Home
ಸುದ್ದಿಜಾಲ

Realme..ಶೀಘ್ರವೇ ಭಾರತದಲ್ಲಿ 'ಮೊದಲ ವೃತ್ತಿಪರ AI ಕ್ಯಾಮೆರಾ ಫೋನ್' ಬಿಡುಗಡೆ! ರಿಯಲ್‌ಮಿ ಘೋಷಣೆ

ಬಜೆಟ್ ಸ್ನೇಹಿ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ನೀಡುವಲ್ಲಿ ರಿಯಲ್‌ಮಿ ಸಂಸ್ಥೆ ಯಶಸ್ವಿಯಾಗಿದೆ. ಬೇರೆ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ರಿಯಲ್‌ಮಿ (Realme) ಸಂಸ್ಥೆಯ ಮೊಬೈಲ್‌ಗಳು ಕಡಿಮೆ ಬೆಲೆಯಲ್ಲಿ ಭರ್ಜರಿ ಫೀಚರ್ಸ್‌ ನೀಡುವಲ್ಲಿ ಯಶಸ್ವಿಯಾಗಿವೆ. ಭಾರತದಲ್ಲಿ ರಿಯಲ್‌ಮಿ ಸಂಸ್ಥೆಯ ಮೊಬೈಲ್‌ಗಳಿಗೆ ವಿಶೇಷ ಬೇಡಿಕೆ ಇದೆ. ಈ ನಡುವೆ ರಿಯಲ್‌ಮಿ ಸಂಸ್ಥೆ ತನ್ನ ಬಹು ನಿರೀಕ್ಷಿತ Realme 13 ಸರಣಿಯ ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ದತೆ ಮಾಡಿಕೊಂಡಿದೆ ಎಂಬುದನ್ನು ಸಂಸ್ಥೆಯೇ ದೃಢಪಡಿಸಿದೆ ಹಾಗಿದ್ರೆ ಬನ್ನಿ ಈ ಮೊಬೈಲ್‌ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ರಿಯಲ್‌ಮಿ (Realme) ಸಂಸ್ಥೆ ಅನೇಕ ಗ್ರೌಂಡ್‌ ಬ್ರೇಕಿಂಗ್ AI ವೈಶಿಷ್ಟ್ಯಗಳ ಜೊತೆಗೆ ತನ್ನ Realme 13 ಸರಣಿಯನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಸಂಸ್ಥೆಯೇ ದೃಢಪಡಿಸಿದೆ. Realme 13 ಸರಣಿಯು 'ಮೊದಲ ವೃತ್ತಿಪರ AI ಕ್ಯಾಮೆರಾ ಫೋನ್' ಎಂದು ಸಂಸ್ಥೆ ಮಾಹಿತಿ ನೀಡಿದ್ದು ಇದರ ಹೊರತುಪಡಿಸಿ ಈ ಮೊಬೈಲ್ ಕುರಿತು ಹೆಚ್ಚಿನ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸಂಸ್ಥೆ Realme 12 ಸರಣಿಯ ಸಂಪ್ರದಾಯವನ್ನು ಮುಂದುವರೆಸಿದರೆ ಮುಂಬರಲಿರುವ ಈ 13 ಸರಣಿಯ ಮೊಬೈಲ್‌ Realme 13 Pro+ ಮತ್ತು Realme 13 Pro ಈ ಎರಡು ಆವೃತ್ತಿಯಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.

Realme: ಶೀಘ್ರವೇ ಭಾರತದಲ್ಲಿ 'ಮೊದಲ ವೃತ್ತಿಪರ AI ಕ್ಯಾಮೆರಾ ಫೋನ್' ಬಿಡುಗಡೆ!

Realme 13 Pro+ ವಿಶೇಷತೆಗಳು:
ಟಿಪ್‌ಸ್ಟರ್ ಡಿಜಿಟಲ್ ಚಾಟ್‌ಸ್ಟೇಷನ್ ಅನ್ನು ಉಲ್ಲೇಖಿಸಿ 91ಮೊಬೈಲ್ಸ್‌ನ ಇತ್ತೀಚಿನ ವರದಿಯ ಪ್ರಕಾರ, Realme 13 Pro+ ಭಾರತೀಯ ರೂಪಾಂತರವು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಚಿಪ್‌ಸೆಟ್‌ನಿಂದ ರನ್ ಆಗುವ ಸಾಧ್ಯತೆ ಇದೆ. ಇದಕ್ಕೆ ವಿರುದ್ಧವಾಗಿ Realme 12 Pro+ Snapdragon 7s Gen 2 ಚಿಪ್‌ಸೆಟ್ ಅನ್ನು ಒಳಗೊಂಡಿತ್ತು ಎಂಬುದು ವಿಶೇಷ.

