Home
ಸುದ್ದಿಜಾಲ

ಭಾರತದಲ್ಲಿ Realme P3 Ultra 5G ಬಿಡುಗಡೆಗೆ ಕ್ಷಣಗಣನೆ: ಈ ಫೋನ್ ಬೆಲೆ ಎಷ್ಟು ಗೊತ್ತಾ?

ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿಕ್ಷೆಯಿಂದ ಎದುರುನೋಡುತ್ತಿರುವ Realme P3 5G ಸರಣಿಯ Realme P3 5G ಮತ್ತು Realme P3 Ultra 5G ಸ್ಮಾರ್ಟ್‌ಫೋನ್‌ಗಳು ಇದೇ ಮಾರ್ಚ್ 19 ರಂದು ಬಿಡುಗಡೆಗೆ ಸಿದ್ಧವಾಗಿವೆ. ಈ ಬಿಡುಗಡೆಗೆ ಎರಡು ದಿನಗಳ ಮುನ್ನ, Realme P3 Ultra 5G ಪ್ರೊ ಮಾದರಿಯ ಬೆಲೆ ₹25,000 ಕ್ಕಿಂತ ಕಡಿಮೆ ಎಂದು Realme ಕಂಪನಿಯು ದೃಢಪಡಿಸಿದೆ. ಆದರೆ, ನಿಖರವಾಗಿ ಫೋನ್ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಬಿಡುಗಡೆ ಸಮಯವನ್ನು ಕಾಯಲು ಹೇಳುವ ಮೂಕ ಕುತೂಹಲ ಹೆಚ್ಚಿಸಿದೆ. ಇಷ್ಟೇ ಅಲ್ಲದೆ, Realme P3 Ultra 5G ಸ್ಮಾರ್ಟ್‌ಫೋನಿನ ಅಧಿಕೃತ ವಿನ್ಯಾಸದ ಕುರಿತು ಮಾಹಿತಿ ಲಭ್ಯವಾಗಿದೆ. ಕಂಪನಿಯ ಟೀಸರ್ ಪ್ರಕಾರ, ಈ ಸ್ಮಾರ್ಟ್‌ಫೋನ್ 'ಮೂನ್ ಡಾರ್ಕ್' ವಿನ್ಯಾಸದಲ್ಲಿ, ಹಗುರವಾದ ನಿರ್ಮಾಣ ಮತ್ತು ಕ್ವಾಡ್-ಕರ್ವ್ಡ್ ಡಿಸ್ಪ್ಲೇಯೊಂದಿಗೆ ಲಭ್ಯವಿರುತ್ತದೆ. Realme P3 5G ಮತ್ತು P3 Ultra 5G ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೋಡೋಣ ಬನ್ನಿ.

Realme P3 Ultra 5G ಸ್ಮಾರ್ಟ್‌ಫೋನಿನ ವಿನ್ಯಾಸ
ಹೊಸ Realme P3 Ultra 5G 'ಮೂನ್ ಡಾರ್ಕ್' ವಿನ್ಯಾಸದಲ್ಲಿ ಬರುತ್ತದೆ, ಇದು ಹಗುರವಾದ ನಿರ್ಮಾಣ ಮತ್ತು ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಈ ವಿನ್ಯಾಸವು ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಹಸಿರು ಹಾಲೋ ಪರಿಣಾಮವನ್ನು ಉಂಟುಮಾಡುತ್ತದೆ, ಇದು ಚಂದ್ರನ ಮಣ್ಣಿನ ವಿನ್ಯಾಸವನ್ನು ಪ್ರತಿಬಿಂಬಿಸುತ್ತದೆ. ಬಳಕೆದಾರರಿಗೆ ಚಂದ್ರನ ಮೇಲ್ಮೈ ಧೂಳನ್ನು ಸ್ಪರ್ಶಿಸುವ ಅನುಭವ ನೀಡುತ್ತದೆ ಎಂದು ಕಂಪನಿಯು ತಿಳಿಸಿದೆ. Realme P3 Ultra 5G ಭಾರತದಲ್ಲಿ ಅತ್ಯಂತ ತೆಳ್ಳಗಿನ ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಹೊಂದಿರುವ ಸಾಧನವಾಗಿದೆ, ಇದರ ದಪ್ಪ 7.38 ಮಿಮೀ ಮತ್ತು ತೂಕ 183 ಗ್ರಾಂ ಎಂದು ಕಂಪನಿಯು ಪ್ರಕಟಿಸಿದೆ. ನೆಪ್ಚೂನ್ ಬ್ಲೂ ಮತ್ತು ಓರಿಯನ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನಿನ ಚಿಪ್‌ಸೆಟ್, ಡಿಸ್‌ಪ್ಲೇ, ಬ್ಯಾಟರಿ, ಚಾರ್ಜಿಂಗ್ ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಕುರಿತು ಹೆಚ್ಚಿನ ಮಾಹಿತಿಯು ಕೂಡ ಬಹಿರಂಗವಾಗಿದೆ.

