Home
ಸುದ್ದಿಜಾಲ

ಇಂದು Realme Neo 7 ಲಾಂಚ್; 7000mAh ದೊಡ್ಡ ಬ್ಯಾಟರಿ.. 32MP ಸೆಲ್ಫಿ ಕ್ಯಾಮೆರಾ.. ಕಡಿಮೆ ಬೆಲೆ!

ರಿಯಲ್‌ಮಿ ಪ್ರಿಯರ ಕಾಯುವಿಕೆ ಮುಗಿಯಿತು! ಇಂದು ಹೊಸ ರಿಯಲ್‌ಮಿ ಫೋನ್‌ ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೌದು, ಕಂಪನಿಯು 7000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ರಿಯಲ್‌ಮಿ ನಿಯೋ 7 (Realme Neo 7) ಫೋನನ್ನು ಬಿಡುಗಡೆ ಮಾಡಲಿದೆ. ಮೊಬೈಲ್‌ ಪ್ರಿಯರು ಈ ಪವರ್‌ ಫುಲ್‌ ಮೊಬೈಲ್‌ಗಾಗಿ ಕಾಯುತ್ತಿದ್ದಾರೆ. ಇದು ಗೇಮಿಂಗ್ ಪ್ರಿಯರ ಹಾಟ್ ಫೇವರಿಟ್ ಆಗಿರಲಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ ನಿಯೋ 7 ಸ್ಮಾರ್ಟ್‌ಫೋನ್‌ ಮೂರು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ನೀವು ಸಬ್‌ಮರೀನ್ ಬ್ಲೂ, ಮೆಟಿಯೊರೈಟ್ ಬ್ಲ್ಯಾಕ್ ಮತ್ತು ಸಿಲ್ವರ್ ಸ್ಟಾರ್‌ಶಿಪ್ ಎಡಿಷನ್ ಬಣ್ಣದಲ್ಲಿ ಖರೀದಿಸಬಹುದು. ಫೋನಿನಲ್ಲಿ ಎರಡು ದೊಡ್ಡ ಕ್ಯಾಮೆರಾ ಲೆನ್ಸ್‌ ಇದೆ. ಜೊತೆಗೆ ಎಲ್‌ಇಡಿ ಫ್ಲ್ಯಾಷ್ ಲಭ್ಯವಿದೆ. ಇದು ಹಲವು ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಮೊದಲೇ ಹೇಳಿದಂತೆ 7000mAh ಸಾಮರ್ಥ್ಯದ ಬ್ಯಾಟರಿ ಇರಲಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 6.78 ಇಂಚಿನ ಡಿಸ್ಪ್ಲೇ ಹೊಂದಿದೆ.

ಇಂದು Realme Neo 7 ಲಾಂಚ್; 7000mAh ಬ್ಯಾಟರಿ.. 32MP ಸೆಲ್ಫಿ ಕ್ಯಾಮೆರಾ ಖಚಿತ

ರಿಯಲ್‌ಮಿ ನಿಯೋ 7 ಬೆಲೆ (ನಿರೀಕ್ಷಿತ)

ಕಂಪನಿಯು ಇಂದು (ಡಿ.11 ರಂದು) ಮಧ್ಯಾಹ್ನ 1.30 ಅಥವಾ ಸಂಜೆ 4 ಗಂಟೆಗೆ ರಿಯಲ್‌ಮಿ ನಿಯೋ 7 ಫೋನಿನ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ. ನೀವು, ಕಂಪನಿಯ ವೆಬ್‌ಸೈಟ್‌ನಲ್ಲಿ ಈ ಕಾರ್ಯಕ್ರಮವನ್ನು ಲೈವ್ ಆಗಿ ವೀಕ್ಷಿಸಬಹುದು. ಈ ಸ್ಮಾರ್ಟ್‌ಫೋನ್‌ 29,250 ​​ರೂ. ಆರಂಭಿಕ ಬೆಲೆ ಹೊಂದಿರಲಿದೆ. ಭಾರತದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ರಿಯಲ್‌ಮಿ ನಿಯೋ 7 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ರಿಯಲ್‌ಮಿ ನಿಯೋ 7 ಮೊಬೈಲ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಇದು 1,264 x 2,780 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 6000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ. ರಿಯಲ್‌ಮಿ GT ನಿಯೋ 6 ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಇದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ರಿಯಲ್‌ಮಿ ನಿಯೋ 7 ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 9300+ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ಈ ಮೊಬೈಲ್ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ ಯುಐ 5 ನೊಂದಿಗೆ ಕೆಲಸ ನಿರ್ವಹಿಸಲಿದೆ. ರಿಯಲ್‌ಮಿ GT ನಿಯೋ 6 ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8s ಜೆನ್ 3 ಪ್ರೊಸೆಸರ್‌ ಹೊಂದಿದೆ.

ಸ್ಟೋರೇಜ್ ಆಯ್ಕೆ

ರಿಯಲ್‌ಮಿ ನಿಯೋ 7 ಸ್ಮಾರ್ಟ್‌ಫೋನ್ 6GB + 128GB, 8GB + 256GB, 12GB +512GB ಮತ್ತು 16GB RAM + 1TB ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರಿಯಲ್‌ಮಿ GT ನಿಯೋ 6 ಮೊಬೈಲ್ 16GB RAM + 1TB ಸ್ಟೋರೇಜ್‌ ಹೊಂದಿದೆ.

ಕ್ಯಾಮೆರಾ ಸೆಟಪ್

ರಿಯಲ್‌ಮಿ ನಿಯೋ 7 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇರಲಿದೆ. ರಿಯಲ್‌ಮಿ GT ನಿಯೋ 6 ಮೊಬೈಲ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ ನಿಯೋ 7 ಫೋನ್‌ 7000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ರಿಯಲ್‌ಮಿ GT ನಿಯೋ 6 ಫೋನ್ 5500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 120W ಚಾರ್ಜಿಂಗ್ ಸೌಲಭ್ಯ ಹೊಂದಿದೆ. ರಿಯಲ್‌ಮಿ ನಿಯೋ 7 ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ.

Best Mobiles in India

English summary
Realme Neo 7 with 7000mAh Battery Launching Today: Expected specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+