಧ್ಯಕ್ಷರಾದ ಕ್ಸು ಕ್ವಿ ಚೇಸ್ ಅವರು ಈ ಹಿಂದೆ ದೊಡ್ಡ ಬ್ಯಾಟರಿಯ ಹೊರತಾಗಿಯೂ Realme GT 7 ಸ್ಮಾರ್ಟ್‌ಫೋನ್ ತೆಳುವಾದ ಮತ್ತು ಹಗುರವಾದ ರಚನೆಯನ್ನು ಹೊಂದಿರುತ್ತದೆ ಎಂದು ಹೇಳಿದ್ದರು. ಇಷ್ಟೇ ಅಲ್ಲದೆ, Realme GT 7 ಅತ್ಯಾಧುನಿಕ ಕೂಲಿಂಗ್ ವ್ಯವಸ್ಥೆ ಸಹ ಒಳಗೊಂಡಿರಲಿದೆ. ಅಧಿಕೃತ ಮಾಹಿತಿಯ ಪ್ರಕಾರ, ಈ ಫೋನ್ "ಐಸ್ ಸೆನ್ಸ್" ಎಂಬ ಗ್ರ್ಯಾಫೀನ್-ಬೆಂಬಲಿತ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದು ಗ್ರ್ಯಾಫೀನ್ ಲೇಪಿತ ಫೈಬರ್‌ಗ್ಲಾಸ್ ಹಿಂಭಾಗದ ಫಲಕವನ್ನು ಸಹ ಒಳಗೊಂಡಿರಲಿದ್ದು, ಸಾಮಾನ್ಯ ಗಾಜಿನ ಉಷ್ಣ ವಾಹಕತೆಯನ್ನು ಆರು ಪಟ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

7,200mAh ಬ್ಯಾಟರಿ, 'ಸ್ಟ್ರಾ'ದಷ್ಟು ತೆಳುವಾದ Realme GT 7 ರಿಲೀಸ್ ಡೇಟ್ ಫಿಕ್ಸ್

Realme GT 7 ಸ್ಮಾರ್ಟ್‌ಫೋನ್ ಉತ್ತಮ ಗುಣಮಟ್ಟದ ಡಿಸ್ಪ್ಲೇಯನ್ನು ಸಹ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಕಿರಿದಾದ ಬೆಜೆಲ್‌ಗಳು, ಕಣ್ಣಿನ ರಕ್ಷಣೆ ಮತ್ತು 144Hz ರಿಫ್ರೆಶ್ ದರದೊಂದಿಗೆ ಫ್ಲಾಟ್, ಕಸ್ಟಮೈಸ್ ಮಾಡಿದ BOE ಪ್ಯಾನೆಲ್ ಅನ್ನು ಒಳಗೊಂಡಿರಬಹುದು. ಭದ್ರತೆಗಾಗಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಧೂಳು ಹಾಗೂ ನೀರಿನ ಪ್ರತಿರೋಧಕ್ಕಾಗಿ IP69 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿರುವ ಸಾಧ್ಯತೆ ಇದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಇದು ಆಂಡ್ರಾಯ್ಡ್ 15 ಆಧಾರಿತ "ColorOS ನ ಮಾರ್ಪಡಿಸಿದ ಆವೃತ್ತಿಯನ್ನು" ರನ್ ಮಾಡುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ.

ಈ Realme GT 7 ಸ್ಮಾರ್ಟ್‌ಫೋನ್ ಈಗಾಗಲೇ ನವೆಂಬರ್ 2024 ರಲ್ಲಿ ದೇಶದಲ್ಲಿ ಬಿಡುಗಡೆಯಾಗಿರುವ Realme GT 7 pro ಜೊತೆಗೆ ಸೇರಿಕೊಳ್ಳುವ ನಿರೀಕ್ಷೆಯಿದೆ. ಈ pro ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ SoC ಮತ್ತು 120W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,500mAh ಬ್ಯಾಟರಿಯನ್ನು ಹೊಂದಿದೆ. ಒಟ್ಟಾರೆಯಾಗಿ, Realme GT 7 ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ತೆಳುವಾದ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಏಪ್ರಿಲ್ 23 ರಂದು ನಡೆಯುವ ಬಿಡುಗಡೆ ಸಮಾರಂಭದಲ್ಲಿ ಈ ಫೋನ್‌ನ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಹೋಲಿಕೆಗಾಗಿ, Realme ಕಂಪನಿಯ ಈ ಹಿಂದಿನ ಮಾದರಿಯಾದ Realme GT 6 ಸ್ಮಾರ್ಟ್‌ಫೋನ್ 8.43mm ದಪ್ಪ ಮತ್ತು 5,800mAh ಶಕ್ತಿಶಾಲಿ ಬ್ಯಾಟರಿಯೊಂದಿಗೆ 206g ತೂಕವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 100W ವೈರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತಿದ್ದು, ದೊಡ್ಡ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಆದರೆ, ಈ ಹೊಸ ಮಾದರಿ Realme GT 7 ಸ್ಮಾರ್ಟ್‌ಫೋನ್ ಕೇವಲ 8.25mm ದಪ್ಪ ಮತ್ತು 203g ತೂಕವನ್ನು ಹೊಂದಿರಲಿದ್ದು, 120W ವೈರ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ತಿಳಿದು ಬಂದಿದೆ. ಇದು ಕುತೂಹಲಕಾರಿಯಾಗಿದೆ.

Best Mobiles in India

English summary
The debut of the Realme GT 7 has been officially confirmed, featuring a powerful 7,200mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+