ಜುಲೈ 4ಕ್ಕೆ Realme ಇಮೇಜಿಂಗ್ ಈವೆಂಟ್; Realme 13 Pro ಮೊಬೈಲ್‌ಗೆ AI ವೈಶಿಷ್ಟ್ಯ ಘೋಷಣೆ !
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ Realme ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ (Smartphones) ಬಹು ಬೇಡಿಕೆ ಇದೆ. ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್ ಮೊಬೈಲ್‌ಗಳನ್ನು ನೀಡುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ. ಆಗಾಗ ಹೊಸ ಸರಣಿಯ ಮೊಬೈಲ್‌ಗಳನ್ನು ಬಿಡುಗಡೆ ಮಾಡುವುದು, ನೂತನ ತಂತ್ರಜ್ಞಾನ ಬಳಸಿಕೊಳ್ಳುವಲ್ಲಿಯೂ ಈ ಸಂಸ್ಥೆ ಯಶಸ್ವಿಯಾಗಿದೆ. ಇದೀಗ Realme ಭಾರತದಲ್ಲಿ ಶೀಘ್ರವೇ Realme 13 Pro ಸರಣಿಯನ್ನು ಘೋಷಿಸಲು ಸಿದ್ಧವಾಗಿದೆ. ಕಂಪನಿಯು Realme AI ಇಮೇಜಿಂಗ್ ಈವೆಂಟ್ ಅನ್ನು ಈ ತಿಂಗಳು ನಡೆಸಲಿದೆ ಎಂದು ದೃಢಪಡಿಸಿದ್ದು ಈ ಈವೆಂಟ್‌ನಲ್ಲಿ ಎಐ ಸೇರಿ ಹಲವು ಆವಿಷ್ಕಾರಗಳ ಮಾಹಿತಿ ನೀಡಲಿದೆ ಎಂದು ಹೇಳಲಾಗುತ್ತಿದೆ.
ಹೈಲೆಟ್ಸ್:
* Realme AI ಇಮೇಜಿಂಗ್ ಈವೆಂಟ್ ಜುಲೈ 4 ರಂದು ಬ್ಯಾಂಕಾಕ್‌ನಲ್ಲಿ ನಡೆಯಲಿದೆ.
* Realme ಭಾರತದಲ್ಲಿ ಶೀಘ್ರದಲ್ಲೇ Realme 13 Pro ಸರಣಿಯನ್ನು ಘೋಷಿಸಲು ಸಿದ್ಧವಾಗಿದೆ.
* ಮುಂಬರುವ ಸರಣಿಯ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಕಂಪನಿಯು ಈಗಾಗಲೇ ಬಹಿರಂಗಪಡಿಸಿದೆ.

2024 ರ ಆರಂಭದಲ್ಲಿ ಬಿಡುಗಡೆಯಾಗಿರುವ Realme 12 Pro ಮತ್ತು Realme 12 Pro+ ರೀತಿಯಲ್ಲೇ Realme 13 Pro ಮತ್ತು Realme 13 Pro+ ಒಳಗೊಂಡಿರುವ ಮೊಬೈಲ್‌ಗಳನ್ನು ಶೀಘ್ರದಲ್ಲೇ ಲಾಂಚ್ ಮಾಡಲಿದೆ. ಇದೇ ತಿಂಗಳು ನಡೆಯಲಿರುವ Realme AI ಇಮೇಜಿಂಗ್ ಈವೆಂಟ್‌ನಲ್ಲಿ Realme 13 Pro ಸರಣಿಯ AI ಸಾಮರ್ಥ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆ ಇದೆ.
Realme 13 Pro ಸರಣಿಯ Realme AI ಇಮೇಜಿಂಗ್ ಈವೆಂಟ್ ದಿನಾಂಕ:
ಕಂಪನಿಯ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ್ದು, Realme ಜುಲೈ 4 ರಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ AI ಇಮೇಜಿಂಗ್ ಮೀಡಿಯಾ ಪೂರ್ವವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದು ತಿಳಿದು ಬಂದಿದೆ. ಈವೆಂಟ್ ಸಮಯದಲ್ಲಿ ಕಂಪನಿ ಕ್ಯಾಮೆರಾ ಸೆಟಪ್‌ಗಾಗಿ Realme 13 Pro ಸರಣಿಯ AI ವೈಶಿಷ್ಟ್ಯಗಳ ಕುರಿತಾದ ವಿವರಗಳನ್ನು ತಿಳಿಸುವ ನಿರೀಕ್ಷೆಯಿದೆ.
ಏನನ್ನು ನಿರೀಕ್ಷಿಸಬಹುದು?
*ಕಂಪನಿಯ ಪ್ರಕಾರ, ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ AI ನ ಭವಿಷ್ಯದ ಪರಿಣಾಮಗಳನ್ನು ಅನ್ವೇಷಿಸಲು Realme ಕಾರ್ಯನಿರ್ವಾಹಕರು TUV ರೈನ್‌ಲ್ಯಾಂಡ್ ಪ್ರತಿನಿಧಿಗಳ ಜೊತೆ ಸಭೆ ನಡೆಸಲಿದೆ.
