Home
ಸುದ್ದಿಜಾಲ

ಭಾರತದಲ್ಲಿ ರಿಯಲ್‌ಮಿ GT ನಿಯೋ 3T ಬಿಡುಗಡೆ! 80W ಸೂಪರ್‌ಡಾರ್ಟ್ ಚಾರ್ಜ್ ವಿಶೇಷ!

ಭಾರತದಲ್ಲಿ ರಿಯಲ್‌ಮಿ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ ರಿಯಲ್‌ಮಿ GT ನಿಯೋ 3T ಫೋನ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್‌ ರೇಟ್‌ ಡಿಸ್‌ಪ್ಲೇ ಹೊಂದಿದ್ದು, ಆಕರ್ಷಕ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ಭಾರತದಲ್ಲಿ ತನ್ನ ಹೊಸ ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 80W ಸೂಪರ್‌ಡಾರ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿದ್ದು, ಫೋನ್‌ನ ಬ್ಯಾಟರಿಯನ್ನು 12 ನಿಮಿಷಗಳಲ್ಲಿ 50% ಚಾರ್ಜ್ ಮಾಡುತ್ತದೆ ಎಂದು ಹೇಳಲಾಗಿದೆ. ಇದು ಡಾಲ್ಬಿ ಅಟ್ಮೋಸ್‌ ಜೊತೆಗೆ ಡ್ಯುಯಲ್‌ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ವಿಶೇಷ

ಡಿಸ್‌ಪ್ಲೇ ವಿಶೇಷ

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ 6.62-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ E4 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 1,300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡುತ್ತದೆ. ಈ ಡಿಸ್‌ಪ್ಲೇ HDR10+ ಬೆಂಬಲವನ್ನು ಪಡೆದಿದೆ.

ಪ್ರೊಸೆಸರ್‌ ಬಲವೇನು?

ಪ್ರೊಸೆಸರ್‌ ಬಲವೇನು?

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 12 ಅನ್ನು ರಿಯಲ್‌ಮಿ UI 3.0 ಜೊತೆಗೆ ರನ್ ಮಾಡುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಫೋನ್‌ ಡೈನಾಮಿಕ್ RAM ವಿಸ್ತರಣೆ ತಂತ್ರಜ್ಞಾನವನ್ನು ಹೊಂದಿದ್ದು, ಹೆಚ್ಚುವರಿ 5GB RAM ಅನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಎಂಟು ಕೂಲಿಂಗ್ ಲೇಯರ್‌ಗಳನ್ನು ಒಳಗೊಂಡಿರುವ ಸ್ಟೇನ್‌ಲೆಸ್ ಸ್ಟೀಲ್ ಆವಿ ಕೂಲಿಂಗ್ ಸಿಸ್ಟಮ್ ಪ್ಲಸ್ ಅನ್ನು ಹೊಂದಿದೆ.

ಟ್ರಿಪಲ್‌ ರಿಯರ್‌ ಕ್ಯಾಮೆರಾ

ಟ್ರಿಪಲ್‌ ರಿಯರ್‌ ಕ್ಯಾಮೆರಾ

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್‌ 119 ಡಿಗ್ರಿ ಫೀಲ್ಡ್-ಆಫ್-ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಸೂಪರ್‌ಡಾರ್ಟ್ ಚಾರ್ಜ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi, 5G, 4G LTE, ಬ್ಲೂಟೂತ್ v5.2, NFC, ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ ಆನ್‌ಬೋರ್ಡ್‌ನಲ್ಲಿ ಮ್ಯಾಗ್ನೆಟಿಕ್ ಇಂಡಕ್ಷನ್ ಸೆನ್ಸರ್, ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸಾರ್‌, ಗೈರೊ ಸೆನ್ಸಾರ್‌ ಮತ್ತು ಅಂಡರ್-ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 6GB RAM + 128GB ಸ್ಟೋರೇಜ್ ಆಯ್ಕೆಯ ಬೆಲೆ 29,999ರೂ.ಆಗಿದೆ. ಇನ್ನು 8GB RAM + 128GB ಸ್ಟೋರೇಜ್ ಆವೃತ್ತಿಯ ಬೆಲೆ 31,999ರೂ. ಮತ್ತು ಟಾಪ್-ಆಫ್-ಲೈನ್ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 33,999ರೂ. ಆಗಿದೆ.

ಲಭ್ಯತೆ ಯಾವಾಗ?

ಲಭ್ಯತೆ ಯಾವಾಗ?

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ ಇದೇ ಸೆಪ್ಟೆಂಬರ್ 23ರಂದು ಮಧ್ಯಾಹ್ನ 12 ಗಂಟೆಗೆ ರಿಯಲ್‌ಮಿ.ಕಾಮ್‌, ಫ್ಲಿಪ್‌ಕಾರ್ಟ್‌ ಮತ್ತು ಮುಖ್ಯ ಸ್ಟೋರ್‌ಗಳಲ್ಲಿ ಸೇಲ್‌ ಆಗಲಿದೆ. ಇನ್ನು ಫಸ್ಟ್‌ ಸೇಲ್‌ ಸಮಯದಲ್ಲಿ ಈ ಸ್ಮಾರ್ಟ್‌ಫೋನಿನ ಮೇಲೆ 7,000ರೂ. ರಿಯಾಯಿತಿಯನ್ನು ನೀಡಲಾಗ್ತಿದೆ. ಇನ್ನು ಈ ಫೋನ್‌ ಡ್ಯಾಶ್ ಹಳದಿ, ಡ್ರಿಫ್ಟಿಂಗ್ ವೈಟ್ ಮತ್ತು ಶೇಡ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Realme GT Neo 3T With 6.62-Inch Display Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+