ರಿಯಲ್‌ಮಿ GT5 ಪ್ರೊ ಡಿಸ್‌ಪ್ಲೇ ರಚನೆಗೆ ಬೆಚ್ಚಿಬಿದ್ದ ಟೆಕ್ ಜಗತ್ತು! ಎದುರಾಳಿಗಳಿಗೆ ನಡುಕ ಶರು!
ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಇಷ್ಟು ದಿನ ಫೋನ್‌ನ ಫೀಚರ್ಸ್ ಮೂಲಕ ಸಂಚಲನ ಸೃಷ್ಟಿಸಿದ್ದ ರಿಯಲ್‌ಮಿ ಇದೀಗ ಇದರ ಡಿಸ್‌ಪ್ಲೇ ಫೀಚರ್ಸ್ ಬಹಿರಂಗಪಡಿಸುವ ಮೂಲಕ ಟೆಕ್ ವಲಯದಲ್ಲಿ ಹಲ್‌ಚಲ್ ಎಬ್ಬಿಸಿದೆ. ಅದರಲ್ಲೂ ಈ ಡಿಸ್‌ಪ್ಲೇ 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರಲಿದೆ ಅನ್ನೊದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗ್ತಿದೆ. ಇದೀಗ ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಫೀಚರ್ಸ್ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ ಇದು Pro-XDR ಹೈ ಡೈನಾಮಿಕ್ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗಾದ್ರೆ ರಿಯಲ್‌ಮಿ GT5 ಪ್ರೊ ಫೋನ್‌ನ ಡಿಸ್‌ಪ್ಲೇ ಫೀಚರ್ಸ್ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ GT5 ಪ್ರೊ ಡಿಸ್‌ಪ್ಲೇ ಹೇಗಿರಲಿದೆ?
ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬರಲಿದೆ. ಈ ಡಿಸ್‌ಪ್ಲೇ 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿರುತ್ತದೆ ಎಂದು ಕಂಪನಿಯು ದೃಢಪಡಿಸಿದೆ. ಈ ಫೋನ್ ಜಾಗತಿಕವಾಗಿ 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 1000 ನಿಟ್ಸ್ ಮ್ಯಾನುವಲ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ ಎಂದು ವರದಿಯಾಗಿದೆ. ಇದಲ್ಲದೆ Pro-XDR ಹೈ ಡೈನಾಮಿಕ್ ಡಿಸ್‌ಪ್ಲೇ, TUV ರೈನ್‌ಲ್ಯಾಂಡ್ ಗ್ಲೋಬಲ್ ಐ ಪ್ರೊಟೆಕ್ಷನ್ 3.0, 2160Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ನೊಂದಿಗೆ ಬರಲಿದೆ.
ಇದರೊಂದಿಗೆ ಡಿಸ್‌ಪ್ಲೇಯಲ್ಲಿ ಹೈ-ಬ್ರೈಟ್‌ನೆಸ್ DC ಡಿಮ್ಮಿಂಗ್, 8T LTPO ಟೆಕ್, 144Hz ರಿಫ್ರೆಶ್ ರೇಟ್, 2160Hz ರೇಟ್, 2160Hz ತತ್‌ಕ್ಷಣ ರೇಟ್, 2160Hz ತತ್‌ಕ್ಷಣ ರೇಟ್, 2160Hz 140Hz ಟಚಸ್ ಆಫ್ ಡಿಮ್ಮಿಂಗ್ ಫೀಚರ್ಸ್ ಅನ್ನು ಕಾಣಬಹುದು ಎಂದು ಕಂಪೆನಿಯು ಅಧಿಕೃತ ಪಡಿಸಿದೆ. ಈ ಮೂಲಕ ರಿಯಲ್‌ಮಿ ಕಂಪೆನಿಯು ಮೊಬೈಲ್ ಉದ್ಯಮದಲ್ಲಿ ಅತ್ಯುತ್ತಮ ಸ್ಕ್ರೀನ್ ಎಕ್ಸ್‌ಪಿರಿಯನ್ಸ್ ಅನ್ನು ನೀಡಲಿದೆ ಎಂದು ಹೇಳಿದೆ.

ರಿಯಲ್‌ಮಿ GT5 ಪ್ರೊ ಪ್ರೊಸೆಸರ್ ನಿರೀಕ್ಷೆ ಏನು?
ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಪವರ್ ಪಡೆದುಕೊಂಡಿರಲಿದ್ದು, ಮಲ್ಟಿಟಾಸ್ಕ್ ಕೆಲಸಗಳಿಗೆ, ಅಧಿಕ ಡೇಟಾದ ಗೇಮಿಂಗ್, ವಿಡಿಯೋ ಎಡಿಟಿಂಗ್ ನಂತಹ ಕೆಲಸಗಳುಗೆ ಪೂರಕವಾಗಿ ಕೆಲಸ ಮಾಡಲಿದೆ ಎನ್ನಲಾಗಿದೆ. ಇದರ ಜೊತೆಗೆ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಸಪೋರ್ಟ್ ಪಡೆದಿರುವುದು ಖಚಿತ ಎನ್ನಲಾಗಿದೆ. ಇದು 12 GB + 16 GB RAM ಆಯ್ಕೆಯ ಜೊತೆಗೆ 256 GB ಹಾಗೂ 512 GB ಸ್ಟೋರೇಜ್ ವೇರಿಯಂಟ್‌ನಲ್ಲಿ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ. ಅದಾಗ್ಯೂ 24GB RAM ಆಯ್ಕೆ ಕೂಡಾ ಮಾರುಕಟ್ಟೆಗೆ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಸ್ಪಷ್ಟ ಮಾಹಿತಿ ಕಂಪನಿಯಿಂದ ಹೊರಹಾಕಿಲ್ಲ.
ರಿಯಲ್‌ಮಿ GT5 ಪ್ರೊ ಕ್ಯಾಮೆರಾ ಕ್ಯಾಪಾಸಿಟಿ!
ಇನ್ನು ರಿಯಲ್‌ಮಿ GT5 ಪ್ರೊ ಸ್ಮಾರ್ಟ್‌ಫೋನ್ ಪ್ರಮುಖ ನಿರೀಕ್ಷೆಗಳಲ್ಲಿ ಕ್ಯಾಮೆರಾ ಆಯ್ಕೆ ಸಹ ಒಂದಾಗಿದೆ. ಇದು ಸೋನಿ Lytia LYT808 ಪ್ರಾಥಮಿಕ ಶೂಟರ್, 50 ಮೆಗಾ ಪಿಕ್ಸಲ್ IMX890 ಟೆಲಿಫೋಟೋ ಸೆನ್ಸಾರ್ ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿರಲಿದ್ದು, OmniVision OV08D10 ಅಲ್ಟ್ರಾವೈಡ್ ಸೆನ್ಸಾರ್ ಪಡೆದಿರಲಿದೆ.

ರಿಯಲ್‌ಮಿ GT5 ಪ್ರೊ ಬ್ಯಾಟರಿ ಸಾಧ್ಯತೆ
ಈ ಮೊಬೈಲ್ 5400mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದ್ದು, 100W ಸೂಪರ್‌ವೂಕ್ ಚಾರ್ಜಿಂಗ್ ಸಪೋರ್ಟ್ ಮಾಡುವ ನಿರೀಕ್ಷೆಗಳು ಇವೆ.


Click it and Unblock the Notifications








