Home
ಸುದ್ದಿಜಾಲ

ರಿಯಲ್‌ಮಿ 11 ಸರಣಿ ಲಾಂಚ್‌ ಟೀಸರ್‌ ನೋಡಿ ದಂಗಾದ ಮೊಬೈಲ್‌ ಮಾರುಕಟ್ಟೆ!

ಟೆಕ್‌ ವಲಯದಲ್ಲಿ ರಿಯಲ್‌ ಕಂಪೆನಿಯ ಫೋನ್‌ಗಳಿಗೆ ಉತ್ತಮ ಬೇಡಿಕೆಯಿದೆ. ಪ್ರತಿ ಭಾರಿಯು ಹೊಸತನವನ್ನು ಬಯಸುವ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ರಿಯಲ್‌ಮಿ ಬೆಸ್ಟ್‌ ಆಯ್ಕೆಯಾಗಿದೆ. ಇದಕ್ಕೆ ಅನುಗುಣವಾಗಿ ರಿಯಲ್‌ಮಿ ಕೂಡ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದೀಗ ತನ್ನ ಹೊಸ ರಿಯಲ್‌ಮಿ 11 ಸರಣಿ ಬಿಡುಗಡೆಗೆ ತಯಾರಿ ನಡೆಸಿದೆ.

ಹೌದು, ರಿಯಲ್‌ಮಿ 11 ಸರಣಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಲಾಂಚ್‌ ಡೇಸ್‌ ಟೀಸರ್‌ ಬಿಡುಗಡೆಯಾಗಿದ್ದು, ಅದರಂತೆ ಈ ಸರಣಿಯು ಇದೇ ಮೇ 10 ರಂದು ಲಾಂಚ್‌ ಆಗೋದು ಪಕ್ಕಾ ಆಗಿದೆ. ಇನ್ನು ಈ ಸರಣಿಯಲ್ಲಿ ರಿಯಲ್‌ಮಿ 11 ಪ್ರೊ ಮತ್ತು ರಿಯಲ್‌ಮಿ 11 5G ಮತ್ತು ರಿಯಲ್‌ಮಿ 11ಪ್ರೊ + 5G ಬಿಡುಗಡೆಯಾಗಲಿವೆ ಎನ್ನಲಾಗಿದೆ. ಹಾಗಾದ್ರೆ ರಿಯಲ್‌ಮಿ 11 ಸರಣಿ ಫೋನ್‌ಗಳಲ್ಲಿ ಯಾವೆಲ್ಲಾ ಫೀಚರ್ಸ್‌ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ 11 ಸರಣಿ ಲಾಂಚ್‌ ಟೀಸರ್‌ ನೋಡಿ ದಂಗಾದ ಮೊಬೈಲ್‌ ಮಾರುಕಟ್ಟೆ!

ರಿಯಲ್‌ಮಿ 11 ಸರಣಿ ಟೀಸರ್‌ನಲ್ಲಿ ಏನಿದೆ?

ರಿಯಲ್‌ಮಿ 11 ಸರಣಿ ಸ್ಟೈಲಿಶ್‌ ಲುಕ್‌, ವಿಭಿನ್ನ ಡಿಸೈನ್‌ ಹೊಂದಿರುವ ಪ್ಯಾನಲ್‌ ಹೊಂದಿರಲಿದೆ ಅನ್ನೊದು ಟೀಸರ್‌ನ್ಲಿ ಬಹಿರಂಗವಾಗಿದೆ. ಜೊತೆಗೆ ಈ ಟೀಸರ್‌ನಲ್ಲಿ ಫೋನ್‌ನ ಕ್ಯಾಮೆರಾ ಫೀಚರ್ಸ್‌ಗಳು, ಫೋನ್‌ನ ವಿನ್ಯಾಸದ ಬಗ್ಗೆ ಹಿಂಟ್‌ ನೀಡಲಾಗಿದೆ. ಇದರಲ್ಲಿ ರಿಯಲ್‌ಮಿ 11 ಪ್ರೊ ಪ್ಲಸ್‌ 5G ಫೋನ್ ರಿಯರ್‌ ಕ್ಯಾಮೆರಾ ಬಿಗ್‌ ಸರ್ಕಲ್‌ ಕ್ಯಾಮೆರಾ ಮಾಡ್ಯೂಲ್‌ ಹೊಂದಿರಲಿದೆ ಅನ್ನೊದು ಬಹಿರಂಗವಾಗಿದೆ. ಇದರ ಕ್ಯಾಮೆರಾ ಸೆಟ್‌ಅಪ್‌ನ ಮುಖ್ಯ ಕ್ಯಾಮೆರಾ 200MP ಸೆನ್ಸಾರ್‌ ಇರಲಿದೆ ಎನ್ನಲಾಗಿದೆ.

ರಿಯಲ್‌ಮಿ 11 ಸರಣಿಯ ಡಿಸೈನ್‌ ಹೇಗಿದೆ?

