ಗೇಮಿಂಗ್ ಪ್ರಿಯರಿಗೆ ಖುಷಿ ಸುದ್ದಿ: ಇಂದು ಹೊಸ Realme 5G ಫೋನ್ ಸೇಲ್: ಬೆಲೆಯೂ ಕಡಿಮೆ!
ಗೇಮಿಂಗ್ ಪ್ರಿಯರಿಗೆ ಸಂತಸದ ಸುದ್ದಿ ಇದೆ. ಈ ಹೊಸ 5G ಫೋನ್ ಖರೀದಿಸಿದರೆ ಸಖತ್ ಆಫರ್ ಸಿಗುತ್ತದೆ. ಹೌದು, ರಿಯಲ್‌ಮಿ ಇತ್ತೀಚೆಗೆ ರಿಯಲ್‌ಮಿ ನಾರ್ಜೊ 70 ಟರ್ಬೊ 5G (Realme Narzo 70 Turbo 5G) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ವಿಶೇಷವಾಗಿ ಗೇಮಿಂಗ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಲಾಗಿದೆ. ಅಂದಹಾಗೆ, ಈ ಮೊಬೈಲ್ ಇಂದು (ಸೆ.16) ಮಧ್ಯಾಹ್ನ 12 ಗಂಟೆಗೆ ತನ್ನ ಮೊದಲ ಸೇಲ್ ಶುರು ಮಾಡಲಿದೆ. ಬನ್ನಿ, ಈ ಫೋನಿನ ಬೆಲೆ, ಕೊಡುಗೆಗಳು ಮತ್ತು ವಿಶೇಷತೆಗಳನ್ನು ಈ ಲೇಖನದಲ್ಲಿ ತಿಳಿಯೋಣ.
ನೀವು ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನನ್ನು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಖರೀದಿಸಬಹುದು. ಇದು 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನಿನಲ್ಲಿ MediaTek Dimensity 7300 Energy ಚಿಪ್‌ಸೆಟ್ ಒದಗಿಸಲಾಗಿದೆ. ಇದರಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಜೊತೆಗೆ, 26GB RAM, 5000mAh ಬ್ಯಾಟರಿ, ನೀರು ಮತ್ತು ಧೂಳು ನಿರೋಧಕ IP65 ರೇಟಿಂಗ್ ನಂತಹ ಅದ್ಭುತ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G: ವೈಶಿಷ್ಟ್ಯಗಳು
ಡಿಸ್ಪ್ಲೇ: ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ 6.67 ಇಂಚಿನ ಸ್ಯಾಮ್‌ಸಂಗ್ E4 ಒಎಲ್ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು 120 Hz ರಿಫ್ರೆಶ್ ದರ, 180Hz ಟಚ್ ಸ್ಯಾಂಪ್ಲಿಂಗ್ ದರ, 600 ನಿಟ್ಸ್ ಸರಾಸರಿ, 1200 ನಿಟ್ಸ್ ವರೆಗಿನ ಹೆಚ್ಚಿನ ಬ್ರೈಟ್‌ನೆಸ್ ಮತ್ತು AG DT Star 2 ಗಾಜಿನ ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್: ಹೊಸ ರಿಯಲ್‌ಮಿ ನಾರ್ಜೊ 70 ಟರ್ಬೊ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G 4nm ಚಿಪ್‌ಸೆಟ್ ಹೊಂದಿದೆ. ಇದು Android 14 ಆಧಾರಿತ Realme UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಅತ್ಯುತ್ತಮ ಗೇಮಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಕ್ಯಾಮೆರಾ: ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಫೋನಿನಲ್ಲಿ F1.8 ಅಪರ್ಚರ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ, f/2.4 ಅಪರ್ಚರ್‌ನೊಂದಿಗೆ 2 ಮೆಗಾಪಿಕ್ಸೆಲ್ ಲೆನ್ಸ್ ಸಹ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ: ಕಂಪನಿಯು ಈ ಹೊಸ ಫೋನನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಈ ಫೋನ್ 45 ವ್ಯಾಟ್ ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಚಾರ್ಜ್ ಆಗುತ್ತದೆ.
ಇತರೆ ಫೀಚರ್ಸ್: ಹೊಸ ರಿಯಲ್‌ಮಿ 5G ಫೋನ್ ನೀರು ನಿರೋಧಕ IP65 ರೇಟಿಂಗ್, ಮಳೆ ನೀರಿನ ಟಚ್ ವೈಶಿಷ್ಟ್ಯ ಹೊಂದಿದೆ. Wi-Fi 6, ಬ್ಲೂಟೂತ್ 5.4, ಡ್ಯುಯಲ್ ಸ್ಟಿರಿಯೊ, ಸ್ಪೀಕರ್, ಏರ್ ಮತ್ತು ಗೆಸ್ಚರ್, ರೀಡಿಂಗ್ ಮೋಡ್ ಸೇರಿದಂತೆ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ.
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ಬೆಲೆ
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಕಂಪನಿಯು 6GB + 128GB ಸ್ಟೋರೇಜ್ ರೂಪಾಂತರವನ್ನು 16,999 ರೂ.ಗೆ ಮಾರಾಟ ಮಾಡಲಿದೆ. 8GB + 128GB ಸ್ಟೋರೇಜ್ ರೂಪಾಂತರದ ಬೆಲೆ 17,999 ರೂ. ಇದೆ. 12GB + 256GB ಸ್ಟೋರೇಜ್ ಮಾದರಿಯು 20,999 ರೂ.ಗೆ ಲಭ್ಯವಿರಲಿದೆ. ನೀವು ಹಳದಿ, ಪರ್ಪಲ್, ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದು.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ಆಫರ್ ಬೆಲೆ
6GB + 128GB ಸ್ಟೋರೇಜ್ = 14,999 ರೂ.
8GB + 128GB ಸ್ಟೋರೇಜ್ = 15,999 ರೂ.
12GB + 256GB ಸ್ಟೋರೇಜ್ = 18,999 ರೂ.
ನೀವು ಈ ಫೋನ್ ಖರೀದಿ ಮೇಲೆ 2,000 ರೂ.ಗಳ ತ್ವರಿತ ಕೂಪನ್ ರಿಯಾಯಿತಿ ಪಡೆಯಬಹುದು. ಈ ಮೂಲಕ ಮೂಲ ಮಾದರಿಯ ಬೆಲೆ 14,999 ರೂ.ಗೆ ಇಳಿಕೆಯಾಗಲಿದೆ. 8GB+128GB ಸ್ಟೋರೇಜ್ ರೂಪಾಂತರವು 15,999 ರೂ. ಮತ್ತು 12GB+256GB ಸ್ಟೋರೇಜ್ ಮಾದರಿಯು 18,999 ರೂ. ಬೆಲೆಗೆ ಲಭ್ಯವಿರಲಿದೆ. ನೀವು, ಕಂಪನಿಯ ಅಧಿಕೃತ ವೆಬ್‌ಸೈಟ್ (realme.com) ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೇಜಾನ್ ಮತ್ತು ಇತರ ಚಿಲ್ಲರೆ ಮಳಿಗೆಗಳಲ್ಲಿ ಮಾರಾಟ ಪ್ರಾರಂಭಿಸುತ್ತದೆ.


Click it and Unblock the Notifications








