12,499ಕ್ಕಿಂತ ಕಡಿಮೆ..! 6000mAh ಬ್ಯಾಟರಿಯ Realme ಫೋನ್.. ಆಫರ್ ಘೋಷಣೆ.. ಏ.9ಕ್ಕೆ ಲಾಂಚ್
ಸ್ಮಾರ್ಟ್‌ಫೋನ್ ಖರೀದಿಸುವಾಗ ಎಲ್ಲರೂ ಬ್ಯಾಟರಿ ಬ್ಯಾಕಪ್‌ಗೆ ಹೆಚ್ಚು ಒತ್ತು ನೀಡುತ್ತಾರೆ. ಬಹುತೇಕರು ಅಗ್ಗದ ಬೆಲೆಯಲ್ಲಿ ದೊಡ್ಡ ಬ್ಯಾಟರಿ ಹೊಂದಿರುವ ಮೊಬೈಲ್ ಹುಡುಕುತ್ತಾರೆ. ನೀವು ಸಹ ಬಿಗ್ ಬ್ಯಾಟರಿ ಹೊಂದಿರುವ 5G ಫೋನ್ ಖರೀದಿಸಲು ಬಯಸಿದರೆ, ಇಲ್ಲಿದೆ ಒಳ್ಳೆಯ ಸುದ್ದಿ. ಹೌದು, ರಿಯಲ್‌ಮಿ ಭಾರತದಲ್ಲಿ ತನ್ನ ನಾರ್ಜೊ ಸರಣಿಯನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಮಧ್ಯಮ ಬಜೆಟ್‌ನ ರಿಯಲ್‌ಮಿ ನಾರ್ಜೊ 80 ಪ್ರೊ 5G ಫೋನಿನ ಜೊತೆಗೆ ಕಡಿಮೆ ಬಜೆಟ್‌ನ ರಿಯಲ್‌ಮಿ ನಾರ್ಜೊ 80x 5G ಅನ್ನು ಸಹ ಲಾಂಚ್ ಮಾಡಲಾಗುವುದು. ಈ 5G ಫೋನ್ ಮಾರುಕಟ್ಟೆಗೆ ಬರುವ ಮೊದಲೇ, ಕಂಪನಿಯು ಇದರ ಬೆಲೆಯನ್ನು ಬಹಿರಂಗಪಡಿಸಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ರಿಯಲ್‌ಮಿ ನಾರ್ಜೊ 80x 5G (Realme Narzo 80X 5G) ಮತ್ತು ರಿಯಲ್‌ಮಿ ನಾರ್ಜೊ 80 ಪ್ರೊ 5G (Realme Narzo 80 Pro 5G) ಫೋನ್‌ಗಳು ಏಪ್ರಿಲ್ 9 ರಂದು ಭಾರತದಲ್ಲಿ ಬಿಡುಗಡೆಯಾಗಲಿವೆ. ಕಂಪನಿಯು ಅಂದು ಮಧ್ಯಾಹ್ನ 12 ಗಂಟೆಗೆ ಲಾಂಚ್ ಈವೆಂಟ್ ಆಯೋಜಿಸಿದೆ. ಈ ಫೋನ್ ಬಿಡುಗಡೆ ಸಮಾರಂಭವು ಕಂಪನಿಯ ವೆಬ್‌ಸೈಟ್, ರಿಯಲ್‌ಮಿ ಸೋಶಿಯಲ್ ಮೀಡಿಯಾ ವೇದಿಕೆಗಳು ಮತ್ತು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ನೇರ ಪ್ರಸಾರವಾಗಲಿದೆ. ನೀವು ರಿಯಲ್‌ಮಿ ನಾರ್ಜೊ 80x ಮತ್ತು ರಿಯಲ್‌ಮಿ ನಾರ್ಜೊ 80 ಪ್ರೊ 5G ಫೋನಿನ ಬಿಡುಗಡೆಯನ್ನು ಲೈವ್ ವೀಕ್ಷಿಸಬಹುದು.

