Home
ಸುದ್ದಿಜಾಲ

ವಿಶ್ವದ ಮೊದಲ 240W ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಪರಿಚಯಿಸಿದ ರಿಯಲ್‌ಮಿ!

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ರಿಯಲ್‌ಮಿ ಕಂಪೆನಿ ಪ್ರತಿ ಸ್ಮಾರ್ಟ್‌ಫೋನ್‌ನಲ್ಲಿಯೂ ಏನಾದರೂ ಹೊಸತು ಪ್ರಯತ್ನಿಸುತ್ತಲೇ ಬಂದಿದೆ. ತನ್ನ ವಿಭಿನ್ನ ಶೈಲಿಯ ಕ್ಯಾಮೆರಾ ಸೆಟ್‌ಅಪ್‌ ಹಾಗೂ ಬ್ಯಾಟರಿ ಬ್ಯಾಕ್‌ಅಪ್‌ನಿಂದ ರಿಯಲ್‌ಮಿ ಫೋನ್‌ಗಳು ಗಮನಸೆಳೆದಿವೆ. ಸದ್ಯ ಇದೀಗ ರಿಯಲ್‌ಮಿ GT ನಿಯೋ 5 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು ವಿಶ್ವದಲ್ಲೇ ಮೊದಲ 240W ವೇಗದ ಚಾರ್ಜಿಂಗ್‌ ಬೆಂಬಲಿಸುವ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ.

ವಿಶ್ವದ ಮೊದಲ 240W ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಪರಿಚಯಿಸಿದ ರಿಯಲ್‌ಮಿ!

ಹೌದು, ರಿಯಲ್‌ಮಿ ಕಂಪೆನಿ 240W ವೇಗದ ಚಾರ್ಜಿಂಗ್‌ ಬೆಂಬಲಿಸುವ ರಿಯಲ್‌ಮಿ GT ನಿಯೋ 5 ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಜೊತೆಗೆ 4600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ GT ನಿಯೋ 5 ಡಿಸ್‌ಪ್ಲೇ ಹೇಗಿದೆ?

ರಿಯಲ್‌ಮಿ GT ನಿಯೋ 5 ಸ್ಮಾರ್ಟ್‌ಫೋನ್‌ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 144Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ 1.5K ರೆಸಲ್ಯೂಶನ್, 1400 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಡಿಸ್‌ಪ್ಲೇ 2160Hz UHF PWM ಡಿಮ್ಮಿಂಗ್‌ ಅನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ 5000000:1 ಡೈನಾಮಿಕ್ ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ.

ವಿಶ್ವದ ಮೊದಲ 240W ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಪರಿಚಯಿಸಿದ ರಿಯಲ್‌ಮಿ!

ರಿಯಲ್‌ಮಿ GT ನಿಯೋ 5 ಪ್ರೊಸೆಸರ್‌ ಯಾವುದು?

ರಿಯಲ್‌ಮಿ GT ನಿಯೋ 5 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದು ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ರಿಯಲ್‌ಮಿ GT ನಿಯೋ 5 ಕ್ಯಾಮೆರಾ ಸೆಟ್‌ಅಪ್‌ ಎಷ್ಟಿದೆ?

ರಿಯಲ್‌ಮಿ GT ನಿಯೋ 5 ಸ್ಮಾರ್ಟ್‌ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX890 ಸೆನ್ಸಾರ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೋನಿ IMX355 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ವಿಶ್ವದ ಮೊದಲ 240W ವೇಗದ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ ಪರಿಚಯಿಸಿದ ರಿಯಲ್‌ಮಿ!

ರಿಯಲ್‌ಮಿ GT ನಿಯೋ 5 ಬ್ಯಾಟರಿ ಬ್ಯಾಕ್‌ಅಪ್‌ ಏನು?

ರಿಯಲ್‌ಮಿ GT ನಿಯೋ 5 ಸ್ಮಾರ್ಟ್‌ಫೋನ್‌ ಎರಡು ವಿಭಿನ್ನ ಆಯ್ಕೆಯ ಬ್ಯಾಟರಿ ಬ್ಯಾಕ್‌ಅಪ್‌ನಲ್ಲಿ ಬರಲಿದೆ. ಇದರಲ್ಲಿ ವಿಶ್ವದ ಮೊದಲ 240W ವೇಗದ ಚಾರ್ಜಿಂಗ್ ಟೆಕ್ನಾಲಜಿ ಬೆಂಬಲಿಸುವ ಸ್ಮಾರ್ಟ್‌ಫೋನ್‌ 4600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡ ಸ್ಮಾರ್ಟ್‌ಫೋನ್‌ 150W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.

ರಿಯಲ್‌ಮಿ GT ನಿಯೋ 5 ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ GT ನಿಯೋ 5 150W ಚಾರ್ಜಿಂಗ್‌ ಬೆಂಬಲಿಸುವ ಸ್ಮಾರ್ಟ್‌ಫೋನ್‌ 8GB + 256GB ಆಯ್ಕೆಗೆ CNY 2,499 (ಅಂದಾಜು 30,500ರೂ)ಬೆಲೆ ಪಡೆದಿದೆ.
ಆದರೆ 240W ವೇಗದ ಚಾರ್ಜಿಂಗ್‌ ಆಯ್ಕೆಯ ಸ್ಮಾರ್ಟ್‌ಫೋನ್‌ 16GB + 256GB ರೂಪಾಂತರದ ಆಯ್ಕೆಗೆ CNY 3,199 (ಅಂದಾಜು 39,000 ರೂ) ಬೆಲೆ ಹೊಂದಿದೆ.

Best Mobiles in India

English summary
It is the first smartphone from Realme and any other OEM to feature support for 240W fast charging.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+