Home
ಸುದ್ದಿಜಾಲ

ರಿಯಲ್‌ಮಿ 60 5G ಸ್ಮಾರ್ಟ್‌ಫೋನ್‌ ಮೇಲೆ ಬಿಗ್‌ ಆಫರ್‌! 33W ವೇಗದ ಚಾರ್ಜಿಂಗ್‌!

ರಿಯಲ್‌ಮಿ ನಾರ್ಜೊ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ವಿಭಿನ್ನ ಶೈಲಿಯ ವಿನ್ಯಾಸ ಹಾಗೂ ರಿಯರ್‌ ಪ್ಯಾನಲ್‌ ಡಿಸೈನ್‌ನಿಂದಾಗಿ ಸಾಕಷ್ಟು ಗಮನಸೆಳೆದಿವೆ. ಇದರಲ್ಲಿ ರಿಯಲ್‌ಮಿ ನಾರ್ಜೊ 60 5G ಕೂಡ ಸೇರಿದೆ. ಇದೇ ವರ್ಷ ಬಿಡುಗಡೆ ಆಗಿ ಸಾಕಷ್ಟು ಸದ್ದು ಮಾಡುತ್ತಿರುವ ಈ ಸ್ಮಾರ್ಟ್‌ಫೋನ್‌ ಮೇಲೆ ಇದೀಗ ಅಮೆಜಾನ್‌ನಲ್ಲಿ ಡಿಸ್ಕೌಂಟ್‌ ನೀಡಲಾಗಿದೆ.

ಹೌದು, ರಿಯಲ್‌ಮಿ 60 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ ವಿಶೇಷ ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರ 8GB RAM +128GB ಸ್ಟೋರೇಜ್‌ ಆಯ್ಕೆಯ ಮೇಲೆ ಈ ಡಿಸ್ಕೌಂಟ್‌ ಅನ್ವಯಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 33W SuperVOOC ಫಾಸ್ಟ್‌ ಚಾರ್ಜಿಂಗ್‌ ಪಡೆದುಕೊಂಡಿರುವುದು ವಿಶೇಷ. ಹಾಗಾದ್ರೆ ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಮೇಲೆ ನೀಡಲಾಗ್ತಿರುವ ಡಿಸ್ಕೌಂಟ್‌ ಎಷ್ಟಿದೆ? ಇದರಿಂದ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಆಗಿರುವ ಬದಲಾವಣೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ 60 5G ಸ್ಮಾರ್ಟ್‌ಫೋನ್‌ ಮೇಲೆ ಬಿಗ್‌ ಆಫರ್‌! 33W ವೇಗದ ಚಾರ್ಜಿಂಗ್‌!

ರಿಯಲ್‌ಮಿ ನಾರ್ಜೊ 60 5G ಮೇಲೆ ವಿಶೇಷ ಆಫರ್‌
ರಿಯಲ್‌ಮಿ ನಾರ್ಜೊ 60 5G ಸ್ಮಾರ್ಟ್‌ಫೋನ್‌ ಅನ್ನು ಅಮೆಜಾನ್‌ ತಾಣದಲ್ಲಿ 19,999ರೂ ಬೆಲೆಗೆ ಪಟ್ಟಿಮಾಡಲಾಗಿದೆ. ಅಮೆಜಾನ್‌ ಈ ಸ್ಮಾರ್ಟ್‌ಫೋನ್‌ ಮೇಲೆ 10% ಡಿಸ್ಕೌಂಟ್‌ ನೀಡುತ್ತಿರುವುದರಿಂದ ಇದನ್ನು 17,999ರೂ ಬೆಲೆಗೆ ಖರೀದಿಸಬಹುದಾಗಿದೆ. ಇದು 8GB RAM +128GB ಇಂಟರ್‌ ಸ್ಟೋರೇಜ್‌ ಆಯ್ಕೆಗೆ ಅನ್ವಯವಾಗಲಿದೆ. ಇದರೊಂದಿಗೆ ನೋ ಕಾಸ್ಟ್‌ ಇಎಂಐ ಆಯ್ಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ರಿಯಲ್‌ಮಿ ನಾರ್ಜೊ 60 5G ಫೀಚರ್ಸ್‌ ಹೇಗಿದೆ?
ರಿಯಲ್‌ಮಿ ನಾರ್ಜೊ 60 5G ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್‌ ಸಪೋರ್ಟ್‌ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM + 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ರಿಯಲ್‌ಮಿ 60 5G ಸ್ಮಾರ್ಟ್‌ಫೋನ್‌ ಮೇಲೆ ಬಿಗ್‌ ಆಫರ್‌! 33W ವೇಗದ ಚಾರ್ಜಿಂಗ್‌!

ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಪಡೆದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಜೊತೆಗೆ ವಿಡಿಯೋ ರೆಕಾರ್ಡಿಂಗ್ ಸೇರಿದಂತೆ ಇತರೆ ಎಡಿಟಿಂಗ್ ಆಯ್ಕೆಗಳನ್ನು ಪಡೆದುಕೊಂಡಿದೆ.

ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W SuperVOOC ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi, ಬ್ಲೂಟೂತ್ ಮತ್ತು GPS ಅನ್ನು ಬೆಂಬಲಿಸಲಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌ ಅನ್ನು ಸಹ ಹೊಂದಿದೆ.

ರಿಯಲ್‌ಮಿ 60 5G ಸ್ಮಾರ್ಟ್‌ಫೋನ್‌ ಮೇಲೆ ಬಿಗ್‌ ಆಫರ್‌! 33W ವೇಗದ ಚಾರ್ಜಿಂಗ್‌!

ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ ನಾರ್ಜೋ 60 5G ಸ್ಮಾರ್ಟ್‌ಫೋನ್‌ 8GB + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯು ಇದೀಗ ಡಿಸ್ಕೌಂಟ್‌ ಪಡೆದುಕೊಂಡಿರುವುದರಿಂದ ಕೇವಲ ಬೆಲೆಯು 17,999ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯು 19,999ರೂ. ಬೆಲೆಯನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಕಾಸ್ಮಿಕ್‌ ಬ್ಲ್ಯಾಕ್‌ ಹಾಗೂ ಮಾರ್ಸ್ ಆರೇಂಜ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Realme narzo 60 5g Smartphone Gets Huge Discount On Amazon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+