Realme: ಬರ್ತಿದೆ ಜಬರ್ದಸ್ತ್ ಫೋನ್: ಬಿಡುಗಡೆ ದಿನಾಂಕ ಪ್ರಕಟ, ಬೆಲೆ ಎಷ್ಟು?
ರಿಯಲ್‌ಮಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಹೊಸ ಫೋನ್ ಬಿಡುಗಡೆ ದಿನಾಂಕ ಘೋಷಣೆ. ಹೌದು, ರಿಯಲ್‌ಮಿ (Realme) ಕಂಪನಿಯು ರಿಯಲ್‌ಮಿ ನಾರ್ಜೊ 70 ಟರ್ಬೊ 5G (Realme Narzo 70 Turbo 5G) ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದು Narzo ಸರಣಿಯ ಹೊಸ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಆಕರ್ಷಕ ಮೋಟಾರ್‌ಸ್ಪೋರ್ಟ್ ಪ್ರೇರಿತ ವಿನ್ಯಾಸವನ್ನು ಹೊಂದಿರುತ್ತದೆ. ಮತ್ತು ಇದು ಹೊಸ ಟರ್ಬೊ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪನಿ ದೃಢಪಡಿಸಿದೆ.
ಹೌದು, ರಿಯಲ್‌ಮಿ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿದೆ. ಸೆಪ್ಟೆಂಬರ್ 9 ರಂದು ಮಧ್ಯಾಹ್ನ 12 ಗಂಟೆಗೆ ರಿಯಲ್‌ಮಿ ನಾರ್ಜೊ 70 ಟರ್ಬೊ 5G ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಈ ಈವೆಂಟ್ ಅನ್ನು ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಆಗಿ ನೋಡಬಹುದು. ಇದಲ್ಲದೆ, ಕಂಪನಿಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಈ ಫೋನಿನ ಲಾಂಚ್ ಅಪ್ಡೇಟ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

ರಿಯಲ್‌ಮಿ ನಾರ್ಜೊ 70 ಟರ್ಬೊ 5G ವಿನ್ಯಾಸ
ರಿಯಲ್‌ಮಿ ನಾರ್ಜೊ 70 ಟರ್ಬೊ 5G ನಯವಾದ ಮತ್ತು ಸ್ಲಿಮ್ ಲುಕ್ ಹೊಂದಿದೆ. ಇದು ಕೇವಲ 7.6 ಮಿಮೀ ದಪ್ಪವನ್ನು ಹೊಂದಿರುತ್ತದೆ. ಟೀಸರ್ ಚಿತ್ರದ ಪ್ರಕಾರ, ಫೋನ್ ಹಿಂಭಾಗದಲ್ಲಿ ಮಧ್ಯದಿಂದ ಹಳದಿ ಬಣ್ಣದ ಪಟ್ಟಿಗಳನ್ನು ಹೊಂದಿರುತ್ತದೆ. ಗೇಮಿಂಗ್ ತಂತ್ರಜ್ಞಾನದೊಂದಿಗೆ ಬರುತ್ತಿರುವ ರಿಯಲ್‌ಮಿ ನಾರ್ಜೊ 70 ಟರ್ಬೊ 5G ವಿನ್ಯಾಸ, ಗೇಮಿಂಗ್ ಮತ್ತು 5G ಕಾರ್ಯಕ್ಷಮತೆಯ ವಿಷಯದಲ್ಲಿ ಉತ್ತಮವಾಗಿದೆ ಎಂದು ಕಂಪನಿಯು ದೃಢಪಡಿಸಿದೆ.
