ಅಬ್ಬರಿಸಿಲು ಬರ್ತಿದೆ Realme GT7 Pro; ಇದುವೇ ಶಕ್ತಿಶಾಲಿ ಪ್ರೊಸೆಸರ್‌ನ ಮೊದಲ ಫೋನ್! ವಿಶೇಷತೆಗಳೇನು?
ರಿಯಲ್‌ಮಿ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಶೀಘ್ರದಲ್ಲಿಯೇ ಪವರ್ ಫುಲ್ ಪ್ರೊಸೆಸರ್ ಹೊಂದಿರುವ ಮೊಬೈಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಇದು, ರಿಯಲ್‌ಮಿ GT7 ಪ್ರೊ (Realme GT7 Pro) ಎಂಬ ಹೆಸರಿನೊಂದಿಗೆ ಭಾರತೀಯ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. ಈ ಬಗ್ಗೆ ಸ್ವತಃ ಕಂಪನಿಯ ಅಧ್ಯಕ್ಷ ಕ್ಸು ಕಿ ಚೇಸ್ ಅವರು ಖಚಿತಪಡಿಸಿದ್ದಾರೆ. ಇದರೊಂದಿಗೆ, ಅವರು ತಮ್ಮ ವೈಬೋ ಪುಟದಲ್ಲಿ ಮೂಂಬರುವ ಫೋನಿನ ಕುರಿತು ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ.
ಹೌದು, ಪ್ರಸಿದ್ಧ ಟೆಕ್ ಬ್ರಾಂಡ್ ರಿಯಲ್‌ಮಿ ತನ್ನ ಬಹುನಿರೀಕ್ಷಿತ ರಿಯಲ್‌ಮಿ GT7 ಪ್ರೊ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಭಾರತದ ಮೊದಲ ಸ್ನಾಪ್‌ಡ್ರಾಗನ್ 8 ಎಲೈಟ್ ಫೋನ್ ಆಗಿದೆ. ಈ ಶಕ್ತಿಶಾಲಿ ಫೋನ್ ಭಾರತದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಬಿಡುಗಡೆಯಾಗಲಿದೆ ಎಂದು ಈಗಾಗಲೇ ದೃಢಪಡಿಸಲಾಗಿದೆ. ಆದರೆ, ಇತ್ತೀಚಿನ ವರದಿಯು, ನಿರೀಕ್ಷೆಗಿಂತ ಮೊದಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಬಹಿರಂಗಪಡಿಸಿದೆ. ಈ ಫೋನಿನ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

ರಿಯಲ್‌ಮಿ GT7 ಪ್ರೊ ಬಿಡುಗಡೆ ದಿನಾಂಕದ ವಿವರ
ವರದಿಯ ಪ್ರಕಾರ, ರಿಯಲ್‌ಮಿ GT7 ಪ್ರೊ ಅನ್ನು ನವೆಂಬರ್ ಮಧ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಈಗಾಗಲೇ, ಕಂಪನಿಯು ನೂತನ ಫೋನನ್ನು ಈ ತಿಂಗಳು ಚೀನಾದಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ. ಈ ದಿನಾಂಕ ಪ್ರಕಟವಾದ ಕೇವಲ ಒಂದು ದಿನದ ನಂತರ ಭಾರತದ ಬಿಡುಗಡೆ ದಿನಾಂಕ ಸೋರಿಕೆಯಾಗಿದೆ. ಇದು ಪ್ರಮುಖ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಮತ್ತು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ.
iQOO 13 ರಿಯಲ್‌ಮಿ ಸವಾಲ್!
ಖ್ಯಾತ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಕೂಡ ಈ ಬಗ್ಗೆ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಟಿಪ್‌ಸ್ಟರ್ ಪ್ರಕಾರ, ಮುಂಬರುವ ರಿಯಲ್‌ಮಿ GT7 ಪ್ರೊ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನೊಂದಿಗೆ ಲಭ್ಯವಿರುವ ದೇಶದ ಮೊದಲ ಸ್ಮಾರ್ಟ್‌ಫೋನ್ ಆಗಿರುತ್ತದೆ. ರಿಯಲ್‌ಮಿ GT7 ಪ್ರೊ ಫೋನ್ ತನ್ನ ಪ್ರತಿಸ್ಪರ್ಧಿಯಾಗಿರುವ iQOO 13 ಮೊಬೈಲ್‌ಗೆ ಕಠಿಣ ಪೈಪೋಟಿ ನೀಡಲಿದೆ. ಇದು ಡಿಸೆಂಬರ್ 3 ರಂದು ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ರಿಯಲ್‌ಮಿ GT7 ಪ್ರೊ ಫೋನಿನ ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ ವಿವರ
ರಿಯಲ್‌ಮಿ GT7 ಪ್ರೊ ಮೊಬೈಲ್ 6.7 ಅಥವಾ 6.8 ಇಂಚಿನ 1.5K ಮೈಕ್ರೋ ಕ್ವಾಡ್ ಕರ್ವ್ ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಈ ಡಿಸ್ಪ್ಲೇಯು 2,000 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್‌ನೆಸ್ ಹೊಂದಿರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ರಿಯಲ್‌ಮಿ GT7 ಪ್ರೊ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 14 ಅನ್ನು ಆಧರಿಸಿದ ರಿಯಲ್‌ಮಿ ಯುಐ 6.0 (Realme UI 6.0) ನಲ್ಲಿ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ನೂತನ ರಿಯಲ್‌ಮಿ GT7 ಪ್ರೊ ಫೋನ್ 50 ಮೆಗಾಪಿಕ್ಸೆಲ್ ಸೋನಿ IMX906 ವೈಡ್ ಆಂಗಲ್ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ IMX882 ಪೆರಿಸ್ಕೋಪ್ ಲೆನ್ಸ್ ಅನ್ನು ಹೊಂದಿರುತ್ತದೆ. ಇದು 3x ಆಪ್ಟಿಕಲ್ ಜೂಮ್ ನೀಡುತ್ತದೆ. ರಿಯಲ್‌ಮಿಯ ಈ ಫೋನ್ ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ.
ಬ್ಯಾಟರಿ ಬ್ಯಾಕಪ್
ಕಂಪನಿಯು ರಿಯಲ್‌ಮಿ GT7 ಪ್ರೊ ಅನ್ನು 6,500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಇದು 120W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರಲಿದೆ. ಈ ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68/IP69 ರೇಟಿಂಗ್‌ನೊಂದಿಗೆ ಮಾರುಕಟ್ಟೆಗೆ ಬರಲಿದೆ.
ರಿಯಲ್‌ಮಿ GT7 ಪ್ರೊ ಫೋನಿನ ಬೆಲೆ (ನಿರೀಕ್ಷಿತ)
ರಿಯಲ್‌ಮಿ GT7 ಪ್ರೊ ಅನ್ನು ಭಾರತದಲ್ಲಿ 55,000 ರೂ. ಮತ್ತು 60,000 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಹೊಂದಿರುವ ಹೆಚ್ಚು ಕೈಗೆಟುಕುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ.


Click it and Unblock the Notifications