*ಈವೆಂಟ್‌ನಲ್ಲಿ ಎರಡೂ ಸಂಸ್ಥೆಯ ಕಾರ್ಯನಿರ್ವಾಹಕರು ತಮ್ಮ ಸಹಯೋಗ ಮತ್ತು ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಎಐ ತಂತ್ರಜ್ಞಾನವನ್ನು ಮುನ್ನಡೆಸುವ ಪ್ರಯತ್ನಗಳನ್ನು ಚರ್ಚಿಸಲಿದ್ದಾರೆ.
* ಬ್ರ್ಯಾಂಡ್ ಪ್ರಸ್ತುತ ತನ್ನ ಎಲ್ಲಾ ಉತ್ಪನ್ನಗಳಲ್ಲಿ ವ್ಯಾಪಕ ಶ್ರೇಣಿಯ AI ತಂತ್ರಜ್ಞಾನವನ್ನು ಕಾರ್ಯಗತಗೊಳಿಸುತ್ತಿದೆ ಎಂದು ಉಲ್ಲೇಖಿಸಿದೆ.
Realme 13 Pro ಸರಣಿಯ ನಿರೀಕ್ಷಿತ ಫೀಚರ್ಸ್:
ಭಾರತದಲ್ಲಿ ಈ ಸರಣಿಯ ಮೊಬೈಲ್‌ಗಳು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಬ್ರ್ಯಾಂಡ್‌ನ ಪ್ರಕಾರ, ಇನ್ನೂ ಬಿಡುಗಡೆಯಾಗಬೇಕಿರುವ Realme 13 Pro ಸರಣಿಯು Realme ಪರಿಚಯಿಸಿದ ಮೊದಲ ವೃತ್ತಿಪರ AI ಕ್ಯಾಮೆರಾ ಫೋನ್ ಆಗಿರುತ್ತದೆ.
ಕ್ಯಾಮೆರಾ:
Realme 13 Pro OIS ಇದು EIS-ಸಕ್ರಿಯಗೊಳಿಸಿದ 12MP ಹಿಂಬದಿಯ ಕ್ಯಾಮೆರಾ f/1.8 ದ್ಯುತಿರಂಧ್ರದೊಂದಿಗೆ ಪ್ಯಾಕ್ ಮಾಡುವ ಸಾಧ್ಯತೆ ಇದೆ. ಇದು 50MP ಸೆನ್ಸಾರ್ ಜೊತೆಗೆ ಮಾರಾಟವಾಗಲಿದೆ. ಮುಂಬರುವ Realme ಫೋನ್ ಹೊಸ 50MP 3X ಪೆರಿಸ್ಕೋಪ್ ಕ್ಯಾಮೆರಾವನ್ನು ಸಹ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಸೆಲ್ಫಿಗಾಗಿ ಇದು EIS ಪ್ರಮಾಣಿಕೃತ 8.1MP ಮುಂಭಾಗದ ಕ್ಯಾಮೆರಾ ಹೊಂದಿರುವ ಸಾಧ್ಯತೆ ಇದೆ. ಇದು Realme 12 Pro ನ 16MP ಮುಂಭಾಗದ ಕ್ಯಾಮರಾಗೆ ಹೋಲಿಸಿದರೆ ಹೆಚ್ಚಿನ ರೆಸಲ್ಯೂಶನ್ ಎಂದು ನಿರೀಕ್ಷಿಸಲಾಗಿದೆ.
Realme 13 Pro 8GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಪ್ರಾರಂಭಿಸಬಹುದು. ಇದು 12GB RAM ನಲ್ಲಿ 256GB ಮತ್ತು 512GB ಇಂಟರ್‌ನಲ್ ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಮುಂಬರುವ Realme 13 Pro+ ಇದು 5,050mAh ಬ್ಯಾಟರಿ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. 'ಪ್ಲಸ್' ರೂಪಾಂತರವು ಇತರ ಕ್ಯಾಮೆರಾಗಳ ಜೊತೆಗೆ 50MP ಸೆನ್ಸಾರ್ ಹೊಂದಿರುವ ಸಾಧ್ಯತೆಗಳಿವೆ ಮತ್ತು Realme 13 Pro+ ನಲ್ಲಿ ಕಂಡುಬರುವ Qualcomm Snapdragon 7s Gen 2 ಚಿಪ್‌ಸೆಟ್‌ಗೆ ವ್ಯತಿರಿಕ್ತವಾಗಿ Qualcomm Snapdragon 7s Gen 3 SoC ರನ್ ಆಗುವ ಸಾಧ್ಯತೆ ಇದೆ.


Click it and Unblock the Notifications








