Home
ಸುದ್ದಿಜಾಲ

ಭಾರತದಲ್ಲಿ Narzo 80 Lite 5G ಫೋನ್ ಶೀಘ್ರದಲ್ಲೇ ಬಿಡುಗಡೆ?

ಕಳೆದ ಏಪ್ರಿಲ್‌ನಲ್ಲಷ್ಟೇ ರಿಯಲ್‌ಮಿ ತನ್ನ ಜನಪ್ರಿಯ Narzo ಸರಣಿಯಲ್ಲಿ Narzo 80 Pro 5G ಮತ್ತು Narzo 80x 5G ಎಂಬ ಎರಡು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತು. ಇದೀಗ ಕಂಪನಿಯು ಇವುಗಳ ಸಾಲಿಗೆ Narzo 80 Lite 5G ಎಂಬ ಮತ್ತೊಂದು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ. 91ಮೊಬೈಲ್ಸ್ ಹಿಂದಿ ವರದಿಗಳ ಪ್ರಕಾರ, ರಿಯಲ್‌ಮಿ Narzo 80 Lite 5G ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಬೆಲೆಯು ಕೇವಲ 9,999 ರೂ.ಗಳಿಂದ ಆರಂಭವಾಗುವ ಸಾಧ್ಯತೆ ಇದೆ.

91ಮೊಬೈಲ್ಸ್ ವರದಿಯ ಪ್ರಕಾರ, ರಿಯಲ್‌ಮಿ ನಾರ್ಜೊ 80 ಲೈಟ್ 5G ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದು ರಿಯಲ್‌ಮಿ ನಾರ್ಜೊ 80 ಸರಣಿಯಲ್ಲಿ ಮೂರನೇ ಮಾದರಿಯಾಗಿ ಬರಲಿದೆ ಮತ್ತು ಮಾದರಿ ಸಂಖ್ಯೆ RMX3945 ಅನ್ನು ಹೊಂದಿರುತ್ತದೆ. ಈ ಫೋನ್ ದೇಶದಲ್ಲಿ ವರ್ಚುವಲ್ RAM ವೈಶಿಷ್ಟ್ಯದ ಜೊತೆಗೆ 4GB +128GB ಮತ್ತು 6GB + 128GB ಎರಡು RAM ಮತ್ತು ಶೇಖರಣಾ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಬಣ್ಣದ ಆಯ್ಕೆಗಳ ವಿಷಯದಲ್ಲಿ, ಈ ರಿಯಲ್‌ಮಿ Narzo 80 Lite 5G ಫೋನ್ ಕ್ರಿಸ್ಟಲ್ ಪರ್ಪಲ್ ಮತ್ತು ಓನಿಕ್ಸ್ ಕಪ್ಪು ಛಾಯೆಗಳಲ್ಲಿ ಲಭ್ಯವಾಗಲಿದೆ ಎಂದು ವರದಿಯಾಗಿದೆ.

ಈ ವರದಿಯಂತೆ, ಮುಂಬರುವ Narzo 80 Lite 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಸಜ್ಜುಗೊಂಡಿರುವ ಸಾಧ್ಯತೆಯಿದೆ. ಇದು 120Hz ರಿಫ್ರೆಶ್ ದರದೊಂದಿಗೆ HD+ ಪರದೆಯನ್ನು ನೀಡಬಹುದು, ಇದು ಸುಗಮ ವೀಕ್ಷಣೆಯ ಅನುಭವವನ್ನು ಖಚಿತಪಡಿಸುತ್ತದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನ್ 6,000mAh ಬ್ಯಾಟರಿಯನ್ನು ಪ್ಯಾಕ್ ಮಾಡುವ ಸಾಧ್ಯತೆಯಿದೆ, ಇದು ದೀರ್ಘಕಾಲದ ಬಳಕೆಯನ್ನು ಖಾತ್ರಿಪಡಿಸುತ್ತದೆ. ಛಾಯಾಗ್ರಹಣ ವಿಭಾಗದಲ್ಲಿ, ಇದು 50-ಮೆಗಾಪಿಕ್ಸೆಲ್ ಸಾಮರ್ಥ್ಯದ ಡ್ಯುಯಲ್ ರಿಯರ್ ಕ್ಯಾಮೆರಾ ಯೂನಿಟ್ ಅನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ.

