ಇಂದು realme P3 ಸರಣಿ ಲಾಂಚ್; ಅಬ್ಬರಿಸಲು ಬರ್ತಿವೆ ಎರಡು 'ರಗಡ್' ಫೋನ್‌ಗಳು.. ಬೆಲೆ, ವಿಶೇಷತೆಗಳೇನು?
ರಿಯಲ್‌ಮಿ ಇಂದು ತನ್ನ ರಿಯಲ್‌ಮಿ P (realme P3) ಸರಣಿಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಹೌದು, ರಿಯಲ್‌ಮಿ P3 ಪ್ರೊ 5G (realme P3 Pro 5G) ಮತ್ತು ರಿಯಲ್‌ಮಿ P3x 5G (Realme P3x 5G) ಫೋನ್‌ಗಳು ಇಂದು ಅಧಿಕೃತವಾಗಿ ಭಾರತದಲ್ಲಿ ಲೋಕಾರ್ಪಣೆಯಾಗಲಿವೆ. ಇವುಗಳನ್ನು ಕಡಿಮೆ ಬಜೆಟ್ ಶ್ರೇಣಿಯ ವಿಭಾಗದಲ್ಲಿ ಪರಿಚಯಿಸಲಾಗುವುದು. ಈಗಾಗಲೇ, ಈ ಸ್ಮಾರ್ಟ್‌ಫೋನ್‌ಗಳ ಲುಕ್ ಮತ್ತು ಫೀಚರ್ಸ್ ಗ್ರಾಹಕರ ಮನಸ್ಸು ಗೆದ್ದಿವೆ. ಬನ್ನಿ, ರಿಯಲ್‌ಮಿ P ಸರಣಿ ಬಿಡುಗಡೆ ಸಮಾರಂಭದ ನೇರ ಪ್ರಸಾರ, ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ರಿಯಲ್‌ಮಿ P3x 5G ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು ಹಗುರವಾದ ಸ್ಲಿಮ್ ಮೊಬೈಲ್ ಆಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 6.78 ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಹಾಗೆಯೇ 12GB RAM + 256GB ಸ್ಟೋರೇಜ್, 5500mAh ಬ್ಯಾಟರಿ ಮತ್ತು 80W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ರಿಯಲ್‌ಮಿ P3x 5G ಮೊಬೈಲ್ ಐಸ್‌ಫೀಲ್ಡ್ ವಿನ್ಯಾಸದೊಂದಿಗೆ ಬರಲಿದೆ. ಇದು ಲೂನಾರ್ ಸಿಲ್ವರ್, ಮಿಡ್‌ನೈಟ್ ಬ್ಲೂ ಮತ್ತು ಸ್ಟೆಲ್ಲಾರ್ ಪಿಂಕ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ. ಈ ಫೋನಿನಲ್ಲಿ 8GB RAM ಹೊಂದಿರುತ್ತದೆ. ಮೊದಲೇ ಹೇಳಿದಂತೆ ಈ ರಿಯಲ್‌ಮಿ P3x 5G ಹಗುರವಾದ ಸ್ಲಿಮ್ ಸ್ಮಾರ್ಟ್‌ಫೋನ್ ಆಗಿದೆ. ಇದು ಕೇವಲ 7.94 ಮಿಮೀ ದಪ್ಪ ಇರುತ್ತದೆ.
ರಿಯಲ್‌ಮಿ P3x 5G ಬಿಡುಗಡೆ ವಿವರ
ರಿಯಲ್‌ಮಿ P3 ಪ್ರೊ 5G ಮತ್ತು ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್‌ಗಳು ಇಂದು (ಫೆಬ್ರವರಿ) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಕಂಪನಿಯು ಮಧ್ಯಾಹ್ನ 12 ಗಂಟೆಗೆ ಲಾಂಚ್ ಈವೆಂಟ್ ಹಮ್ಮಿಕೊಂಡಿದೆ. ಈ ಸಮಾರಂಭದಲ್ಲಿ ರಿಯಲ್‌ಮಿ P3x 5G ಮತ್ತು ರಿಯಲ್‌ಮಿ P3 ಪ್ರೊ 5G ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಕಾರ್ಯಕ್ರಮವನ್ನು ಕಂಪನಿಯ ವೆಬ್‌ಸೈಟ್, ಎಲ್ಲಾ ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ಗಳು ಮತ್ತು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
ರಿಯಲ್‌ಮಿ P3x 5G ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ P3x 5G ಮೊಬೈಲ್ 6.78 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಅಮೋಲೆಡ್ ಪ್ಯಾನಲ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಹೊಂದಿರುತ್ತದೆ.
ಪ್ರೊಸೆಸರ್ ಸಾಮರ್ಥ್ಯ
ಮುಂಬರುವ ರಿಯಲ್‌ಮಿ P3x 5G ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 3 ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ ಎಂದು ಕಂಪನಿ ತಿಳಿಸಿದೆ. ಈ ಮೊಬೈಲ್ ಗೇಮಿಂಗ್‌ಗಾಗಿ, 6050mm VC ಕೂಲಿಂಗ್ ವ್ಯವಸ್ಥೆ ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 12GB RAM ನೊಂದಿಗೆ ಬಿಡುಗಡೆಯಾಗಲಿದೆ. ಟಾಪ್ ವೇರಿಯಂಟ್ 512GB ಸ್ಟೋರೇಜ್ ಆಯ್ಕೆ ಹೊಂದಿರುತ್ತದೆ.

ಕ್ಯಾಮೆರಾ ಸೆಟಪ್
ಹೊಸ ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಸೆಕೆಂಡರಿ ಲೆನ್ಸ್ ಲಭ್ಯವಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿರುತ್ತದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ P3x 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 80W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರುತ್ತದೆ.
ರಿಯಲ್‌ಮಿ P3x 5G ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ P ಸರಣಿಯು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ. ಪ್ರಸ್ತುತ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಆದಗ್ಯೂ, ರಿಯಲ್‌ಮಿ P3 ಪ್ರೊ ಅನ್ನು ಭಾರತದಲ್ಲಿ 21,999 ರೂ. ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗುವುದು.


Click it and Unblock the Notifications








