Home
ಸುದ್ದಿಜಾಲ

ಬಿದ್ದರೂ ಹಾಳಾಗದ ಕಡಿಮೆ ಬೆಲೆಯ ಹೊಸ Realme 5G ಫೋನ್ ಇಂದಿನಿಂದ ಮಾರಾಟಕ್ಕೆ!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Realme ತನ್ನ ಹೊಸ ಮತ್ತು ಅತ್ಯಾಕರ್ಷಕ ಸ್ಮಾರ್ಟ್‌ಫೋನ್ Realme P3 Lite 5G ಅನ್ನು ಭಾರತೀಯ ಮಾರುಕಟ್ಟೆಗೆ ಇತ್ತೀಚಿಗಷ್ಟೇ ಪರಿಚಯಿಸಿದೆ. ಯುವ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಫೋನ್, ಸೆಪ್ಟೆಂಬರ್ 15 ರಂದು ಬಿಡುಗಡೆಯಾಗಿ, ಈಗ ಸೆಪ್ಟೆಂಬರ್ 22 ರಿಂದ ಮಾರಾಟಕ್ಕೆ ಬಂದಿದೆ. ಇದು Realme 'P' ಸರಣಿಯ ಹೊಸ ಸೇರ್ಪಡೆಯಾಗಿದ್ದು, ದೇಶದ ಬಜೆಟ್ ಫೋನ್‌ಗಳ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಅದರ ಪ್ರಮುಖ ವೈಶಿಷ್ಟ್ಯಗಳು, ಬೆಲೆ ಮತ್ತು ಮಾರುಕಟ್ಟೆಯಲ್ಲಿನ ಇತರ ಫೋನ್‌ಗಳೊಂದಿಗೆ ಅದರ ಹೋಲಿಕೆಯನ್ನು ಇಲ್ಲಿ ನೋಡೋಣ.

ಬೆಲೆ, ಲಭ್ಯತೆ ಮತ್ತು ಆಫರ್‌ಗಳು
Realme P3 Lite 5G ಫೋನ್ ಎರಡು ವಿಭಿನ್ನ ಆವೃತ್ತಿಗಳಲ್ಲಿ ಲಭ್ಯವಿದೆ. 4GB RAM ಮತ್ತು 128GB ಸಂಗ್ರಹಣೆಯ ಆವೃತ್ತಿಗೆ ರೂ. 12,999 ಬೆಲೆ ನಿಗದಿಪಡಿಸಲಾಗಿದೆ, ಆದರೆ 6GB RAM ಮತ್ತು 128GB ಸಂಗ್ರಹಣೆಯ ಆವೃತ್ತಿಗೆ ರೂ. 13,999 ಬೆಲೆ ಇದೆ. ಬಿಡುಗಡೆಯ ಆಫರ್‌ನ ಅಡಿಯಲ್ಲಿ, ಗ್ರಾಹಕರು ಈ ಫೋನ್‌ಗಳನ್ನು ಕ್ರಮವಾಗಿ ಕೇವಲ ರೂ. 10,499 ಮತ್ತು ರೂ. 11,499 ರಿಯಾಯಿತಿ ದರದಲ್ಲಿ ಖರೀದಿಸಬಹುದು. ಈ ಫೋನ್ Flipkart ಮತ್ತು Realme ಆನ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಿದ್ದು, ಲಿಲಿ ವೈಟ್, ಪರ್ಪಲ್ ಬ್ಲಾಸಮ್, ಮತ್ತು ಮಿಡ್‌ನೈಟ್ ಲಿಲಿ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಆಯ್ಕೆ ಮಾಡಬಹುದು.

Realme P3 Lite 5G: ಪ್ರಮುಖ ವೈಶಿಷ್ಟ್ಯಗಳು
ಹೊಸ Realme P3 Lite 5G ಫೋನ್ 6.67 ಇಂಚಿನ HD+ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದರಲ್ಲಿರನ 625 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನಿಂದಾಗಿ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲೂ ಪರದೆಯನ್ನು ಸುಲಭವಾಗಿ ನೋಡಬಹುದು. ಇದಲ್ಲದೆ, ಈ ಫೋನ್ IP64 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಹನಿಗಳಿಂದ ರಕ್ಷಣೆ ನೀಡುತ್ತದೆ. ವಿಶೇಷವಾಗಿ 'ರೇನ್‌ವಾಟರ್ ಸ್ಮಾರ್ಟ್ ಟಚ್' ವೈಶಿಷ್ಟ್ಯವು ಒದ್ದೆಯಾದ ಕೈಗಳಿಂದಲೂ ಸುಲಭವಾಗಿ ಫೋನ್ ಬಳಸಲು ಸಹಾಯ ಮಾಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

