Home
ಸುದ್ದಿಜಾಲ

ಇಂದು ಹೊಸ Realme P3 Ultra ಫಸ್ಟ್ ಸೇಲ್; 4000 ರಿಯಾಯಿತಿ.. ಜಬರ್ದಸ್ತ್ ಫೀಚರ್ಸ್.. ಬೆಲೆ ಇಷ್ಟೆನಾ?

ರಿಯಲ್‌ಮಿ ಇತ್ತೀಚೆಗೆ ಎರಡು ಹೊಸ 5G ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇವು ರಿಯಲ್‌ಮಿ P3 5G (Realme P3 5G) ಮತ್ತು ರಿಯಲ್‌ಮಿ P3 ಅಲ್ಟ್ರಾ 5G (Realme P3 Ultra 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಪೈಕಿ, ರಿಯಲ್‌ಮಿ P3 ಅಲ್ಟ್ರಾ 5G ಮೊಬೈಲ್ ಇಂದಿನಿಂದ (ಮಾರ್ಚ್ 25) ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಕಂಪನಿಯು ಈ ಫೋನಿನ ಖರೀದಿ ಮೇಲೆ 4,000 ರೂ. ಡಿಸ್ಕೌಂಟ್ ಘೋಷಿಸಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ P3 ಅಲ್ಟ್ರಾ 5G ಫೋನ್‌ ತನ್ನ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಇದು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಶಕ್ತಿಯುತ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟ್ರಾ ಪ್ರೊಸೆಸರ್‌ ಹೊಂದಿದೆ. ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾ ಇದೆ. ಹಾಗೆಯೇ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. 12GB RAM, 256GB ಸ್ಟೋರೇಜ್, 6000mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರಾಟಕ್ಕೆ ಸಜ್ಜಾಗಿದೆ.

ಇಂದು ಹೊಸ Realme P3 Ultra ಸೇಲ್; 4000 ರಿಯಾಯಿತಿ, ಮಸ್ತ್ ಫೀಚರ್ಸ್; ಬೆಲೆ ನೋಡಿ

ರಿಯಲ್‌ಮಿ P3 ಅಲ್ಟ್ರಾ 5G ವೈಶಿಷ್ಟ್ಯಗಳು

ರಿಯಲ್‌ಮಿ P3 ಅಲ್ಟ್ರಾ ಫೋನ್‌ 6.83 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2800 x 1272 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಮತ್ತು 120Hz ರಿಫ್ರೆಶ್ ದರದ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನಲ್ಲಿ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ತಂತ್ರಜ್ಞಾನ ಇದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಅಲ್ಟ್ರಾ ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 15 ಆಧಾರಿತ ರಿಯಲ್‌ಮಿ UI 6.0 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಮಾಲಿ G615 MC6 ಜಿಪಿಯು ಸಹ ಹೊಂದಿದೆ.

ರಿಯಲ್‌ಮಿ P3 ಅಲ್ಟ್ರಾ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಮೊಬೈಲ್‌ನಲ್ಲಿ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಶ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಇದೆ. ಎಐ (AI) ವೈಶಿಷ್ಟ್ಯಗಳಲ್ಲಿ ಎಐ ಎರೇಸರ್, ಎಐ ಬೆಸ್ಟ್ ಫೇಸ್ ಮತ್ತು ಎಐ ಮೋಷನ್ ಡೆಬ್ಲರ್ ಒಳಗೊಂಡಿದೆ.

Take a Poll

ರಿಯಲ್‌ಮಿ P3 ಅಲ್ಟ್ರಾ 5G ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W SuperVOOC ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ರಿಯಲ್‌ಮಿ 5G ಫೋನ್ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು, ಹೈ ರೆಸ್ ಆಡಿಯೋ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP66 + IP68 + IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ಡ್ಯುಯಲ್ 4G VoLTE, ವೈ-ಫೈ 6, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ P3 ಅಲ್ಟ್ರಾ ಬೆಲೆ ಮತ್ತು ಆಫರ್

8GB RAM + 128GB ಸ್ಟೋರೇಜ್ = 26,999 ರೂ.
8GB RAM + 256GB ಸ್ಟೋರೇಜ್ = 27,999 ರೂ.
12GB RAM + 256GB ಸ್ಟೋರೇಜ್ = 29,999 ರೂ.

ರಿಯಲ್‌ಮಿ P3 ಅಲ್ಟ್ರಾ 5G ಫೋನಿನ ಆರಂಭಿಕ ಬೆಲೆ 26,999 ರೂ. ಆಗಿದೆ. ಕಂಪನಿಯು ಮೊದಲ ಮಾರಾಟದ ಪ್ರಯುಕ್ತ ಎಲ್ಲಾ ಮೂರು ರೂಪಾಂತರಗಳ ಮೇಲೆ 4,000 ರೂ. ವರೆಗೆ ರಿಯಾಯಿತಿ ಘೋಷಿಸಿದೆ. ಇದನ್ನು ಸೀಮಿತ ಅವಧಿಗೆ ಮಾತ್ರ ಇರುತ್ತದೆ. ನೀವು ರಿಯಾಯಿತಿಯೊಂದಿಗೆ ಮೂಲ ರೂಪಾಂತರವನ್ನು 22,999 ರೂ.ಗೆ ಕೊಳ್ಳಬಹುದು. 8GB RAM + 256GB ಸ್ಟೋರೇಜ್ ಬೆಲೆ 23,999 ರೂ. ಮತ್ತು 12GB RAM ಬೆಲೆ 25,999 ರೂ.ಗೆ ಮಾರಾಟವಾಗಲಿದೆ. ಈ ಫೋನ್ ಇಂದು (ಮಾರ್ಚ್ 25) ಮಧ್ಯಾಹ್ನ 12 ಗಂಟೆಯಿಂದ ಕಂಪನಿಯ ಅಧಿಕೃತ ವೆಬ್‌ಸೈಟ್, ರಿಯಲ್‌ಮಿ ಸ್ಟೋರ್ ಆಪ್, ಫ್ಲಿಪ್‌ಕಾರ್ಟ್ ಮೂಲಕ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.

Best Mobiles in India

English summary
realme P3 Ultra 5G First Sale Start Today via Flipkart: check Price, offers, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+