Realme P1 Speed 5G ಬಿಡುಗಡೆ ದಿನಾಂಕ ಪ್ರಕಟ: ಕಡಿಮೆ ಬೆಲೆ.. ಫೀಚರ್ಸ್ ಹೇಗಿವೆ?
ರಿಯಲ್‌ಮಿ (Realme) ಕಂಪನಿಯು ಈ ವರ್ಷ ಭಾರತದಲ್ಲಿ ಅನೇಕ ಉತ್ತಮ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ಕೆಲವು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದೀಗ, ಕಂಪನಿಯು ಭಾರತದಲ್ಲಿ ಮತ್ತೊಂದು ಹೊಸ 5G ಮೊಬೈಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದುವೇ, ರಿಯಲ್‌ಮಿ P1 ಸ್ಪೀಡ್ 5G (Realme P1 Speed 5G) ಸ್ಮಾರ್ಟ್‌ಫೋನ್. ಕಂಪನಿಯು ಈ ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಬನ್ನಿ, ಈ ಫೋನಿನ ವಿಶೇಷತೆಗಳು ಮತ್ತು ಬಿಡುಗಡೆ ದಿನಾಂಕವನ್ನು ತಿಳಿಯೋಣ.
ವಿಶೇಷವೆಂದರೆ, ಕಂಪನಿಯು ರಿಯಲ್‌ಮಿ P1 ಸ್ಪೀಡ್ 5G ಅನ್ನು ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಿದೆ. ರಿಯಲ್‌ಮಿ ಈಗಾಗಲೇ, ತನ್ನ 'P' ಸರಣಿಯಲ್ಲಿ Realme P1 5G ಮತ್ತು Realme P1 Pro 5G ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದೀಗ, ರಿಯಲ್‌ಮಿ P1 ಸ್ಪೀಡ್ 5G ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G ಚಿಪ್‌ಸೆಟ್ ಹೊಂದಿರಲಿದೆ. 120Hz ರಿಫ್ರೆಶ್ ದರ, 256GB ಸ್ಟೋರೇಜ್‌ನೊಂದಿಗೆ ಬರುತ್ತದೆ.

ರಿಯಲ್‌ಮಿ P1 ಸ್ಪೀಡ್ 5G ಬಿಡುಗಡೆ ದಿನಾಂಕ
ರಿಯಲ್‌ಮಿ P1 ಸ್ಪೀಡ್ 5G ಫೋನ್ ಭಾರತದಲ್ಲಿ ಇದೇ ಅಕ್ಟೋಬರ್ 15, 2024 ರಂದು ಬಿಡುಗಡೆಯಾಗಲಿದೆ. ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಎನರ್ಜಿ 5G ಪ್ರೊಸೆಸರ್ ಲಭ್ಯವಿರುತ್ತದೆ ಎಂದು ಕಂಪನಿ ದೃಢಪಡಿಸಿದೆ. AnTuTu ಬೆಂಚ್‌ಮಾರ್ಕ್‌ನಲ್ಲಿ ಸ್ಮಾರ್ಟ್‌ಫೋನ್ 750,000 ಅಂಕಗಳನ್ನು ಗಳಿಸಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.
ಈ ಫೋನ್‌ನಲ್ಲಿ ನೀವು ಅತ್ಯುತ್ತಮ ಗೇಮಿಂಗ್ ಮತ್ತು ಮಲ್ಟಿ ಟಾಸ್ಕಿಂಗ್ ಕಾರ್ಯಕ್ಷಮತೆ ಮತ್ತು ಈ ವಿಭಾಗದಲ್ಲಿ ವೇಗವನ್ನು ಪಡೆಯಬಹುದು ಎಂದು ಕಂಪನಿ ತಿಳಿಸಿದೆ. ಬಿಡುಗಡೆಯಾಗಿರುವ ಟೀಸರ್ ಪೋಸ್ಟರ್‌ನಲ್ಲಿ, ಈ ಫೋನ್ ನೀಲಿ ಬಣ್ಣದಲ್ಲಿ ಕಾಣುತ್ತದೆ. ಮತ್ತು ಇದರ ಹಿಂಭಾಗದ ಪ್ಯಾನೆಲ್‌ನಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಸಹ ನೋಡಬಹುದು.
5000mAh ಬ್ಯಾಟರಿ, 45W ಚಾರ್ಜಿಂಗ್
ರಿಯಲ್‌ಮಿ P1 ಸ್ಪೀಡ್ 5G ಫೋನಿನ ಬ್ಯಾಟರಿ ಬಗ್ಗೆ ಹೇಳುವುದಾದರೆ, ಇದು 45W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುವ ಸಾಧ್ಯತೆಯಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡದಾದ ಅಮೋಲೆಡ್ ಡಿಸ್ಪ್ಲೇಯನ್ನು ಸಹ ಒದಗಿಸಲಾಗುತ್ತದೆ. ರಿಯಲ್‌ಮಿ P1 ಸ್ಪೀಡ್ 5G ಮೊಬೈಲ್ 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಸೆಟಪ್ ಹೊಂದಿರುವ ಸಾಧ್ಯತೆಯಿದೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್ ಹೊಂದಿದೆ.
ರಿಯಲ್‌ಮಿ P1 ಸ್ಪೀಡ್ 5G ಫೋನ್ ಖರೀದಿ ಎಲ್ಲಿ?
ನೂತನ ರಿಯಲ್‌ಮಿ P1 ಸ್ಪೀಡ್ 5G ಫೋನ್ ಬಿಡುಗಡೆ ಮಾಡಿದ ನಂತರ, ನೀವು ಕಂಪನಿಯ ವೆಬ್‌ಸೈಟ್ ಮತ್ತು ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು. ಉಳಿದಂತೆ, ರಿಯಲ್‌ಮಿ P1 ಸ್ಪೀಡ್ 5G ಫೋನ್‌ಗೆ ಸಂಬಂಧಿಸಿದ ಇನ್ನಿತರೆ ಮಾಹಿತಿಯು ಮುಂಬರುವ ದಿನಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಈ ಫೋನನ್ನು ಲಭ್ಯವಾಗುವಂತೆ ಮಾಡಲಿದೆ.
ರಿಯಲ್‌ಮಿ ಏಪ್ರಿಲ್‌ನಲ್ಲಿ Realme P1 5G ಮತ್ತು Realme P1 Pro 5G ಅನ್ನು ಬಿಡುಗಡೆ ಮಾಡಿತ್ತು. ಇದರ ಆರಂಭಿಕ ಬೆಲೆ ಕ್ರಮವಾಗಿ 14,999 ರೂ. ಮತ್ತು 19,999 ರೂ. ಆಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್ ಹೊಂದಿದೆ. ಆದರೆ, Realme P1 Pro 5G ಫೋನ್ ಸ್ನಾಪ್‌ಡ್ರಾಗನ್ 6 ಜೆನ್ 1 ಚಿಪ್‌ಸೆಟ್ ಅನ್ನು ಹೊಂದಿದೆ.


Click it and Unblock the Notifications








