Home
ಸುದ್ದಿಜಾಲ

ಸಿಹಿಸುದ್ದಿ! ಭಾರತಕ್ಕೆ realme GT7 ಬರ್ತಿದೆ; 7000mAh ಬ್ಯಾಟರಿ.. 6 ​​ಗಂಟೆ NONSTOP ಗೇಮಿಂಗ್; ಬೆಲೆ ಎಷ್ಟು?

ಗೇಮಿಂಗ್ ಪ್ರಿಯರಿಗೆ ರಿಯಲ್‌ಮಿ ಸಿಹಿಸುದ್ದಿ ನೀಡಿದೆ. ಭಾರತದಲ್ಲ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹೌದು, ಕಂಪನಿಯು ಕಳೆದ ವಾರ ತನ್ನ ಹೊಸ ಸ್ಮಾರ್ಟ್‌ಫೋನ್ ರಿಯಲ್‌ಮಿ GT7 (Realme GT7) ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿತು. ಶಕ್ತಿಶಾಲಿ ವಿಶೇಷಣಗಳನ್ನು ಹೊಂದಿರುವ ಈ ಗೇಮಿಂಗ್ ಫೋನ್ ಇದೀಗ ಭಾರತೀಯ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ರಿಯಲ್‌ಮಿ GT 7 5G ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಬಹಿರಂಗಪಡಿಸಿದೆ. ಈ ಫೋನಿನ ನಿರೀಕ್ಷಿತ ಬೆಲೆ, ಬಿಡುಗಡೆ ದಿನಾಂಕ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ರಿಯಲ್‌ಮಿ GT7 6 ಗಂಟೆಗಳ ಕಾಲ ನಿರಂತರವಾಗಿ 120FPS ಗೇಮಿಂಗ್ ಒದಗಿಸುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು 7000mAh ಬಿಗ್ ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 9400+ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 6.78 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿರುತ್ತವೆ.

ಭಾರತಕ್ಕೆ realme GT7 ಬರ್ತಿದೆ; 7000mAh ಬ್ಯಾಟರಿ, 6 ​​ಗಂಟೆ ಗೇಮಿಂಗ್; ಬೆಲೆ?

ರಿಯಲ್‌ಮಿ GT7 ಭಾರತದ ಬಿಡುಗಡೆ ವಿವರಗಳು

ರಿಯಲ್‌ಮಿ GT7 ಭಾರತದಲ್ಲಿ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ಅಧಿಕೃತವಾಗಿ ಘೋಷಿಸಿದೆ. ಪ್ರಸ್ತುತ, ಈ ಫೋನಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ, ಕಂಪನಿಯು ಮುಂದಿನ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ರಿಯಲ್‌ಮಿ GT7 ಅನ್ನು ಬಿಡುಗಡೆ ಮಾಡಲಿದೆ. ಈ ಫೋನಿನ ಮೆಕ್ರೋ ಸೈಟ್ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಲೈವ್ ಆಗಿದೆ. ಅದರಂತೆ, ರಿಯಲ್‌ಮಿ GT7 ಮೊಬೈಲ್ ಈ ಪ್ಲಾಟ್‌ಫಾರ್ಮ್‌ ಮೂಲಕವೇ ಮಾರಾಟವಾಗಲಿದೆ. ಈ ಫೋನಿಗಾಗಿ ರಿಯಲ್‌ಮಿ ಮತ್ತು ಕ್ರಾಫ್ಟನ್ ನಡುವೆ ಒಪ್ಪಂದ ಆಗಿದೆ.