ನಿರೀಕ್ಷಿತ ಬೆಲೆ ಮತ್ತು ಹೋಲಿಕೆ
ವರದಿಗಳ ಪ್ರಕಾರ, ಮುಂಬರುವ ರಿಯಲ್‌ಮಿ Narzo 80 Lite 5G ಸ್ಮಾರ್ಟ್‌ಫೋನ್ 4GB RAM ರೂಪಾಂತರಕ್ಕೆ ರೂ. 9,999 ಮತ್ತು 6GB RAM ಮಾದರಿಗೆ ರೂ. 11,999 ಬೆಲೆ ಇರಬಹುದು ಎಂಬ ವದಂತಿಗಳಿವೆ. ಹೋಲಿಕೆಗಾಗಿ ನೋಡುವುದಾದರೆ, ರಿಯಲ್‌ಮಿ Narzo 80x 5G ಯ ಮೂಲ 6GB RAM + 128GB ಶೇಖರಣಾ ಆವೃತ್ತಿಯು ರೂ. 13,999 ಬೆಲೆಯಲ್ಲಿ ಲಭ್ಯವಿದೆ. ಇನ್ನು, ರಿಯಲ್‌ಮಿ Narzo 80 Pro 5G ಬೆಲೆಯು ಮೂಲ 8GB RAM + 128GB ಶೇಖರಣಾ ಆಯ್ಕೆಗೆ ರೂ. 19,999 ರಿಂದ ಪ್ರಾರಂಭವಾಗುತ್ತದೆ. ಹಾಗಾಗಿ, ಲೈಟ್ ಮಾದರಿಯ ಫೋನ್ ಬೆಲೆ ಕಡಿಮೆ ಇರುವ ಸಾಧ್ಯತೆ ಇದೆ.

ಭಾರತದಲ್ಲಿ Narzo 80 Lite 5G ಫೋನ್ ಶೀಘ್ರದಲ್ಲೇ ಬಿಡುಗಡೆ?

Realme Narzo 80 Pro 5G ಮತ್ತು Narzo 80x 5G ಏಪ್ರಿಲ್‌ನಿಂದ ದೇಶದಲ್ಲಿ ಖರೀದಿಗೆ ಲಭ್ಯವಿದೆ. ಇವುಗಳಲ್ಲಿ ರಿಯಲ್‌ಮಿ Narzo 80 Pro 5G ಫೋನ್ MediaTek Dimensity 7400 5G ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು Narzo 80x 5G ಪೋನ್ Dimensity 6400 5G ಚಿಪ್‌ಸೆಟ್ ಅನ್ನು ಹೊಂದಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು 6,000mAh ಬ್ಯಾಟರಿಗಳು ಮತ್ತು 50-ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್‌ಗಳನ್ನು ಹೊಂದಿವೆ. ಇದೇ ರೀತಿ Narzo 80 Lite 5G ಫೋನ್ ಕೂಡ 6,000mAh ಬ್ಯಾಟರಿಗಳು ಮತ್ತು 50-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ.

ಮತ್ತೊಂದೆಡೆ, ರಿಯಲ್‌ಮಿ Narzo 80 Lite 5G ಮತ್ತು ಇತ್ತೀಚೆಗೆ ಬಿಡುಗಡೆಯಾದ ರಿಯಲ್‌ಮಿ C73 5G ಒಂದೇ ರೀತಿಯ ವಿಶೇಷಣಗಳನ್ನು ಹೊಂದಿರಬಹುದು ಎಂದು ಸಹ ಹೇಳಲಾಗುತ್ತಿದೆ. Narzo 80 Lite ಗೆ ಸಂಬಂಧಿಸಿದ ಮಾದರಿ ಸಂಖ್ಯೆ (RMX3945) ಈಗಾಗಲೇ ರಿಯಲ್‌ಮಿ C73 ಹೆಸರಿನಲ್ಲಿ ವಿವಿಧ ಪ್ರಮಾಣೀಕರಣ ಸೈಟ್‌ಗಳಲ್ಲಿ ಕಾಣಿಸಿಕೊಂಡಿರುವುದರಿಂದ ಈ ಊಹಾಪೋಹಕ್ಕೆ ಪುಷ್ಠಿ ಸಿಕ್ಕಿದೆ. ಹಾಗಾದರೆ, ರಿಯಲ್‌ಮಿ Narzo 80 Lite 5G ಕುರಿತು ನಿಮ್ಮ ನಿರೀಕ್ಷೆಗಳೇನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Realme Narzo 80 Lite 5G is expected to be priced at Rs. 9,999 for the 4GB RAM version and Rs. 11,999 for the 6GB RAM variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+