ರಿಯಲ್‌ಮಿ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ಗಳ ಡಿಸೈನ್‌ಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದೆ. ಅದರಂತೆ ರಿಯಲ್‌ಮಿ 11 ಸರಣಿ ಫೋನ್‌ಗಳ ಡಿಸೈನ್‌ಗಾಗಿ GUCCI ಯ ಮಾಜಿ ವಿನ್ಯಾಸಕ ಮ್ಯಾಟಿಯೊ ಮೆನೊಟ್ಟೊ ಅವರೊಂದಿಗೆ ಕೈಜೋಡಿಸಿದೆ. ಇದರಿಂದಾಗಿ ರಿಯಲ್‌ಮಿ 11 ಸರಣಿ ವಿಭಿನ್ನವಾಗ ಮೂಡಿ ಬಂದಿದ್ದು, "ಸನ್‌ರೈಸ್ ಸಿಟಿ" ಎಂಬ ಬೀಜ್ ಫಾಕ್ಸ್ ಲೆದರ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬಾಗಿದ ಹಿಂಭಾಗ ಮತ್ತು ಚೌಕಟ್ಟನ್ನು ಹೊಂದಿದೆ. ಇನ್ನು ಫೋನ್‌ನ ಬಲಭಾಗದಲ್ಲಿ, ಪವರ್ ಮತ್ತು ವಾಲ್ಯೂಮ್ ಬಟನ್‌ಗಳಿದ್ದು, ಸಿಮ್ ಟ್ರೇ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸ್ಪೀಕರ್ ಗ್ರಿಲ್ ಕೆಳಭಾಗದ ಅಂಚಿನಲ್ಲಿ ನೀಡಲಾಗಿದೆ.

ರಿಯಲ್‌ಮಿ 11 ಸರಣಿ ಲಾಂಚ್‌ ಟೀಸರ್‌ ನೋಡಿ ದಂಗಾದ ಮೊಬೈಲ್‌ ಮಾರುಕಟ್ಟೆ!

ರಿಯಲ್‌ಮಿ 11 ಪ್ರೊ + 5G ಫೀಚರ್ಸ್‌ ನಿರೀಕ್ಷೆ ಏನು?

ರಿಯಲ್‌ಮಿ 11 ಪ್ರೊ + 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 2160Hz PWM ಹೈ-ಫ್ರೀಕ್ವೆನ್ಸಿ ಡಿಮ್ಮಿಂಗ್ ಬೆಂಬಲಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ ಡೈಮೆನ್ಸಿಟಿ 7 ಸರಣಿ ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ನೀಡುವ ಸಾಧ್ಯತೆಯಿದೆ.

ಇದಲ್ಲದೆ, ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದ್ದು, 100W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇದರಿಂದಾಗಿ ಕೆಲವೇ ಕ್ಷಣಗಳಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಫುಲ್‌ ಚಾರ್ಜ್‌ ಮಾಡಬಹುದು ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನುಒಳಗೊಂಡಿರಲಿದೆ ಎಂದು ವರದಿಯಾಗಿದೆ.

ರಿಯಲ್‌ಮಿ 11 ಸರಣಿ ಲಾಂಚ್‌ ಟೀಸರ್‌ ನೋಡಿ ದಂಗಾದ ಮೊಬೈಲ್‌ ಮಾರುಕಟ್ಟೆ!

ಇನ್ನು ರಿಯಲ್‌ಮಿ 11 ಪ್ರೊ + ಸ್ಮಾರ್ಟ್‌ಫೋನ್‌ ಜೊತೆಗೆ, ರಿಯಲ್‌ಮಿ 11 ಪ್ರೊ ಮತ್ತು ಸ್ಟ್ಯಾಂಡರ್ಡ್ ಆವೃತ್ತಿಯಾದ ರಿಯಲ್‌ಮಿ 11 ಕೂಡ ಬಿಡುಗಡೆಯಾಗಲಿದ್ದು, ಈ ಡಿವೈಸ್‌ಗಳ ಫೀಚರ್ಸ್‌ಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಇನ್ನು ರಿಯಲ್‌ಮಿ 11 ಸರಣಿ ಮೊದಲಿಗೆ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಲಿದೆ ನಂತರದ ದಿನಗಳಲ್ಲಿ ಭಾರತಕ್ಕೂ ಕೂಡ ಕಾಲಿಡಲಿದೆ ಎಂದು ಹೇಳಲಾಗಿದೆ. ಬಿಡುಗಡೆ ದಿನಾಂಕ ಹತ್ತಿರವಾದಾಗ ಸ್ಮಾರ್ಟ್‌ಫೋನ್‌ನ ಬೆಲೆ ವಿವರಗಳು ಬಹಿರಂಗವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Realme has released a new teaser that provides Realme 11 Pro+ glimpse
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+