ಸ್ಮಾರ್ಟ್‌ಫೋನ್ ಪ್ರಿಯರ ಎದೆ ಬಡಿತ ಹೆಚ್ಚಿಸಿದ ಚಾಂಪಿಯನ್ ಈಸ್ ಕಮಿಂಗ್ ಟೀಸರ್!
ರಿಯಲ್‌ಮಿ C51 ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಹತ್ತಿರವಾಗ್ತಿದೆ ಹಾಗೇ ಅನೇಕ ವಿಚಾರಗಳು ಬಹಿರಂಗವಾಗ್ತಿದೆ. ರಿಯಲ್‌ಮಿ ಕಂಪೆನಿ ಕೂಡ ಇತ್ತೀಚಿಗೆ "ಚಾಂಪಿಯನ್ ಈಸ್ ಕಮಿಂಗ್" ಎಂಬ ಟೀಸರ್ ಅನ್ನು ಪೋಸ್ಟ್ ಮಾಡಿದೆ. ಈ ಮೂಲಕ ಹಿಂದಿನ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗಿಂತ ರಿಯಲ್‌ಮಿ C51 ಸಾಕಷ್ಟು ಭಿನ್ನವಾಗಿರಲಿದೆ ಎನ್ನಲಾಗಿದೆ.
ಹೌದು, ರಿಯಲ್‌ಮಿ C51 ಸ್ಮಾರ್ಟ್‌ಫೋನ್ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಂತ ವಿಭಿನ್ನವಾಗಿ ಬರುವ ನಿರೀಕ್ಷೆಯಿದೆ. ಅದರಂತೆ ಈ ಸ್ಮಾರ್ಟ್‌ಫೋನ್ ಫೀಚರ್ಸ್ ಏನಿರಲಿದೆ ಅನ್ನೊ ಕುತೂಹಲ ಇದೀಗ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದರ ನಡುವೆ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಬಹಿರಂಗವಾಗಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ಎದೆಬಡಿತ ಜೋರಾಗುವಂತೆ ಮಾಡಿದೆ. ಹಾಗಾದ್ರೆ ರಿಯಲ್‌ಮಿ C51 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ C51 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರಿಯಲ್‌ಮಿ C51 ಸ್ಮಾರ್ಟ್‌ಫೋನ್ 6.7 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ. ಇದರೊಂದಿಗೆ ಡಿಸ್‌ಪ್ಲೇ 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದಿದ್ದು, 560 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.
ರಿಯಲ್‌ಮಿ C51 ಪ್ರೊಸೆಸರ್ ಯಾವುದು?
ರಿಯಲ್‌ಮಿ C51 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಯುನಿಸಾಕ್ T612 12nm ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಲಿದೆ. ಇದಲ್ಲದೆ ಮೈಕ್ರೋ SD ಮೂಲಕ 2TB ವರೆಗೆ ವಿಸ್ತರಿಸಬಹುದಾದ ಸಂಗ್ರಹಣೆ ಸಾಮರ್ಥ್ಯದೊಂದಿಗೆ ಬರುವ ನಿರೀಕ್ಷೆಯನ್ನು ಸಹ ಇಡಲಾಗಿದೆ.
ರಿಯಲ್‌ಮಿ C51 ಕ್ಯಾಮೆರಾ ಸೆಟ್‌ಅಪ್
ರಿಯಲ್‌ಮಿ C51 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ ವಿವರಗಳು ಇನ್ನು ಬಹಿರಂಗವಾಗಿಲ್ಲ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.
ರಿಯಲ್‌ಮಿ C51 ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ C51 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W SuperVOOC ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G VoLTE, 3.5mm ಆಡಿಯೋ ಜ್ಯಾಕ್, Wi-Fi 802.11 ac, ಬ್ಲೂಟೂತ್ 5.0, GPS, GLONASS, USB ಟೈಪ್-C ಪೋರ್ಟ್, 3.5mm ಹೆಡ್‌ಫೋನ್ ಜ್ಯಾಕ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ ಸಿಮ್ ಬೆಂಬಲವನ್ನು ಒಳಗೊಂಡಿವೆ.
ರಿಯಲ್‌ಮಿ C51 ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ C51 ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವ ಬೆಲೆಯಲ್ಲಿ ಬರಲಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಇದು ಕಾರ್ಬನ್ ಬ್ಲಾಕ್ ಮತ್ತು ಮಿಂಟ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ.
ಇನ್ನು ಇತ್ತೀಚಿಗೆ ರಿಯಲ್‌ಮಿ ಕಂಪೆನಿಯ ಬಹು ನಿರೀಕ್ಷಿತ ರಿಯಲ್‌ಮಿ GT5 ಸ್ಮಾರ್ಟ್‌ಫೋನ್ ವಿನ್ಯಾಸ ಬಹಿರಂಗವಾಗಿದೆ. ಈಗಾಗಲೇ ಬಿಡುಗಡೆಗೂ ಮುನ್ನವೇ ಸಖತ್ ಸೌಂಡ್ ಮಾಡ್ತಿರುವ ರಿಯಲ್‌ಮಿ GT5 ತನ್ನ ಡಿಸೈನ್ ಲುಕ್ ಮೂಲಕ ಇನ್ನಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.


Click it and Unblock the Notifications








