Home
ಸುದ್ದಿಜಾಲ

ಇದನ್ನ ಬಿಡಬೇಡಿ! 7000mAh ಬ್ಯಾಟರಿ.. SONY ಕ್ಯಾಮೆರಾ.. ಯಾವ ಫೋನ್?

ರಿಯಲ್‌ಮಿ ಸಂಸ್ಥೆಯು ಹೊಸ ಮೊಬೈಲ್ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ರಿಯಲ್‌ಮಿ ನಿಯೋ 7 SE (Realme Neo7 SE) ಹೆಸರಿನೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೌದು, ಕಂಪನಿಯು ಇದೇ ಫೆಬ್ರವರಿ 25 ರಂದು ರಿಯಲ್‌ಮಿ ನಿಯೋ 7 SE ಅನ್ನು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಬಜೆಟ್‌ನಲ್ಲಿ ಬೆಲೆಯಲ್ಲಿ ಬರುತ್ತಿರುವ ಈ ಮೊಬೈಲ್ ಖರೀದಿಸಲು ರಿಯಲ್‌ಮಿ ಪ್ರಿಯರು ಕಾಯುತ್ತಿದ್ದಾರೆ. ಬನ್ನಿ, ಈ ಹೊಸ ಫೋನಿನ ಬೆಲೆ ವಿವರ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ರಿಯಲ್‌ಮಿ ನಿಯೋ 7 SE ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು 6.78 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 12GB RAM + 1TB ಸ್ಟೋರೇಜ್, 7000mAh ಬಿಗ್ ಬ್ಯಾಟರಿ ಮತ್ತು 80W ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

ಇದನ್ನ ಬಿಡಬೇಡಿ! 7000mAh ಬ್ಯಾಟರಿ.. SONY ಕ್ಯಾಮೆರಾ.. ಯಾವ ಫೋನ್?

ರಿಯಲ್‌ಮಿ ನಿಯೋ 7 SE ಬೆಲೆ (ನಿರೀಕ್ಷಿತ)

ರಿಯಲ್‌ಮಿ ನಿಯೋ 7 SE ಫೋನಿನ ಬೆಲೆಯೂ ಸೋರಿಕೆಯಾಗಿದೆ. ಆದರೆ, ಕಂಪನಿಯು ಈವರೆಗೆ ಅಧಿಕೃತವಾಗಿ ಬಹಿರಂಗಪಡಿಸಲ್ಲ. ಇದು 25,000 ರೂ.ಗಳ ಬಜೆಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ವರದಿಯ ಪ್ರಕಾರ, ಈ ಮೊಬೈಲ್ 23,965 ರೂ. ಆರಂಭಿಕ ಬೆಲೆ ಹೊಂದಿರುತ್ತದೆ. ಕಂಪನಿಯು ಇದೇ ಫೆಬ್ರವರಿ 25 ರಂದು ಬಿಡುಗಡೆಯಾಗಲಿದೆ. ಬಳಿಕ, ಇದರ ಅಧಿಕೃತ ಬೆಲೆ ಸಾರ್ವಜನಿಕವಾಗಲಿದೆ.

ರಿಯಲ್‌ಮಿ ನಿಯೋ 7 SE ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ ನಿಯೋ 7 SE ಫೋನ್ 6.78 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಇದು 2780 × 1264 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ರಿಯಲ್‌ಮಿ ನಿಯೋ 7 SE ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8400 ಪ್ರೊಸೆಸರ್‌ 4nm ಪ್ರೊಸೆಸರ್ ಹೊಂದಿರುತ್ತದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ ಯುಐ UI 6.0 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಇದು ಗ್ರಾಫಿಕ್ಸ್‌ಗಾಗಿ, ಮಾಲಿ G720 ಜಿಪಿಯು ಸಹ ಹೊಂದಿದೆ. ಈ ಮೊಬೈಲ್ 12GB RAM + 16GB RAM ನೊಂದಿಗೆ ಬರುತ್ತದೆ. ಇದು 256GB ಸ್ಟೋರೇಜ್, 512GB ಸ್ಟೋರೇಜ್ ಮತ್ತು 1 TB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಿಯೋ 7 SE ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ತಂತ್ರಜ್ಞಾನದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಹಾಗೆಯೇ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ ನಿಯೋ 7 SE ಫೋನ್ ಅದ್ಭುತ ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ. ಈ ರಿಯಲ್‌ಮಿ 7000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್‌ ಮಾಡಲು. 80W ವೇಗದ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗುವುದು. ಗೇಮಿಂಗ್ ಪ್ರಿಯರು ಹೆಚ್ಚಿನ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು.

ಇತರೆ ವೈಶಿಷ್ಟ್ಯಗಳು

ರಿಯಲ್‌ಮಿ ನಿಯೋ 7 SE ಮೊಬೈಲ್ 8.56 ಮಿಮೀ ದಪ್ಪ ಹೊಂದಿದೆ. ಹಾಗೆಯೇ 212.1 ತೂಕದೊಂದಿಗೆ ಬರುತ್ತದೆ. ಇದು ಇನ್ಫ್ರಾರೆಡ್ ಸೆನ್ಸರ್ ಮತ್ತು ಇನ್ ಡಿಸ್ಪ್ಲೇ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿದೆ. ಜೊತೆಗೆ ಸ್ಟೀರಿಯೊ ಸ್ಪೀಕರ್‌ ಸಪೋರ್ಟ್‌ ಪಡೆದಿದೆ. ಕನೆಕಟ್ಟಿವಿಟಿ ಆಯ್ಕೆಗಳಲ್ಲಿ ಹೈ-ರೆಸ್ ಆಡಿಯೋ, ಟೈಪ್ ಸಿ ಆಡಿಯೊ, 5G SA/NSA, ಡ್ಯುಯಲ್ 4G VoLTE ಮತ್ತು ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Realme Neo 7 SE and Realme Neo 7x launch date in China officially revealed: check price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+