ರಿಯಲ್‌ಮಿ ಹೋಲಿ ಡೇಸ್ ಸೇಲ್: ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ರಿಯಾಯಿತಿ!
ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಪ್ರಖ್ಯಾತಿ ಗಳಿಸಿದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಇನ್ನು ತನ್ನ ಗ್ರಾಹಕರನ್ನು ಆಕರ್ಷಿಸಲು ವಿಶೇಷ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ರಿಯಾಯಿತಿ ದರದ ಸೇಲ್ ಅನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ರಿಯಲ್‌ಮಿ ತನ್ನ ವೆಬ್‌ಸೈಟ್‌ನಲ್ಲಿ ಹೋಳಿ ಹಬ್ಬದ ಪ್ರಯುಕ್ತ ರಿಯಲ್‌ಮಿ ಹೋಲಿ ಡೇಸ್ ಸೇಲ್ ಅನ್ನು ಆಯೋಜಿಸಿದೆ.

ಹೌದು, ರಿಯಲ್‌ಮಿ ಕಂಪೆನಿ ರಿಯಲ್‌ಮಿ ಹೋಲಿ ಡೇಸ್ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ರಿಯಲ್‌ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ಟಿವಿಗಳು, ಇಯರ್‌ಫೋನ್‌ಗಳು, ವೆರಿಯೆಬಲ್ಸ್ ಪ್ರಾಡಕ್ಟ್‌ಗಳು, ಮತ್ತು ಲೈಪ್‌ಸ್ಟೈಲ್ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ 500 ರಿಂದ 1,000 ರೂ ಗಳ ವರೆಗೆ ರಿಯಾಯಿತಿ ದೊರೆಯಲಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನ ರಿಯಯಿತಿ ದರದಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ರಿಯಲ್‌ಮಿ C15
ರಿಯಲ್‌ಮಿ C15 ಕ್ವಾಲ್ಕಾಮ್ ಆವೃತ್ತಿ ಮತ್ತು ರಿಯಲ್‌ಮಿ C15 ಸ್ಮಾರ್ಟ್‌ಫೋನ್ ಮೂಲ ಬೆಲೆ ಕ್ರಮವಾಗಿ 8,999 ರೂ ಮತ್ತು 9,599 ರೂ ಆಗಿದೆ. ಆದರೆ ಈಗ ಹೋಲಿ ಡೇಸ್ ಸೇಲ್‌ನಲ್ಲಿ 1,000 ರೂ ರಿಯಾಯಿತಿ ಪಡೆದ ನಂತರ 4ಜಿಬಿ + 64 ಜಿ ಶೇಖರಣಾ ರೂಪಾಂತರಕ್ಕೆ 9,999 ರೂ. ಬೆಲೆಯನ್ನು ನಿಗದಿ ಪಡಿಸಲಾಗಿದೆ.

ರಿಯಲ್‌ಮಿ ಸಿ 12
ಇನ್ನು ರಿಯಲ್‌ಮಿ ಹೋಲಿ ಡೇಸ್ ಸೇಲ್‌ನಲ್ಲಿ ರಿಯಲ್‌ಮಿ C 12 ಸ್ಮಾರ್ಟ್‌ಫೋನ್ 3GB RAM + 32GB ಶೇಖರಣಾ ರೂಪಾಂತರಕ್ಕೆ 8,440 ರೂಬೆಲೆಗೆ ಲಭ್ಯವಾಗಲಿದೆ. ಅಲ್ಲದೆ 4GB RAM + 64GB ಶೇಖರಣಾ ರೂಪಾಂತರವನ್ನು ರೂ. 9,499ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಎಲ್ಲಾ ಫೋನ್‌ಗಳಿಗೆ ರೂ. ಪ್ರಿಪೇಯ್ಡ್ ಆದೇಶಗಳಿಗೆ 500 ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ರಿಯಲ್‌ಮಿ 5 ಪ್ರೊ
ರಿಯಲ್‌ಮಿ 5 ಪ್ರೊ ಸ್ಮಾರ್ಟ್‌ಫೋನ್ 6GB RAM +64GB ಸ್ಟೋರೇಜ್ ರೂಪಾಂತರದ ಮೂಲಬೆಲೆ 16,999 ರೂ ಆಗಿದ್ದು, ಇದೀಗ 12,999 ರೂ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 8GB RAM + 128GB ಶೇಖರಣಾ ಆವೃತ್ತಿಯ ಬೆಲೆ 14,999 ರೂ ಆಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮಾರಾಟದ ಸಮಯದಲ್ಲಿ 2,000 ರೂ. ರಿಯಾಯಿತಿಯನ್ನು ಪಡೆಯಬಹುದಾಗಿದೆ.

ರಿಯಲ್‌ಮಿ 7 ಪ್ರೊ
ರಿಯಲ್‌ಮಿ 7 ಪ್ರೊ ಸ್ಮಾರ್ಟ್‌ಫೋನ್ ರಿಯಲ್‌ಮಿ ಹೋಲಿ ಡೇಸ್ ಸೇಲ್‌ನಲ್ಲಿ 6GB RAM + 128GB ಸ್ಟೋರೇಜ್ ರೂಪಾಂತರವನ್ನು ಈಗ 18,999ರೂ ಗಳಿಗೆ ಖರೀದಿಸಬಹುದಾಗಿದೆ. 8GB RAM + 128 GB ಶೇಖರಣಾ ರೂಪಾಂತರದ ಬೆಲೆ ರೂ. 20,999 ಹೊಂದಿದ್ದು, ತಲಾ 1,000 ರೂ.ಗಳ ಬೆಲೆ ಕಡಿತವನ್ನು ಪಡೆದುಕೊಂಡಿವೆ.

ರಿಯಲ್‌ಮಿ 6
ರಿಯಲ್‌ಮಿ 6 ಸ್ಮಾರ್ಟ್‌ಫೋನ್ ಕೂಡ ರಿಯಾಯಿತಿ ದರದಲ್ಲಿ 6GB RAM+ 64GB ಶೇಖರಣಾ ಮಾದರಿಗೆ 12,999 ರೂ ಬೆಲೆ ಮತ್ತು 6GB RAM + 128GB ಮಾದರಿಗೆ 13,999 ರೂ. ಬೆಲೆಗೆ ಲಭ್ಯವಾಗಲಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮೇಲೆ ತಲಾ 2,000 ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ರಿಯಲ್‌ಮಿ ನಾರ್ಜೊ 30A
ರಿಯಲ್‌ಮಿ ನಾರ್ಜೊ 30A ಸ್ಮಾರ್ಟ್‌ಫೋನ್ 3GB RAM + 32GB ಶೇಖರಣಾ ಆವೃತ್ತಿಗೆ 8,999, ಮತ್ತು ರೂ. 4GB RAM + 64GB ಶೇಖರಣಾ ಮಾದರಿಗೆ 9,999 ರೂ. ಬೆಲೆ ಹೊಂದಿದ್ದು, ರಿಯಾಯಿತಿ ಪ್ರಿಪೇಯ್ಡ್ ಆದೇಶಗಳಲ್ಲಿ ಮಾತ್ರ ಲಭ್ಯವಿದೆ. ಇನ್ನು ರಿಯಲ್‌ಮಿ ನಾರ್ಜೊ 20 ಪ್ರೊ ಸ್ಮಾರ್ಟ್‌ಫೋನ್ 13,999 ರೂ ಬೆಲೆಯಲ್ಲಿ ಲಭ್ಯವಾಗಿದೆ.


Click it and Unblock the Notifications








