Home
ಸುದ್ದಿಜಾಲ

ಇಂದು Realme P2 Pro 5G ಫಸ್ಟ್ ಸೇಲ್: ಕಡಿಮೆ ಬೆಲೆ.. ಜೊತೆಗೆ 3,000 ಡಿಸ್ಕೌಂಟ್!

ರಿಯಲ್‌ಮಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ಒಳ್ಳೆಯ ಸುದ್ದಿಯನ್ನು ತಂದಿದೆ. ಆಕರ್ಷಕ ನೋಟ ಮತ್ತು ಅದ್ಭುತ ವೈಶಿಷ್ಟ್ಯಗಳೊಂದಿಗೆ ಮತ್ತೊಂದು 5G ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೌದು, ಇತ್ತೀಚೆಗೆ ರಿಯಲ್‌ಮಿ P2 ಪ್ರೊ 5G (Realme P2 Pro 5G) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಫೋನ್‌ ಇಂದು (ಸೆ.17) ತನ್ನ ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಕಂಪನಿಯು ಯಾವೆಲ್ಲಾ ಆಫರ್‌ ನೀಡುತ್ತಿದೆ, ಬೆಲೆ ಎಷ್ಟು ಮತ್ತು ವಿಶೇಷತೆಗಳೇನು? ಎನ್ನುವುದನ್ನು ತಿಳಿಯೋಣ ಬನ್ನಿ.

ರಿಯಲ್‌ಮಿ ಭಾರತದಲ್ಲಿ ತನ್ನ 'P' ಸರಣಿಯನ್ನು ವಿಸ್ತರಿಸಿದೆ. ಇದಕ್ಕೆ ರಿಯಲ್‌ಮಿ P2 ಪ್ರೊ 5G ಹೊಸ ಸೇರ್ಪಡೆಯಾಗಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 7s Gen 2 ಪ್ರೊಸೆಸರ್‌ ಅನ್ನು ಹೊಂದಿದೆ. 6.7 ಇಂಚಿನ ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ದರ ಬೆಂಬಲಿಸುತ್ತದೆ. ಜೊತೆಗೆ, 50 ಮೆಗಾಪಿಕ್ಸೆಲ್ ಸೋನಿ LYT 600 ಪ್ರಾಥಮಿಕ ಕ್ಯಾಮೆರಾ, 5,200mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಕೆಲವು ಅದ್ಭುತ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇಂದು Realme P2 Pro 5G ಸೇಲ್: ಕಡಿಮೆ ಬೆಲೆ.. ಜೊತೆಗೆ 3,000 ಡಿಸ್ಕೌಂಟ್!

ರಿಯಲ್‌ಮಿ P2 ಪ್ರೊ 5G ಫೋನಿನ ಬೆಲೆ ವಿವರ

8GB + 128GB ಬೆಲೆ = 21,999 ರೂ.
12GB + 256GB ಬೆಲೆ = 24,999 ರೂ.
12GB + 512GB ಬೆಲೆ = 27,999 ರೂ.

ರಿಯಲ್‌ಮಿ ಕಂಪನಿಯು ಹೊಸ ಫೋನನ್ನು ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟ ಮಾಡಲಿದೆ. ಫೋನಿನ 8GB + 128GB ಸ್ಟೋರೇಜ್‌ ಮಾದರಿಯು 21,999 ರೂ.ಗೆ ಲಭ್ಯವಿರಲಿದೆ. 12GB + 256GB ಸ್ಟೋರೇಜ್‌ ರೂಪಾಂತರವು 24,999 ರೂ.ಗೆ ಮಾರಾಟವಾಗಲಿದೆ. ಮತ್ತು 12GB + 512GB ಸ್ಟೋರೇಜ್‌ ಮಾದರಿಯು 27,999 ರೂ.ಗೆ ಲಭ್ಯವಿರುತ್ತದೆ. ನೀವು ಪ್ಯಾರಟ್ ಗ್ರೀನ್ ಮತ್ತು ಈಗಲ್ ಗ್ರೇ ಬಣ್ಣದಲ್ಲಿ ಈ ಫೋನನ್ನು ಖರೀದಿಸಬಹುದು.