ಕಾರ್ಯಕ್ಷಮತೆಗಾಗಿ, ಈ Realme P3 Lite 5G, 6nm ತಂತ್ರಜ್ಞಾನ ಆಧಾರಿತ ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್ ಹೊಂದಿದೆ. ಇದರಲ್ಲಿ 6GB ವರೆಗೆ RAM ಇದ್ದು, ಜೊತೆಗೆ ಹೆಚ್ಚುವರಿ 18GB ವರೆಗೆ ವರ್ಚುವಲ್ RAM ಸೌಲಭ್ಯವನ್ನೂ ನೀಡಲಾಗಿದೆ. ಇದರಿಂದ ಹೆಚ್ಚು ಆ್ಯಪ್‌ಗಳನ್ನು ಒಂದೇ ಸಮಯದಲ್ಲಿ ಸುಲಭವಾಗಿ ಬಳಸಬಹುದು. ಫೋನ್‌ನ 128GB ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಮತ್ತು ಈ ಫೋನ್ ಆಂಡ್ರಾಯ್ಡ್ 15 ಆಧಾರಿತ Realme UI 6.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಬಿದ್ದರೂ ಹಾಳಾಗದ ಕಡಿಮೆ ಬೆಲೆಯ ಹೊಸ Realme 5G ಫೋನ್ ಇಂದಿನಿಂದ ಮಾರಾಟಕ್ಕೆ!

ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, ಈ ಫೋನ್ ಎಲ್ಲರನ್ನು ಆಶ್ಚರ್ಯಗೊಳಿಸಿದೆ. 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಜೊತೆಗೆ, 45W ವೇಗದ ಚಾರ್ಜಿಂಗ್ ಬೆಂಬಲ ಇರುವುದರಿಂದ, ಫೋನ್ ಅನ್ನು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಫೋಟೋಗ್ರಫಿ ಪ್ರಿಯರಿಗೆ, ಈ ಪೋನಿನಲ್ಲಿ ಉತ್ತಮ ಕ್ಯಾಮೆರಾ ವ್ಯವಸ್ಥೆ ನೀಡಲಾಗಿದೆ. ಇದರ ಹಿಂಭಾಗದಲ್ಲಿ 32 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಇದ್ದು, ಇದು ಸ್ಪಷ್ಟ ಮತ್ತು ಸುಂದರ ಫೋಟೊಗಳನ್ನು ಸೆರೆಹಿಡಿಯುತ್ತದೆ. ಸೆಲ್ಫಿಗಾಗಿ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಸಂಪರ್ಕ ಆಯ್ಕೆಗಳ, ಈ ಫೋನ್ ಬ್ಲೂಟೂತ್ 5.3, 5G, 4G LTE, GPS, USB ಟೈಪ್-C ಪೋರ್ಟ್ ಮತ್ತು ವೈ-ಫೈ ವೈಶಿಷ್ಟ್ಯಗಳನ್ನು ಹಾಗೂ ಇದು ಹೈ-ರೆಸಲ್ಯೂಷನ್ ಆಡಿಯೊ ಪ್ರಮಾಣೀಕರಣವನ್ನು ಹೊಂದಿದೆ ಮತ್ತು OReality ಆಡಿಯೊ ಬೆಂಬಲದೊಂದಿಗೆ ಸ್ಪೀಕರ್‌ಗಳನ್ನು ಒಳಗೊಂಡಿದೆ. ಆನ್‌ಬೋರ್ಡ್ ಸೆನ್ಸರ್‌ಗಳಲ್ಲಿ ವೇಗವರ್ಧನೆ ಸಂವೇದಕ, ಕೆಪ್ಯಾಸಿಟಿವ್ ಫಿಂಗರ್‌ಪ್ರಿಂಟ್ ಸೆನ್ಸರ್, ಫ್ಲಿಕರ್ ಸಂವೇದಕ, ಲೈಟ್ ಸೆನ್ಸರ್ ಮತ್ತು ಜಿಯೋಮ್ಯಾಗ್ನೆಟಿಕ್ ಸೆನ್ಸರ್ ಸೇರಿವೆ. ಇನ್ನು ಈ ಫೋನ್ 197 ಗ್ರಾಂ ತೂಕ ಮತ್ತು ಕೇವಲ 7.94mm ದಪ್ಪವಿದೆ.