ಈ ಫೋನಿನಲ್ಲಿದೆ ಹೊಸ 'ಟರ್ಬೊ ಟೆಕ್ನಾಲಜಿ'
ಕಂಪನಿಯು ಮುಂಬರುವ ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ನ್‌ನೊಂದಿಗೆ ಕಾರ್ಯಕ್ಷಮತೆಗೆ ಒತ್ತು ನೀಡುತ್ತಿದೆ. ನಾರ್ಜೊ 70 ಟರ್ಬೊ ಸುಧಾರಿತ ಹೊಸ 'ಟರ್ಬೊ ತಂತ್ರಜ್ಞಾನ' ಹೊಂದಿರುತ್ತದೆ ಎಂದು ಕಂಪನಿಯು ಹೇಳಿದೆ. ಇದರ ಹೊರತಾಗಿ, ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G SOC ಅನ್ನು ಹೊಂದಿರುತ್ತದೆ. ಕಂಪನಿಯು ಇದರ AnTuTu ಸ್ಕೋರ್ 7,50,000 ಕ್ಲೈಮ್ ಮಾಡಿದೆ.
ರಿಯಲ್‌ಮಿ ನಾರ್ಜೊ 70 ಟರ್ಬೊ 5G ವೈಶಿಷ್ಟ್ಯಗಳು
ಇತ್ತೀಚೆಗೆ, ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನಿನ ಬಣ್ಣ ಮತ್ತು RAM, ಸ್ಟೋರೇಜ್ ರೂಪಾಂತರಗಳನ್ನು ಬಹಿರಂಗಪಡಿಸಲಾಗಿದೆ. ಈ ಫೋನ್ ಮಾದರಿ ಸಂಖ್ಯೆ RMX5003 ಅನ್ನು ಹೊಂದಿರುತ್ತದೆ. ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ನೀವು ನೇರಳೆ, ಹಳದಿ ಮತ್ತು ಹಸಿರು ಬಣ್ಣಗಳಲ್ಲಿ ಖರೀದಿಸಬಹುದು.
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಮೊಬೈಲ್ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. 6GB RAM ಮತ್ತು 128GB ಸ್ಟೋರೇಜ್, 8GB RAM ಮತ್ತು 128GB ಸ್ಟೋರೇಜ್, 8GB RAM ಮತ್ತು 256GB ಸ್ಟೋರೇಜ್, 12GB RAM ಮತ್ತು 256GB ಸ್ಟೋರೇಜ್ ಒಳಗೊಂಡಿರಲಿದೆ.
ಕ್ಯಾಮೆರಾ ಸೆಟಪ್ ಹೇಗಿರಲಿದೆ?
ರಿಯಲ್‌ಮಿ ನಾರ್ಜೊ 70 ಟರ್ಬೊ 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದು 12.6 ಮೆಗಾಪಿಕ್ಸೆಲ್ (ಪಿಕ್ಸೆಲ್-ಬಿನ್ನಿಂಗ್ ಜೊತೆಗೆ 50MP) ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. F/1.9 ಅಪರ್ಚರ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಬೆಂಬಲದೊಂದಿಗೆ ಬರುತ್ತದೆ. 4,096 x 3,072 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಚಿತ್ರಗಳನ್ನು ಸೆರೆಹಿಡಿಯಲು ಅನುಕೂಲವಾಗುತ್ತದೆ. ಕಂಪನಿಯು ಈ ಫೋನನ್ನು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಪರಿಚಯಿಸಬಹುದು ಎನ್ನಲಾಗಿದೆ.
ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 4 ಮೆಗಾಪಿಕ್ಸೆಲ್ ಲೆನ್ಸ್ ಅನ್ನು ಅಳವಡಿಸಲಾಗುತ್ತದೆ. ಇದು EIS ಮತ್ತು f/2.5 ಅಪರ್ಚರ್ ಹೊಂದಿರಲಿದೆ. ಇನ್ನೂ, ಬಿಡುಗಡೆ ಸಮಯದಲ್ಲಿ ಫೋನ್‌ನಲ್ಲಿ 8 ಮೆಗಾಪಿಕ್ಸೆಲ್ ಅಥವಾ 16 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಮಾರಾಟ ಮಾಡಬಹುದು. ಪ್ರಸ್ತುತ ಈ ಫೋನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








