Home
ಸುದ್ದಿಜಾಲ

ನಾಳೆ ಹೊಸ Realme 5G ಫೋನ್ ಸೇಲ್; 1500 ಲಾಂಚ್ ಆಫರ್.. ಕಡಿಮೆ ಬೆಲೆ.. ಭರಪೂರ ಫೀಚರ್ಸ್

ರಿಯಲ್‌ಮಿ ನಾಳೆ ತನ್ನ ಗ್ರಾಹಕರ ಕೈಗೆ ಹೊಸ ಫೋನ್‌ ನೀಡಲಿದೆ. ಕಂಪನಿಯು ಇತ್ತೀಚೆಗೆ ಎರಡು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳೇ, ರಿಯಲ್‌ಮಿ P3x 5G (realme P3x 5G) ಮತ್ತು ರಿಯಲ್‌ಮಿ P3 ಪ್ರೊ 5G (realme P3 Pro 5G) ಸ್ಮಾರ್ಟ್‌ಫೋನ್‌ಗಳು. ಅಂದಹಾಗೆ, ಈ ಪೈಕಿ ರಿಯಲ್‌ಮಿ P3x 5G ಫೋನ್ ಫೆಬ್ರವರಿ 28 ರಿಂದ (ನಾಳೆ) ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ P3 ಪ್ರೊ ಮೊಬೈಲ್ ಈಗಾಗಲೇ ಮಾರಾಟ ಪ್ರಾರಂಭಿಸಿದೆ. ಇದೀಗ ರಿಯಲ್‌ಮಿ P3x 5G ಜಾದು ಮಾಡಲು ಸಜ್ಜಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಈ ಮೊಬೈಲ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಹಾಗೆಯೇ 8GB RAM + 128GB ಸ್ಟೋರೇಜ್, 6000mAh ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಒಳಗೊಂಡಿದೆ. ಈ ರಿಯಲ್‌ಮಿ 5G ಮೊಬೈಲ್ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಮಾರಾಟವಾಗಲಿದೆ.

ನಾಳೆ Realme P3x ಸೇಲ್; 1500 ಲಾಂಚ್ ಆಫರ್.. ಕಡಿಮೆ ಬೆಲೆ.. ಹೇಗಿವೆ ಫೀಚರ್ಸ್

ಹಲವು ಎಐ ವೈಶಿಷ್ಟ್ಯಗಳು ಲಭ್ಯ

ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫೋನಿನಲ್ಲಿ ಎಐ (AI) ಎರೇಸ್, ಬೆಸ್ಟ್ ಫೇಸ್, ಮೋಷನ್ ಡಿಬಲ್ರ್, ಎಐ ರೆಕಾರ್ಡಿಂಗ್ ಸಾರಾಂಶ, ಎಐ ರೈಟರ್, ಗೂಗಲ್ ಸರ್ಕಲ್ ಟು ಸರ್ಚ್ ಮತ್ತು ಎಐ ರಿಪ್ಲೈ ಸೇರಿದಂತೆ ಮುಂತಾದ ಫೀಚರ್ಸ್‌ ಲಭ್ಯವಿದೆ. ಈ ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ, IP66 / IP68 / IP69 ರೇಟಿಂಗ್ ಸಹ ಪಡೆದಿದೆ.

ರಿಯಲ್‌ಮಿ P3x 5G ಬೆಲೆ ಮತ್ತು ಆಫರ್

  • 6GB RAM + 128GB ಸ್ಟೋರೇಜ್ ಬೆಲೆ = 13,999 ರೂ.
  • 8GB RAM + 128GB ಸ್ಟೋರೇಜ್ ಬೆಲೆ = 14,999 ರೂ.

ರಿಯಲ್‌ಮಿ P3x 5G ಮೊಬೈಲ್ ಇದು ಅತ್ಯಂತ ಕೈಗೆಟುಕುವ 5G ಫೋನ್ ಆಗಿದೆ. ಈ ಫೋನಿನ 6GB RAM ರೂಪಾಂತರವು 13,999 ರೂ.ಗೆ ಮಾರಾಟವಾಗಲಿದೆ. ಮತ್ತು 8GB RAM ಮಾದರಿಯ ಬೆಲೆ 14,999 ರೂ. ಆಗಿದೆ. ಕಂಪನಿಯು 1,000 ರೂ. ಬ್ಯಾಂಕ್ ಆಫರ್ ಘೋಷಿಸಿದೆ. ಜೊತೆಗೆ 500 ಎಕ್ಸ್‌ಚೇಂಜ್ ಬೋನಸ್ ಸಹ ಲಭ್ಯವಿದೆ. ನೀವು ಮಿಡ್‌ನೈಟ್ ಬ್ಲೂ, ಲೂನಾರ್ ಸಿಲ್ವರ್ ಮತ್ತು ಸ್ಟೆಲ್ಲರ್ ಪಿಂಕ್ ಬಣ್ಣಗಳಲ್ಲಿ ಖರೀದಿಸಬಹುದು. ರಿಯಲ್‌ಮಿ P3x 5G ಫೋನ್ ನಾಳೆ (ಫೆಬ್ರವರಿ 28) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.

ನಾಳೆ Realme P3x ಸೇಲ್; 1500 ಲಾಂಚ್ ಆಫರ್.. ಕಡಿಮೆ ಬೆಲೆ.. ಹೇಗಿವೆ ಫೀಚರ್ಸ್

ರಿಯಲ್‌ಮಿ P3x 5G ವೈಶಿಷ್ಟ್ಯಗಳು

ಡಿಸ್ಪ್ಲೇ ಹೇಗಿದೆ

ರಿಯಲ್‌ಮಿ P3x 5G ಫೋನಿನ ಟಾಪ್ 5 ವೈಶಿಷ್ಟ್ಯಗಳ ಪೈಕಿ ಮೊದಲು ಡಿಸ್ಪ್ಲೇ ಬಗ್ಗೆ ತಿಳಿಯೋಣ. ರಿಯಲ್‌ಮಿ P3x 5G ಫೋನ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 1.5K ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರದ ಬೆಂಬಲ ಮತ್ತು 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಈ ಮೊಬೈಲ್ ವೆಟ್ ಟಚ್ ತಂತ್ರಜ್ಞಾನ ಹೊಂದಿದೆ. ನೀವು ಒದ್ದೆಯಾದ ಕೈಗಳಿಂದಲೂ ಈ ಫೋನನ್ನು ಬಳಸಬಹುದು.

ಮೀಡಿಯಾ ಟೆಕ್‌ ಪ್ರೊಸೆಸರ್‌

ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 6400 ಪ್ರೊಸೆಸರ್‌ ಹೊಂದಿದೆ. ಇದು ಪ್ರೊಸೆಸರ್‌ನಲ್ಲಿ ಬಿಡುಗಡೆಯಾದ ವಿಶ್ವದ ಪ್ರಥಮ ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 6GB RAM ಮತ್ತು 8GB RAM ಆಯ್ಕೆ ಲಭ್ಯವಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರಗೆ ಸ್ಟೋರೇಜ್ ಸಹ ಹೆಚ್ಚಿಸಬಹುದು.

ಡ್ಯುಯಲ್ ಕ್ಯಾಮೆರಾ ಸೆಟಪ್

ರಿಯಲ್‌ಮಿ P3x 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಈ ಫೋನ್, ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ P3x 5G ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರಲ್ಲಿ OTG ಮತ್ತು ರಿವರ್ಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಲಭ್ಯವಿದೆ.

Best Mobiles in India

English summary
realme P3x 5G Goes on First Sale in India tommorrow: Check Price, offers and Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+