ರಿಯಲ್‌ಮಿ GT7 ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ರಿಯಲ್‌ಮಿ GT7 ಮೊಬೈಲ್ 6.78 ಇಂಚಿನ OLED ಡಿಸ್ಪ್ಲೇ ಹೊಂದಿರುತ್ತದೆ. ಇದು 2,800 × 1,280 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಬೆಂಬಲ ಹೊಂದಿರಲಿದೆ. ಈ ಡಿಸ್ಪ್ಲೇಯು 144Hz ರಿಫ್ರೆಶ್ ದರ, 6500 ನಿಟ್‌ಗಳ ಗರಿಷ್ಠ (ಸ್ಥಳೀಯ) ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಕೇವಲ 1.3 ಎಂಎಂ ಬೆಜೆಲ್‌ಗಳನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ GT7 ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9400+ ಆಕ್ಟಾ ಕೋರ್ ಪ್ರೊಸೆಸರ್‌ ಹೊಂದಿರಲಿದೆ. ಇದನ್ನು 3 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಇದು ಇಮ್ಮಾರ್ಟಲಿಸ್ G925 ಜಿಪಿಯು ಮತ್ತು ರಿಯಲ್‌ಮಿಯ GT ಪರ್ಫಾರ್ಮೆನ್ಸ್ ಎಂಜಿನ್ 2.0 ಸಹ ಒಳಗೊಂಡಿರಲಿದೆ. ಈ ಫೋನ್ ಗೇಮಿಂಗ್‌ಗಾಗಿ, ಗ್ರ್ಯಾಫೀನ್ ಐಸ್ ಸೆನ್ಸಿಂಗ್ ಡಬಲ್ ಲೇಯರ್ ಕೂಲಿಂಗ್ ಹೊಂದಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ GT7 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇರಲಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಒಳಗೊಂಡಿರಲಿದೆ. ಈ ಕ್ಯಾಮೆರಾಗಳು 4K 60fps ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ GT7 ಮೊಬೈಲ್ 7200mAh ಸಾಮರ್ಥ್ಯ ಬ್ಯಾಟರಿ ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಇದು 100W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದೆ. ಈ ಫೋನ್ ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಹೊಂದಿದೆ. ಜೊತೆಗೆ ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಒಳಗೊಂಡಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP69 ರೇಟಿಂಗ್‌ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G SA/NSA, ಡ್ಯುಯಲ್ 4G VoLTE, ವೈ-ಫೈ 7, ಬ್ಲೂಟೂತ್ 5.4 ಹೊಂದಿದೆ.

ಭಾರತಕ್ಕೆ realme GT7 ಬರ್ತಿದೆ; 7000mAh ಬ್ಯಾಟರಿ, 6 ​​ಗಂಟೆ ಗೇಮಿಂಗ್; ಬೆಲೆ?

ರಿಯಲ್‌ಮಿ GT7 ಬೆಲೆ

ಚೀನಾದಲ್ಲಿ ಬಿಡುಗಡೆಯಾಗಿರುವ ರಿಯಲ್‌ಮಿ GT7 ಸ್ಮಾರ್ಟ್‌ಫೋನ್‌ ಅದೇ ವೈಶಿಷ್ಟ್ಯಗಳು ಮತ್ತು ಬೆಲೆಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನಿನ 12GB RAM + 256GB ಸ್ಟೋರೇಜ್ ರೂಪಾಂತರವನ್ನು 30,375 ರೂ.ಗೆ ಬಿಡುಗಡೆ ಮಾಡಲಾಗಿದೆ. 12GB RAM + 512GB ಸ್ಟೋರೇಜ್ ವೇರಿಯಂಟ್ 35,045 ರೂ., 16GB RAM + 256GB ಸ್ಟೋರೇಜ್ ಆಯ್ಕೆಯು 33,875 ರೂ. ಮತ್ತು 16GB RAM + 512GB ಸ್ಟೋರೇಜ್ ಬೆಲೆ 38,550 ರೂ. ಇದೆ. ಈ ಮೊಬೈಲ್ ನೀಲಿ, ಬಿಳಿ ಮತ್ತು ಕಪ್ಪು ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ.

Best Mobiles in India

English summary
Realme GT7 with 7000mAh Battery India Launch Confirmed via Amazon: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+