Realme 13 Pro+ ಸ್ಟೋರೆಜ್:
4 ಶೇಖರಣಾ ರೂಪಾಂತರಗಳಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಿರುವ ಸಾಧ್ಯತೆ ಇದ್ದು, 8GB RAM ಹಾಗೂ 128GB ಸ್ಟೋರೆಜ್ ಸಂಗ್ರಹಣೆ, 8GB RAM ಮತ್ತು 256GB ಸಂಗ್ರಹಣೆ, 12GB RAM ಮತ್ತು 256GB ಸಂಗ್ರಹಣೆ ಮತ್ತು 12GB RAM ಮತ್ತು 512GB ಸಂಗ್ರಹಣೆ ಸಾರ್ಥ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇತ್ತೀಚಿನ ವರ್ಷಗಳಲ್ಲಿ Realme ಯ ನಂಬರ್ ಸರಣಿಯು ಕಡಿಮೆ ಬಜೆಟ್‌ನಲ್ಲಿ ಉತ್ತಮ ಕ್ಯಾಮರಾ ಅನುಭವವನ್ನು ನೀಡುವುದರ ಮೇಲೆ ಕೇಂದ್ರೀಕರಿಸಿದೆ. ಉದಾಹರಣೆಗೆ Realme 12 Pro ಬಹುಶಃ ಟೆಲಿಫೋಟೋ ಲೆನ್ಸ್ ಅನ್ನು ನೀಡುವ ಈ ಸ್ಮಾರ್ಟ್‌ಫೋನ್ ಕೇವಲ ₹ 30,000 ಬೆಲೆ ಹೊಂದಿದೆ. ಈ ಬೆಲೆಯಲ್ಲಿ ಲಭ್ಯವಿರುವ ಏಕೈಕ ಫೋನ್ ಆಗಿರಬಹುದು ಮತ್ತು ಟೆಲಿಫೋಟೋ ಲೆನ್ಸ್‌ಗಳ ಸಂಪ್ರದಾಯವು Realme 13 Pro ಮತ್ತು Pro+ ನೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ.

Realme 13 Pro+ ಕ್ಯಾಮೆರಾ:
ಸೋನಿ IMX882 3x ಪೆರಿಸ್ಕೋಪ್ ಸೆನ್ಸಾರ್‌ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿರುವ ಸಾಧ್ಯತೆ ಇದೆ. ಗಮನಾರ್ಹವಾಗಿ ಮುಂಬರುವ ಹಲವು Oppo ಮತ್ತು OnePlus ಫ್ಲ್ಯಾಗ್‌ಶಿಪ್‌ಗಳಲ್ಲಿ ನಾವು ನೋಡುವ ಅದೇ ಸೆನ್ಸಾರ್ ಹೊಂದಿರುವ ಸಾಧ್ಯತೆ ಇದೆ. ಇತರ ಎರಡು ಕ್ಯಾಮೆರಾ ಸಂವೇದಕಗಳು Realme 12 Pro+ ಗೆ ಹೋಲುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಸ್ಮಾರ್ಟ್‌ಫೋನ್‌ ಮುಂಭಾಗದಲ್ಲಿ ಸೆಲ್ಫಿ ಶೂಟರ್‌ಗಾಗಿ ಪಂಚ್ ಹೋಲ್ ಕಟೌಟ್ ಮತ್ತು ಹಿಂಬದಿಯ ಕ್ಯಾಮೆರಾ ಸೆಟಪ್‌ಗಾಗಿ ಹಿಂಭಾಗದಲ್ಲಿ ವಾಚ್ ರೀತಿಯ ಕ್ಯಾಮೆರಾ ಮಾಡ್ಯೂಲ್ ಅನ್ನು ನಾವು ನೋಡುವ ಸಾಧ್ಯತೆಯಿದೆ.

Best Mobiles in India

English summary
Realme has confirmed that it will soon launch its Realme 13 series in India with many groundbreaking AI features. The Realme 13 series is touted as the 'first professional AI camera phone'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+