ಮೊಬೈಲ್ ಖರೀದಿಸೋರು ಸ್ವಲ್ಪ ದಿನ ಕಾಯರಿ.. ಬರಲಿದೆ ರಿಯಲ್‌ಮಿ ನಾರ್ಜೊ 60x!
ಸ್ಮಾರ್ಟ್‌ಫೋನ್ ಪ್ರಿಯರ ಪಾಲಿನ ನೆಚ್ಚಿನ ಬ್ರ್ಯಾಂಡ್ ರಿಯಲ್‌ಮಿ ಕಂಪನಿ ಹೊಸ ಸುದ್ದಿಯನ್ನು ನೀಡಿದೆ. ವಿಭಿನ್ನ ಶ್ರೇಣಿಯ ಮೊಬೈಲ್‌ಗಳಿಗೆ ಪ್ರಸಿದ್ಧಿಯಾಗಿರುವ ರಿಯಲ್‌ಮಿ ಸದ್ಯದಲ್ಲೇ ರಿಯಲ್‌ಮಿ ನಾರ್ಜೊ 60x ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಸೆಪ್ಟೆಂಬರ್ 12 ರಂದು ಲಾಂಚ್ ಆಗಲಿದೆ.
ಹೌದು, ರಿಯಲ್‌ಮಿ ನಾರ್ಜೊ 60x ಸ್ಮಾರ್ಟ್‌ಫೋನ್ ಭಾರತಕ್ಕೆ ಎಂಟ್ರಿ ನೀಡುವ ಸಮಯ ಸನ್ನಿಹಿತವಾಗಿದೆ. ಈ ಮೂಲಕ ರಿಯಲ್‌ಮಿ ನಾರ್ಜೊ 60 ಮತ್ತು ನಾರ್ಜೊ 60 ಪ್ರೊ ಸ್ಮಾರ್ಟ್‌ಫೋನ್‌ಗಳ ನಂತರ ರಿಯಲ್‌ಮಿ ನಾರ್ಜೊ 60x ಕೂಡ ಬರುತ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್ ವೇಗವನ್ನು ಪಡೆದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ನಾರ್ಜೊ 60x ಫೀಚರ್ಸ್ ನಿರೀಕ್ಷೆ?
ರಿಯಲ್‌ಮಿ ನಾರ್ಜೊ 60x ಸ್ಮಾರ್ಟ್‌ಫೋನ್ 6.74 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ ಎನ್ನಲಾಗಿದೆ.
ರಿಯಲ್‌ಮಿ ನಾರ್ಜೊ 60x ಪ್ರೊಸೆಸರ್ ಯಾವುದು?
ರಿಯಲ್‌ಮಿ ನಾರ್ಜೊ 60x ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್ ವೇಗದೊಂದಿಗೆ ಬರಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ Realme UI 4.0 ನಲ್ಲಿ ರನ್ ಆಗುವ ಸಾಧ್ಯತೆಯಿದೆ. ಹಾಗೆಯೇ 6GB ಅಥವಾ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯ ವಿಸ್ತರಿಸುವ ಆಯ್ಕೆಯನ್ನು ನೀಡುವ ಸಾದ್ಯತೆಯಿದೆ.
ರಿಯಲ್‌ಮಿ ನಾರ್ಜೊ 60x ಕ್ಯಾಮೆರಾ ಸೆಟ್‌ಅಪ್ ಏನಿರಲಿದೆ?
ರಿಯಲ್‌ಮಿ ನಾರ್ಜೊ 60x ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ. ಇದರ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿರಲಿದೆ. ಇದು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿರಬಹುದು ಎಂಬ ನಿರೀಕ್ಷೆಯಿದೆ.
ರಿಯಲ್‌ಮಿ ನಾರ್ಜೊ 60x ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ ನಾರ್ಜೊ 60x ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೋಮೀಟರ್, ಕಂಪಾಸ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಹೊಂದಿರಲಿದೆ ಎಂದು ಅದಾಜಿಸಲಾಗಿದೆ.
ರಿಯಲ್‌ಮಿ ನಾರ್ಜೊ 60x ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ ನಾರ್ಜೊ 60x ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರ್ 12 ರಂದು ಬಿಡುಗಡೆ ಆಗಲಿದೆ. ಇದರ ಸೇಲ್ ಡೇಟ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ರಿಯಲ್‌ಮಿ ಬಡ್ಸ್ T300
ಇನ್ನು ಈ ಸ್ಮಾರ್ಟ್‌ಫೋನ್ ಜೊತೆಗೆ ರಿಯಲ್‌ಮಿ ಬಡ್ಸ್ T300 ಕೂಡ ಎಂಟ್ರಿ ನೀಡುವ ನಿರೀಕ್ಷೆಯಿದೆ. ಇನ್ನು ಈ ಇಯರ್‌ಬಡ್ಸ್ ಸ್ಪಷ್ಟ ಧ್ವನಿ ಮತ್ತು 30dB ಸಕ್ರಿಯ ಶಬ್ದ ರದ್ದತಿಗಾಗಿ 12.4mm ಡ್ರೈವರ್‌ಗಳನ್ನು ಒಳಗೊಂಡಿದೆ. ಜೊತೆಗೆ ಧೂಳು ಮತ್ತು ನೀರಿನ ರಕ್ಷಣೆಗಾಗಿ IP55 ರೇಟಿಂಗ್ ಅನ್ನು ಒಳಗೊಂಡಿದೆ. ಇದಲ್ಲದೆ ಕರೆಗಳ ಸಮಯದಲ್ಲಿ ಶಬ್ದ ಕಡಿತಕ್ಕಾಗಿ ನಾಲ್ಕು ಮೈಕ್ರೊಫೋನ್‌ಗಳನ್ನು ಹೊಂದಿದೆ. ಈ ಇಯರ್‌ಬಡ್ಸ್ 360-ಡಿಗ್ರಿ ಪ್ರಾದೇಶಿಕ ಆಡಿಯೊವನ್ನು ಬೆಂಬಲಿಸಲಿದೆ.


Click it and Unblock the Notifications