ಭಾರತದಲ್ಲಿ Realme P3 Ultra 5G ಬಿಡುಗಡೆಗೆ ಕ್ಷಣಗಣನೆ: ಬೆಲೆ ಎಷ್ಟು ಗೊತ್ತಾ?

Realme P3 Ultra 5G ವೈಶಿಷ್ಟ್ಯಗಳು
Realme P3 Ultra 5G, MediaTek Dimensity 8350 ಚಿಪ್‌ಸೆಟ್‌ನೊಂದಿಗೆ, ವಿಶ್ವದ ಮೊದಲ ಹ್ಯಾಂಡ್‌ಸೆಟ್ ಆಗಿ ಬಿಡುಗಡೆಗೊಳ್ಳಲಿದೆ. ಇದು 1.45 ಮಿಲಿಯನ್‌ಗಿಂತ ಹೆಚ್ಚು AnTuTu ಸ್ಕೋರ್ ಅನ್ನು ಸಾಧಿಸಿದೆ. ಫೋನ್ 12GB LPDDR5x RAM ಮತ್ತು 256GB UFS 3.1 ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. Realme P3 Ultra 5G Gಫೋಮ್ಬೂಸ್ಟ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಬಳಕೆದಾರರ ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ. BGMI ನಲ್ಲಿ 90fps ಗೇಮ್‌ಪ್ಲೇ ಮತ್ತು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್ 6050mm² VC ಕೂಲಿಂಗ್ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ. 2,500Hz ವರೆಗೆ ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿರುವ ಡಿಸ್‌ಪ್ಲೇ, 6,000mAh ಬ್ಯಾಟರಿ ಮತ್ತು 80W AI ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ, ಇದು ಗೇಮಿಂಗ್ ಸಮಯದಲ್ಲಿ ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ.

Realme P3 5G ವೈಶಿಷ್ಟ್ಯಗಳು
Realme P3 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 6 Gen 4 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದು ಶೇಕಡಾ 15 ರಷ್ಟು ಸುಧಾರಿತ CPU ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. AnTuTu ಪರೀಕ್ಷೆಯಲ್ಲಿ 7,50,000 ಅಂಕಗಳನ್ನು ಗಳಿಸಿದೆ. AI ಮೋಷನ್ ಕಂಟ್ರೋಲ್ ಮತ್ತು AI ಅಲ್ಟ್ರಾ ಟಚ್ ಕಂಟ್ರೋಲ್ ಸೇರಿದಂತೆ GT ಬೂಸ್ಟ್ ವೈಶಿಷ್ಟಗಳನ್ನು ಬೆಂಬಲಿಸುತ್ತದೆ. BGMI ಗಾಗಿ 90fps ಗೇಮ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಸುಧಾರಿತ ಶಾಖ ಪ್ರಸರಣಕ್ಕಾಗಿ, ಇದು ಏರೋಸ್ಪೇಸ್-ಗ್ರೇಡ್ ಕೂಲಿಂಗ್ ಅನ್ನು ಹೊಂದಿದೆ. ಆಂಟೆನಾ ಅರೇ ಮ್ಯಾಟ್ರಿಕ್ಸ್ 2.0 ತಂತ್ರಜ್ಞಾನವು ಕಡಿಮೆ-ಸಿಗ್ನಲ್ ಪ್ರದೇಶಗಳಲ್ಲಿ ಹ್ಯಾಂಡ್‌ಸೆಟ್‌ನ ಸಂಪರ್ಕವನ್ನು ಶೇಕಡಾ 30 ರಷ್ಟು ಹೆಚ್ಚಿಸುತ್ತದೆ. ಇದೇ ಮಾರ್ಚ್ 19 ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.

Best Mobiles in India

English summary
Regarding pricing, the realme P3 Ultra is set to be priced below ₹25,000. However, the company has not specified whether this amount includes launch offers or if it represents the standard retail price of the device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+