ಬಿದ್ದರೂ ಹಾಳಾಗದ ಕಡಿಮೆ ಬೆಲೆಯ ಹೊಸ Realme 5G ಫೋನ್ ಇಂದಿನಿಂದ ಮಾರಾಟಕ್ಕೆ!

ಇತರ ಫೋನ್‌ಗಳೊಂದಿಗೆ ಹೋಲಿಕೆ
ಭಾರತದ ಮಾರುಕಟ್ಟೆಯಲ್ಲಿ Realme P3 Lite 5G ಯನ್ನು ಅದೇ ಬೆಲೆಯ ವಿಭಾಗದಲ್ಲಿರುವ Samsung Galaxy M15, Redmi 13C ಮತ್ತು POCO M6 Pro 5G ಯಂತಹ ಫೋನ್‌ಗಳೊಂದಿಗೆ ಹೋಲಿಸಬಹುದು.

  • ಬ್ಯಾಟರಿ: Realme P3 Lite 5G ಯ 6,000mAh ಬ್ಯಾಟರಿ ಸಾಮರ್ಥ್ಯವು ಈ ವಿಭಾಗದಲ್ಲಿರುವ ಹೆಚ್ಚಿನ ಫೋನ್‌ಗಳಿಗಿಂತ ಉತ್ತಮವಾಗಿದೆ. Samsung Galaxy M15 ಕೂಡ 6,000mAh ಬ್ಯಾಟರಿ ಹೊಂದಿದೆ, ಆದರೆ ಇತರ ಫೋನ್‌ಗಳು ಸಾಮಾನ್ಯವಾಗಿ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತವೆ.
  • ಬಾಳಿಕೆ: IP64 ರೇಟಿಂಗ್ ಮತ್ತು 'ರೇನ್‌ವಾಟರ್ ಸ್ಮಾರ್ಟ್ ಟಚ್' ವೈಶಿಷ್ಟ್ಯಗಳು ಈ ಫೋನ್‌ಗೆ ಹೆಚ್ಚಿನ ಬಾಳಿಕೆ ನೀಡುತ್ತವೆ. ಈ ವೈಶಿಷ್ಟ್ಯಗಳು ಇದೇ ಬೆಲೆಯ ವಿಭಾಗದಲ್ಲಿರುವ ಇತರ ಫೋನ್‌ಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಿಲ್ಲ.
  • ಕ್ಯಾಮೆರಾ: ಕ್ಯಾಮೆರಾ ವಿಚಾರದಲ್ಲಿ, Redmi 13C ಯ 50MP ಕ್ಯಾಮೆರಾ ಅಥವಾ POCO M6 Pro 5G ಯ 64MP ಕ್ಯಾಮೆರಾದೊಂದಿಗೆ Realme P3 Lite 5G ಯ 32MP ಕ್ಯಾಮೆರಾವನ್ನು ಹೋಲಿಸಿದರೆ, Realme ಸ್ವಲ್ಪ ಹಿಂದುಳಿದಿದೆ.

ಒಟ್ಟಾರೆಯಾಗಿ, Realme P3 Lite 5G, ಬೃಹತ್ ಬ್ಯಾಟರಿ, ಉತ್ತಮ ಬಾಳಿಕೆ, ಮತ್ತು ಸುಗಮ ಕಾರ್ಯಕ್ಷಮತೆಯನ್ನು ಬಯಸುವ ಗ್ರಾಹಕರಿಗೆ ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಅದರ ಬೆಲೆಗೆ ತಕ್ಕಂತೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಅನುಭವವನ್ನು ಪಡೆಯಲು ಬಯಸುವವರಿಗೆ ಇದೊಂದು ಆಕರ್ಷಕ ಪ್ಯಾಕೇಜ್ ಆಗಿದೆ.

Best Mobiles in India

English summary
Realme P3 Lite 5G with MediaTek Dimensity 6300 Chipset Sells Today. check here for more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+