ನಾಳೆ ರಿಯಲ್‌ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್ ಲಾಂಚ್!..ನಿರೀಕ್ಷೆ ಏನು?
ಮೊಬೈಲ್ ಪ್ರಿಯರು ಕಾತುರದಿಂದ ಎದುರುನೋಡುತ್ತಿರುವ ರಿಯಲ್‌ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್ ನಾಳೆ (ಮಾರ್ಚ್ 19 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಸ್ಮಾರ್ಟ್‌ಫೋನ್ ಬಿಡುಗಡೆಗೂ ಮುನ್ನವೇ ತನ್ನ ಕೆಲವು ಆಕರ್ಷಕ ಫೀಚರ್ಸ್‌ನಿಂದ ಗ್ರಾಹಕರ ಗಮನ ಸೆಳೆದಿದೆ.
ಹೌದು, ರಿಯಲ್‌ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಯಲ್ಲಿ ನಾಳೆ ಬಿಡುಗಡೆ ಆಗಲಿದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಬಗ್ಗೆ ದೈತ್ಯ ಇ ಕಾಮರ್ಸ್ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ತಿಳಿಸಲಾಗಿದೆ. ಇದು ಗೆಸ್ಚರ್ ಆಯ್ಕೆ ಪಡೆದಿರುವುದು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಹಾಗಾದ್ರೆ ರಿಯಲ್‌ಮಿ ನಾರ್ಜೋ 70 ಪ್ರೊ 5G ಪೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್ ನಿರೀಕ್ಷಿಸಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ರಿಯಲ್‌ಮಿ ನಾರ್ಜೋ 70 ಪ್ರೊ 5G ಫೀಚರ್ಸ್ ಹೀಗಿವೆ
ರಿಯಲ್‌ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಈ ಡಿಸ್‌ಪ್ಲೇಯು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಲಗ್ಗೆ ಇಡಲಿದೆ. ಇನ್ನು ಡಿಸ್‌ಪ್ಲೇ 405 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದರೊಂದಿಗೆ ಡಿಸ್‌ಪ್ಲೇಯು 120 Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.
ರಿಯಲ್‌ಮಿ ನಾರ್ಜೋ 70 ಪ್ರೊ 5G ಪ್ರೊಸೆಸರ್ ನಿರೀಕ್ಷೆ?
ರಿಯಲ್‌ಮಿ ಸಂಸ್ಥೆಯ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್ ಪವರ್ ಅನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್ 14 ಸಪೋರ್ಟ್ ಜೊತೆಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಆಂತರೀಕ ಸ್ಟೋರೇಜ್‌ನಲ್ಲಿ ಎಂಟ್ರಿ ಪಡೆಯಲಿದೆ. ಇದರೊಂದಿಗೆ 8GB ವರ್ಚುವಲ್ RAM ಬೆಂಬಲಿಸಲಿದ್ದು, ಮೆಮೊರಿ ಕಾರ್ಡ್ ಮೂಲಕ 1 TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ರಿಯಲ್‌ಮಿ ನಾರ್ಜೋ 70 ಪ್ರೊ 5G ಕ್ಯಾಮೆರಾ ಸಾಧ್ಯತೆ
ರಿಯಲ್‌ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್ ಲಾಂಚ್ ಮೈಕ್ರೋ-ಸೈಟ್ ಅಮೆಜಾನ್‌ನಲ್ಲಿ ಸಹ ಲೈವ್ ಆಗಿದೆ. ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದೆ ಎನ್ನಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸಾರ್ ಹೊಂದಿದೆ ಎಂದು ತಿಳಿಸುತ್ತದೆ. ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಬರಲಿದೆ.
ರಿಯಲ್‌ಮಿ ನಾರ್ಜೋ 70 ಪ್ರೊ 5G ಬ್ಯಾಟರಿ ಸಾಮರ್ಥ್ಯ
ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯವನ್ನು ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 33W ಡಾರ್ಟ್ ಚಾರ್ಜ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಸಪೋರ್ಟ್ ಮಾಡಲಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೋಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಪಡೆದಿರಲಿದೆ.
ಅಂದಹಾಗೆ ರಿಯಲ್‌ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಮಾರ್ಚ್ 19 ರಂದು ಲಾಂಚ್ ಆಗಲಿದೆ. ಈ ಸ್ಮಾರ್ಟ್‌ಫೋನ್‌ನ ಕಲರ್ ಆಯ್ಕೆಗಳು ಹಾಗೂ ಬೆಲೆ ವಿವರಗಳು ಇನ್ನು ಸಹ ಬಹಿರಂಗವಾಗಿಲ್ಲ. ಆದರೆ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ಗಳನ್ನು ಗಮನಿಸಿದರೆ ಮಿಡ್ ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಸುವುದಕ್ಕೆ ಸಾಧ್ಯವಿದೆ ಎಂದು ಹೇಳಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಚಿಲ್ಲರೆ ಅಂಗಡಿಗಳಲ್ಲಿ ಮಾತ್ರವಲ್ಲದೆ ಅಮೆಜಾನ್ ತಾಣದಲ್ಲಿ ಪ್ರತ್ಯೇಕವಾಗಿ ಮಾರಾಟ ಆಗಲಿದೆ.


Click it and Unblock the Notifications