ರಿಯಲ್‌ಮಿ P2 ಪ್ರೊ 5G ಫೋನಿನ ರಿಯಾಯಿತಿ ಬೆಲೆ

8GB + 128GB ಬೆಲೆ = 19,999 ರೂ.
12GB + 256GB ಬೆಲೆ = 21,999 ರೂ.
12GB + 512GB ಬೆಲೆ = 24,999 ರೂ.

ರಿಯಲ್‌ಮಿ ತನ್ನ ಹೊಸ ಫೋನಿನ ಮೊದಲ ಮಾರಾಟದ ಭಾಗವಾಗಿ 3,000 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಕೆಲವು ಆಯ್ದೆ ಬ್ಯಾಂಕ್‌ ಕಾರ್ಡ್‌ಗಳ ಮೇಲೆ ಡಿಸ್ಕೌಂಟ್‌ ಲಭ್ಯವಿರುತ್ತದೆ. ಜೊತೆಗೆ, ಎಕ್ಸ್‌ಚೇಂಜ್‌ ಆಫರ್‌ ಕೂಡ ಇರುತ್ತದೆ. ನೀವು ಇಂದಿನಿಂದ (ಸೆ.17) ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇತರೆ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ಫೋನನ್ನು ಖರೀದಿಸಬಹುದು.

ರಿಯಲ್‌ಮಿ P1 ಪ್ರೊ 5G ಫೋನಿನ ವೈಶಿಷ್ಟ್ಯಗಳು

ಡಿಸ್ಲ್ಪೇ: ನೂತನ ರಿಯಲ್‌ಮಿ P1 ಪ್ರೊ 5G ಫೋನ್ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಕರ್ವ್ಡ್ ಸ್ಯಾಮ್‌ಸಂಗ್ ಅಮೋಲೆಡ್ ಡಿಸ್ಲ್ಪೇಯನ್ನು ಹೊಂದಿದೆ. ಇದು 2412 X 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌, 120Hz ರಿಫ್ರೆಶ್ ರೇಟ್ ಮತ್ತು 240Hz ಸ್ಪರ್ಶ ಮಾದರಿ ದರವನ್ನು ಹೊಂದಿದೆ.

ಪ್ರೊಸೆಸರ್: ಕಂಪನಿಯ ಈ ಸ್ಮಾರ್ಟ್‌ಫೋನ್ Qualcomm Snapdragon 7s Gen 2 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ 5.0 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ ಅಡ್ರಿನೊ ಜಿಪಿಯು ಅನ್ನು ಬಳಸಲಾಗುತ್ತದೆ. ಇದರಲ್ಲಿ LPDDR4x RAM ಮತ್ತು UFS 3.1 ಇಂಟರ್ನಲ್ ಸ್ಟೋರೇಜ್‌ ಸೌಲಭ್ಯ ಇದೆ. 8GB+128GB, 12GB+256GB ಮತ್ತು 12GB+512GB ಸ್ಟೋರೇಜ್‌ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ: ಕಂಪನಿಯು ರಿಯಲ್‌ಮಿ P1 ಪ್ರೊ 5G ಅನ್ನು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಸೋನಿ LYTIA 600 ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಇದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ: ರಿಯಲ್‌ಮಿ P1 ಪ್ರೊ 5G ಫೋನ್ 5,200mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇದನ್ನು ಚಾರ್ಜ್‌ ಮಾಡಲು 80 ವ್ಯಾಟ್ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಬೆಂಬಲ ಇದೆ. 49 ನಿಮಿಷಗಳಲ್ಲಿ ಶೇ. 100 ರಷ್ಟು ಚಾರ್ಜ್ ಮಾಡಬಹುದು.

ಎಐ ವೈಶಿಷ್ಟ್ಯಗಳು: ರಿಯಲ್‌ಮಿ P1 ಪ್ರೊ 5G ಮೊಬೈಲ್ ಕೆಲವು ಎಐ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಇದು ಎಐ ಹೈಪರ್‌ರಾ ಅಲ್ಗಾರಿದಮ್, ಎಐ ಪೋರ್ಟ್ರೇಟ್ ಎಐ ಅಲ್ಟ್ರಾ ಕ್ಲಾರಿಟಿ, ಎಐ ಗ್ರೂಪ್ ಫೋಟೋ ವರ್ಧನೆ ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Realme P2 Pro 5G Goes on First Sale in India Today Via Flipkart: know Price, Offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+