ರಿಯಲ್ಮಿ ನಾರ್ಜೊ 10 ಮತ್ತು ನಾರ್ಜೊ 10A ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧ!
ಟೆಕ್ ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ನವೀನ ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಹಾಕಿವೆ. ಹಲವು ಕಂಪೆನಿಗಳು ತಮ್ಮ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿವೆ. ಇವುಗಳಲ್ಲಿ ರಿಯಲ್ಮಿ ಕಂಪೆನಿ ಕೂಡ ಒಂದಾಗಿದೆ. ರಿಯಲ್‌ಮಿ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದ್ದು, ಸ್ಮಾರ್ಟ್‌ಪ್ರಿಯರ ವಲಯದಲ್ಲಿ ರಿಯಲ್‌ಮಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಪ್ರತಿನಿತ್ಯ ಒಂದಲ್ಲ ಒಂದು ವಿಚಾರದಲ್ಲಿ ಸದ್ದು ಮಾಡುತ್ತಿರುವ ರಿಯಲ್‌ಮಿ ಇದೀಗ ತನ್ನ ಹೊಸ ಮಾದರಿಯ ಎರಡು ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ ಎಂದು ಹೇಳಲಾಗ್ತಿದೆ.

ಹೌದು, ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ರಿಯಲ್‌ಮಿ ಕಡಿಮೆ ಅವಧಿಯಲ್ಲಿಯೇ ಏರುಗತಿಯಲ್ಲಿ ಜನಪ್ರಿಯತೆಯನ್ನ ಪಡೆದುಕೊಮಡಿದೆ. ಪ್ರತಿ ಆವೃತ್ತಿಯಲ್ಲೂ ಹೊಸತನದ ಫಿಚರ್ಸ್ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದ್ದು. ಇದೀಗ ತನ್ನ ಹೊಸ ಆವೃತ್ತಿಯ ನಾರ್ಜೊ 10 ಮತ್ತು ನಾರ್ಜೊ 10A ಸ್ಮಾರ್ಟ್‌ಫೋನ್‌ಗಳನ್ನು ಇದೇ ಮಾರ್ಚ್ 26 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಈ ಹೊಸ ಆವೃತ್ತಿಯು ‘ಜನರೇಷನ್' z 'ಅನ್ನು ಗುರಿಯಾಗಿರಿಸಿಕೊಂಡಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ
ರಿಯಲ್‌ಮಿ ನಾರ್ಜೊ 10 ಮತ್ತು 10A ಈ ಎರಡು ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ 6.50 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಈ ಡಿಸ್‌ಪ್ಲೇಯು ವಾಟರ್ ಡ್ರಾಪ್ ನಾಚ್ ಶೈಲಿಯನ್ನ ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ 89.8% ಸ್ಕ್ರೀನ್ ಟು ಬಾಡಿ ಅನುಪಾತವನ್ನ ಒಳಗೊಂಡಿದೆ. ಅಲ್ಲದೆ ಇದರ ಪಿಕ್ಸೆಲ್ ಸಾಂದ್ರತೆ ಉತ್ತಮವಾಗಿದ್ದು, ಈ ಸ್ಮಾರ್ಟ್‌ಫೋನ್‌ಗಳು ಗೇಮಿಂಗ್ ಟೆಕ್ನಾಲಜಿಗೆ ಉತ್ತಮ ಡಿಸ್‌ಪ್ಲೇ ಮಾದರಿಯನ್ನ ಒಳಗೊಂಡಿವೆ ಎಂದು ನಿರೀಕ್ಷಿಸಲಾಗಿದೆ.

ಪ್ರೊಸೆಸರ್
ಇನ್ನು ರಿಯಲ್‌ಮಿ ನಾರ್ಜೊ 10 ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G80 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಬೆಂಬಲದೊಮದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 3GB RAM ಮತ್ತು 64GB ಆಂತರಿಕ ಸಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ರಿಯಲ್‌ಮಿ ನಾರ್ಜೊ 10A ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G70 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ 3GB RAM ಮತ್ತು 32GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ
ರಿಯಲ್‌ಮಿ ನಾರ್ಜೊ 10 ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಹಾಗೇಯೆ ರಿಯಲ್‌ಮಿ ನಾರ್ಜೊ 10A ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಎರಡು ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿವೆ.

ಬ್ಯಾಟರಿ ಮತ್ತು ಲಭ್ಯತೆ
ಈ ಎರಡು ಸ್ಮಾರ್ಟ್‌ಫೋನ್‌ಗಳು 5,000 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಅಲ್ಲದೆ ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಬ್ಲೂಟೂತ್, ಹಾಟ್‌ಸ್ಪಾಟ್, ವೈಫೈ, ಅನ್ನು ಬೆಂಬಲಿಸಲಿವೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಇದೇ ಮಾರ್ಚ್ 26 ರಂದು ಬಿಡುಗಡೆಯಾಗಲಿದ್ದು, ಯಾವ ಬೆಲೆಯಲ್ಲಿ ಲಬ್ಯವಾಗಲಿದೆ ಅನ್ನೊದು ಇನ್ನು ತಿಳಿದುಬಂದಿಲ್ಲ. ಆದರೆ ಬಜೆಟ್ ಬೆಲೆಯಲ್ಲಿ ಲಬ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications




