ನಾಳೆ Realme Narzo N61 ಸೇಲ್: 7,000 ಕ್ಕಿಂತ ಕಡಿಮೆ ಬೆಲೆ! ಡಿಸ್ಕೌಂಟ್ ಕೂಡ ಇದೆ
Realme Nazo N61 Price: ರಿಯಲ್‌ಮಿ (Realme) ಕಂಪನಿಯು ಇತ್ತೀಚೆಗೆ ನೂತನ ರಿಯಲ್‌ಮಿ ನಾರ್ಜೊ N61 (Realme Narzo N61) ಫೋನನ್ನು ಬಿಡುಗಡೆ ಮಾಡಿದೆ. ಇದು 'Narzo' ಸರಣಿ ಅಡಿಯಲ್ಲಿ ಬಿಡುಗಡೆಯಾಗಿರುವ ಹೊಸ ಸ್ಮಾರ್ಟ್‌ಫೋನ್ ಆಗಿದೆ. ಕಂಪನಿಯು ಈ ಫೋನನ್ನು ಬಜೆಟ್ ವಿಭಾಗದಲ್ಲಿ ಪರಿಚಯಿಸಿದೆ. ನೀವು 7 ಅಥವಾ 8 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಹೊಸ ಫೋನ್ ಖರೀದಿಸಲು ಬಯಸಿದರೆ, ಇದು ಉತ್ತಮ ಆಯ್ಕೆಯಾಗಿದೆ. ಅಂದಹಾಗೆ, ಈ ಫೋನ್ ನಾಳೆಯಿಂದ (ಆಗಸ್ಟ್ 6) ಮೊದಲ ಮಾರಾಟ ಪ್ರಾರಂಭಿಸಲಿದೆ.
ರಿಯಲ್‌ಮಿ ನಾರ್ಜೊ N61 ಫೋನ್ 6.74 ಇಂಚಿನ HD+ 90Hz ಡಿಸ್ಪ್ಲೇಯನ್ನು ಹೊಂದಿದೆ. 6GB RAM ಮತ್ತು 128GB ಸ್ಟೋರೇಜ್, 6GB ಡೈನಾಮಿಕ್ RAM ಇದೆ. ಇದು Unisoc T612 ಪ್ರೊಸೆಸರ್, 32 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. 10W1 ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಫೋನಿನ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ ಬನ್ನಿ.

Realme Narzo N61 ಬೆಲೆ ಎಷ್ಟು?
- 4GB RAM + 64GB ಸ್ಟೋರೇಜ್ ಬೆಲೆ = ರೂ. 7,499
- 6GB RAM + 128GB ಸ್ಟೋರೇಜ್ ಬೆಲೆ = ರೂ. 8,499
ಕಂಪನಿಯು ರಿಯಲ್‌ಮಿ ನಾರ್ಜೊ N61 ಫೋನನ್ನು 7,000 ರೂ.ಗಳಿಗಿಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಕಲ್ಪಿಸಿದೆ. ಈ ಫೋನನ್ನು ವಾಯೇಜ್ ಬ್ಲೂ ಮತ್ತು ಮಾರ್ಬಲ್ ಬ್ಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಫೋನಿನ 4GB+64GB ಸ್ಟೋರೇಜ್ ಮಾದರಿಯ ಬೆಲೆ 7,499 ರೂ. ಆಗಿದೆ. 6GB+28GB ಸ್ಟೋರೇಜ್ ವೇರಿಯಂಟ್ 8,499 ರೂ. ಬೆಲೆಗೆ ಬಿಡುಗಡೆಯಾಗಿದೆ.
ಡಿಸ್ಕೌಂಟ್‌ನೊಂದಿಗೆ ಕೇವಲ 6,999 ರೂ.ಗೆ ಲಭ್ಯ
Realme Narzo N61 ಫೋನನ್ನು ರಿಯಲ್‌ಮಿನ ಅಧಿಕೃತ ವೆಬ್‌ಸೈಟ್ ಮತ್ತು ಅಮೇಜಾನ್ ಮೂಲಕ ಖರೀದಿಸಬಹುದು. ಕಂಪನಿಯು ಈ ಫೋನಿನ ಖರೀದಿಯ ಮೇಲೆ ಲಾಂಚ್ ಆಫರ್ ಸಹ ಘೋಷಿಸಿದೆ. ಕೂಪನ್ ರಿಯಾಯಿತಿಯೊಂದಿಗೆ 500 ರೂ. ಕಡಿಮೆ ಬೆಲೆಗೆ ಖರೀದಿಸಲು ಅವಕಾಶವನ್ನು ನೀಡಿದೆ. ಡಿಸ್ಕೌಂಟ್ ಬಳಿಕ ಕೇವಲ 6,999 ರೂ.ಗಳ ಆರಂಭಿಕ ಬೆಲೆಯಲ್ಲಿ ಈ ಫೋನ್ ಖರೀದಿಸಬಹುದು. ನಾಳೆ (ಆಗಸ್ಟ್ 6) ಮಧ್ಯಾಹ್ನ 12 ಗಂಟೆಗೆ ಈ ಫೋನಿನ ಮಾರಾಟವು ಪ್ರಾರಂಭವಾಗಲಿದೆ.
Realme Narzo N61 ಫೋನಿನ ಫೀಚರ್ಸ್
ರಿಯಲ್‌ಮಿ ನಾರ್ಜೊ N61 ಫೋನ್ ಅನ್ನು 6.74 ಇಂಚಿನ HD + ವಾಟರ್‌ಡ್ರಾಪ್ ನಾಚ್ ಡಿಸ್‌ಪ್ಲೇ ಹೊಂದಿದೆ. 1600 x 720 ಪಿಕ್ಸೆಲ್ ರೆಸಲ್ಯೂಶನ್, 90hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಬೆಂಬಲ ಮತ್ತು 560nits ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಮಿನಿ ಕ್ಯಾಪ್ಸುಲ್ 2.0 ವೈಶಿಷ್ಟ್ಯದೊಂದಿಗೆ ಫೋನನ್ನು ಪರಿಚಯಿಸಲಾಗಿದೆ. ಈ ಫೋನ್ UNISOC T612 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.
ರಿಯಲ್‌ಮಿ ನಾರ್ಜೊ N61 ಫೋನನ್ನು ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಫೋನ್ 4GB ಮತ್ತು 6GB RAM ಮತ್ತು 64GB ಮತ್ತು 128GB ಸ್ಟೋರೇಜ್‌ನೊಂದಿಗೆ ಬರುತ್ತದೆ. ಫೋನ್ 6GB ಡೈನಾಮಿಕ್ RAM ತಂತ್ರಜ್ಞಾನವನ್ನು ಹೊಂದಿದೆ. ಇದು 2TB ಮೆಮೊರಿ ಕಾರ್ಡ್ ಅನ್ನು ಬೆಂಬಲಿಸುತ್ತದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್
ರಿಯಲ್‌ಮಿ ನಾರ್ಜೊ N61 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. 32MP ಸೂಪರ್ ಕ್ಲಿಯರ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 5MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. USB ಟೈಪ್ C ಪೋರ್ಟ್ ಮತ್ತು 10W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.
ಇನ್ನೂ Realme Narzo N61 ಫೋನ್ ಎಐ (AI) ಬೂಸ್ಟ್ ಎಂಜಿನ್ ಅನ್ನು ಹೊಂದಿದೆ. ಇದು 3.5mm ಹೆಡ್‌ಫೋನ್ ಜ್ಯಾಕ್ ಮತ್ತು IP54 ರಕ್ಷಣೆ ಜೊತೆಗೆ ಬ್ಲೂಟೂತ್ 5.0 ಮತ್ತು 5GHz ವೈ-ಫೈ ತಂತ್ರಜ್ಞಾನವನ್ನು ಹೊಂದಿದೆ.


Click it and Unblock the Notifications