ರಿಯಲ್ಮೆ ನಾರ್ಜೊ 80x 5G ಬೆಲೆ ಮತ್ತು ಮಾರಾಟದ ದಿನಾಂಕ
ಕಂಪನಿಯು ರಿಯಲ್‌ಮಿ ನಾರ್ಜೊ 80X 5G ಫೋನನ್ನು 13,000 ರೂ.ಗಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇದರ ಬೆಲೆ 12,499 ರೂ. ಅಥವಾ 12,999 ರೂ. ಆಗಿರಲಿದೆ. ಕಂಪನಿಯ ಪ್ರಕಾರ, ಏಪ್ರಿಲ್ 11 ರಿಂದ ಈ ಅಗ್ಗದ 5G ಫೋನಿನ ಮಾರಾಟವು ಪ್ರಾರಂಭವಾಗಲಿದೆ. ಇದು ಸೀಮಿತ ಅವಧಿಯ ಮಾರಾಟವಾಗಿದ್ದು, ನೀವು ಈ ಅವಧಿಯಲ್ಲಿ ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.
ರಿಯಲ್‌ಮಿ ನಾರ್ಜೊ 80x 5G ಫೋನಿನಮೊದಲ ಮಾರಾಟವು ಏಪ್ರಿಲ್ 11 ರಂದು ಸಂಜೆ 6 ರಿಂದ ಮಧ್ಯರಾತ್ರಿ 12 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ, ಫೋನನ್ನು ವಿಶೇಷ ಬೆಲೆಯಲ್ಲಿ ಖರೀದಿಸಬಹುದು. ಇದಲ್ಲದೆ, ಕಂಪನಿಯು ಆರಂಭಿಕ ಮಾರಾಟದ ಪ್ರಯುಕ್ತ ಆಫರ್‌ಗಳನ್ನು ಘೋಷಿಸಿದೆ. ಆರಂಭಿಕ ಮಾರಾಟ ಮುಗಿದ ಬಳಿಕ ರಿಯಲ್‌ಮಿ ನಾರ್ಜೊ 80x 5G ಬೆಲೆ 13,000 ರೂ.ಗಳಿಗಿಂತ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್ ಮೂಲಕ ನೂತನ ರಿಯಲ್‌ಮಿ 5G ಫೋನನ್ನು ಖರೀದಿಸಬಹುದು.
ರಿಯಲ್‌ಮಿ ನಾರ್ಜೊ 80x 5G ವೈಶಿಷ್ಟ್ಯಗಳು
ಕಂಪನಿಯು ರಿಯಲ್‌ಮಿ ನಾರ್ಜೊ 80x 5G ಫೋನನ್ನು ಮೀಡಿಯಾ ಟೆಕ್‌ನ ಡೈಮೆನಿಸ್ಟಿ 6400 ಆಕ್ಟಾ ಕೋರ್ ಪ್ರೊಸೆಸರ್‌ನೊಮದಿಗೆ ಬಿಡುಗಡೆ ಮಾಡಲಿದೆ. ಈ ರಿಯಲ್‌ಮಿ ಮೊಬೈಲ್‌ನ ಬ್ಯಾಟರಿ ಅದರ ಅತಿದೊಡ್ಡ ಯುಎಸ್‌ಪಿ ಆಗಿರುತ್ತದೆ. ಈ ಫೋನ್ ಶಕ್ತಿಶಾಲಿ 6,000mAh ಸಾಮರ್ಥ್ಯದ ಟೈಟಾನಿಯಂ ಬ್ಯಾಟರಿಯನ್ನು ಹೊಂದಿರುತ್ತದೆ. ಇದರೊಂದಿಗೆ 45W ವೇಗದ ಚಾರ್ಜಿಂಗ್ ತಂತ್ರಜ್ಞಾನ ಸಹ ಲಭ್ಯವಿರುತ್ತದೆ. ಈ ರಿಯಲ್‌ಮಿ ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ ಅಮೋಲೆಡ್ ಡಿಸ್ಪ್ಲೇಯೊಂದಿಗೆ ಬರಲಿದೆ. ಇದು ಮಿಲಿಟರಿ ದರ್ಜೆಯ ಬಾಡಿ ಮತ್ತು IP69 ರೇಟಿಂಗ್ ಪಡೆದಿದೆ.

ರಿಯಲ್‌ಮಿ ನಾರ್ಜೊ 80 ಪ್ರೊ 5G ವೈಶಿಷ್ಟ್ಯಗಳು
ರಿಯಲ್‌ಮಿ ನಾರ್ಜೊ 80 ಪ್ರೊ 5G ಗೇಮಿಂಗ್ ಫೋನ್ ಆಗಿದೆ. ಇದು ಮೀಡಿಯಾ ಟೆಕ್‌ನ ಡೈಮೆನಿಸ್ಟಿ 7400 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಈ ಮೊಬೈಲ್ ಗೇಮಿಂಗ್‌ಗಾಗಿ, ಇದು 6050mm² ದೊಡ್ಡ VC ಕೂಲಿಂಗ್ ಸಿಸ್ಟಮ್ ಹೊಂದಿದೆ. ಇದು ಗೇಮಿಂಗ್ ಮಾಡುವಾಗ ಮೊಬೈಲ್ ಅನ್ನು ತಂಪಾಗಿರಿಸುತ್ತದೆ. ಈ ಫೋನಿನಲ್ಲಿ 2500Hz ತ್ವರಿತ ಸ್ಪರ್ಶ ಮಾದರಿ ದರ ಲಭ್ಯವಿರುತ್ತದೆ. ಈ ರಿಯಲ್‌ಮಿ 5G ಫೋನ್ 6,000mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದೆ. ಈ ಮೊಬೈಲ್ ಅಮೋಲೆಡ್ ಡಿಸ್ಪ್ಲೇ, 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿರಲಿದೆ.


Click it and Unblock the Notifications








