Realme: ರಿಯಲ್‌ಮಿಯ ಈ ಫೋನ್ ಮೇಲೆ ಬರೋಬ್ಬರಿ 36% ಡಿಸ್ಕೌಂಟ್
ರಿಯಲ್‌ಮಿ ಕಂಪೆನಿಯ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಇದೇ ಹಾದಿಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರಿಯಲ್‌ಮಿ ನಾರ್ಜೊ 50i ಪ್ರೈಮ್ ಫೋನ್ ಅಮೆಜಾನ್‌ನಲ್ಲಿ ರಿಯಾಯಿತಿ ಪಡೆದುಕೊಂಡಿದೆ. ಇದರಿಂದ ಈ ಸ್ಮಾರ್ಟ್‌ಫೋನ್ ಅನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶ ಸಿಕ್ಕಂತಾಗಿದೆ.
ಹೌದು, ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಬರೋಬ್ಬರಿ 36% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಬದಲಾವಣೆಯಾಗಿದೆ. ಇನ್ನು ಸ್ಮಾರ್ಟ್‌ಫೋನ್ ಯುನಿಸೋಕ್ 9863 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಹಾಗಾದ್ರೆ ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ ಡಿಸ್ಕೌಂಟ್ ನಂತರದ ಬೆಲೆ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್ಕೌಂಟ್ ಏನಿದೆ?
ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ ಅಮೆಜಾನ್ ತಾಣದಲ್ಲಿ 9,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಇದು 36% ಡಿಸ್ಕೌಂಟ್ ಪಡೆದಿರುವುದರಿಂದ 6,399ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇದು 4GB RAM+64GB ಸ್ಟೋರೇಜ್ ಅಯ್ಕೆಗೆ ಅನ್ವಯವಾಗಲಿದೆ.
ರಿಯಲ್‌ಮಿ ನಾರ್ಜೊ 50i ಪ್ರೈಮ್ ಡಿಸ್‌ಪ್ಲೇ ರಚನೆ ಹೇಗಿದೆ?
ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಒಳಗೊಂಡಿದೆ. ಜೊತೆಗೆ 88.7 ಪ್ರತಿಶತದಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು 400 ನಿಟ್ ಬ್ರೈಟ್‌ನೆಸ್ ಲೆವೆಲ್ ಅನ್ನು ಹೊಂದಿದೆ.
ರಿಯಲ್‌ಮಿ ನಾರ್ಜೊ 50i ಪ್ರೈಮ್ ಪ್ರೊಸೆಸರ್ ಯಾವುದು?
ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ ಯುನಿಸೋಕ್ 9863 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI ಗೋ ಆವೃತ್ತಿ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 64 GB ಆಂತರಿಕ ಸ್ಟೋರೇಜ್ ಸಾಮರ್ಥ್ಯ ಅನ್ನು ಪಡೆದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೂ ಸಹ ವಿಸ್ತರಿಸಿಕೊಳ್ಳಬಹುದಾಗಿದೆ.

ರಿಯಲ್‌ಮಿ ನಾರ್ಜೊ 50i ಪ್ರೈಮ್ ಕ್ಯಾಮೆರಾ ಸೆಟಪ್ ಏನಿದೆ?
ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ AI ಪ್ರಮುಖ ಕ್ಯಾಮೆರಾವನ್ನು ಹೊಂದಿದ್ದು, ಜೊತೆಗೆ 5 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ.
ರಿಯಲ್‌ಮಿ ನಾರ್ಜೊ 50i ಪ್ರೈಮ್ ಬ್ಯಾಟರಿ ಮತ್ತು ಇತರೆ ಸೌಲಭ್ಯ
ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದಲ್ಲದೆ 43 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ಒದಗಿಸಲಿದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಹೊಂದಿದ್ದು, 4 ದಿನಗಳವರೆಗೆ ಆಡಿಯೊ ಪ್ಲೇಬ್ಯಾಕ್ ಬೆಂಬಲವನ್ನು ನೀಡಲಿದೆ.
ಲಬ್ಯತೆ ಕಲರ್ ಆಯ್ಕೆ ವಿವರ
ರಿಯಲ್‌ಮಿ ನಾರ್ಜೊ 50i ಪ್ರೈಮ್ ಮೊಬೈಲ್ ಫೋನ್ 4GB RAM + 64GB ಸ್ಟೋರೇಜ್ ವೇರಿಯಂಟ್ ಆಯ್ಕೆಗೆ ಮಾತ್ರ ಡಿಸ್ಕೌಂಟ್ ನೀಡಲಾಗುತ್ತಿದೆ. ಇದು ಮಿಂಟ್ ಗ್ರೀನ್ ಕಾರ್ಬನ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯ ಇದೆ.


Click it and Unblock the Notifications








