Home
ಸುದ್ದಿಜಾಲ

ಫೆ.28ಕ್ಕೆ realme P3x ಫಸ್ಟ್ ಸೇಲ್; 6000mAh ಬಿಗ್ ಬ್ಯಾಟರಿ.. 50MP ಕ್ಯಾಮೆರಾ.. ಆಫರ್ ಏನಿದೆ?

ರಿಯಲ್‌ಮಿ ಸಂಸ್ಥೆಯು ಕಳೆದ ವಾರ ಎರಡು ಹೊಸ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ದೇಶೀಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಹೌದು, ರಿಯಲ್‌ಮಿ P3x 5G (realme P3x 5G) ಮತ್ತು ರಿಯಲ್‌ಮಿ P3 ಪ್ರೊ 5G (realme P3 Pro 5G) ಸ್ಮಾರ್ಟ್‌ಫೋನ್‌ ಅಧಿಕೃತವಾಗಿ ಬಿಡುಗಡೆಯಾಗಿವೆ. ಈ ಪೈಕಿ ಇಂದು (ಫೆಬ್ರವರಿ 25) ರಿಯಲ್‌ಮಿ P3 ಪ್ರೊ ಮೊಬೈಲ್ ಮಾರಾಟ ಪ್ರಾರಂಭಿಸಿದೆ. ಅಂದಹಾಗೆ, ಕಂಪನಿಯು ರಿಯಲ್‌ಮಿ P3x 5G ಫೋನನ್ನು ಫೆಬ್ರವರಿ 28 ರಿಂದ ಸೇಲ್ ಮಾಡಲಿದೆ. ಬನ್ನಿ, ಈ ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.

ರಿಯಲ್‌ಮಿ P3x 5G ಮೊಬೈಲ್ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ಫೋನ್ 6.83 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 8GB RAM + 128GB ಸ್ಟೋರೇಜ್, 6000mAh ಬಿಗ್ ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ.

ಫೆ.28ಕ್ಕೆ realme P3x ಸೇಲ್; 6000mAh ಬ್ಯಾಟರಿ, 50MP ಕ್ಯಾಮೆರಾ.. ಆಫರ್ ನೋಡಿ

ರಿಯಲ್‌ಮಿ P3x 5G ಬೆಲೆ ಮತ್ತು ಆಫರ್

ರಿಯಲ್‌ಮಿ P3x 5G ಫೋನಿನ 6GB RAM + 128GB ಸ್ಟೋರೇಜ್ ರೂಪಾಂತರವು 13,999 ರೂ.ಗೆ ಮಾರಾಟವಾಗಲಿದೆ. ಹಾಗೆಯೇ 8GB RAM + 128GB ಸ್ಟೋರೇಜ್ ಮಾದರಿಯ ಬೆಲೆ 14,999 ರೂ. ಆಗಿದೆ. ಇದು ಅತ್ಯಂತ ಕೈಗೆಟುಕುವ 5G ಫೋನ್ ಆಗಿದೆ. ಇದು ಮಿಡ್‌ನೈಟ್ ಬ್ಲೂ, ಲೂನಾರ್ ಸಿಲ್ವರ್ ಮತ್ತು ಸ್ಟೆಲ್ಲರ್ ಪಿಂಕ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಈ ಹೊಸ ರಿಯಲ್‌ಮಿ ಮೊಬೈಲ್ ಇದೇ ಫೆಬ್ರವರಿ 28 ರಿಂದ ಭಾರತದಲ್ಲಿ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ.

ರಿಯಲ್‌ಮಿ P3x 5G: ಟಾಪ್ 5 ಫೀಚರ್ಸ್‌

ಡಿಸ್ಪ್ಲೇ ವಿವರ

ರಿಯಲ್‌ಮಿ P3x 5G ಮೊಬೈಲ್ 6.83 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಇದು ಕ್ವಾಡ್ ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ವೆಟ್ ಟಚ್ ತಂತ್ರಜ್ಞಾನ ಹೊಂದಿದ್ದು, ಒದ್ದೆಯಾದ ಕೈಗಳಿಂದಲೂ ಫೋನನ್ನು ಬಳಸಬಹುದು.

ಪ್ರೊಸೆಸರ್‌ ಸಾಮರ್ಥ್ಯ

ರಿಯಲ್‌ಮಿ P3x 5G ಫೋನ್ ಮೀಡಿಯಾಟೆಕ್‌ನ ಡೈಮೆನ್ಸಿಟಿ 6400 ಪ್ರೊಸೆಸರ್‌ ಹೊಂದಿದೆ. ಇದು ಪ್ರೊಸೆಸರ್‌ನಲ್ಲಿ ಬಿಡುಗಡೆಯಾದ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 6GB RAM ಮತ್ತು 8GB RAM ಹೊಂದಿದೆ. ನೀವು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರಗೆ ಸ್ಟೋರೇಜ್ ವಿಸ್ತರಿಸಬಹುದು.

ಕ್ಯಾಮೆರಾ ಸೆಟಪ್

ರಿಯಲ್‌ಮಿ P3x 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಹಾಗೆಯೇ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ರಿಯಲ್‌ಮಿ P3x 5G ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 45W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಫೋನ್ OTG ಮತ್ತು ರಿವರ್ಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಹೊಂದಿದೆ. ಈ ಮೊಬೈಲ್ ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ, IP66 / IP68 / IP69 ರೇಟಿಂಗ್ ಪಡೆದಿದೆ. ಈ ಸ್ಮಾರ್ಟ್‌ಫೋನ್ ಎಐ ವೈಶಿಷ್ಟ್ಯ ಹೊಂದಿದೆ. ಇದರಲ್ಲಿ ಎಐ (AI) ಎರೇಸ್, ಬೆಸ್ಟ್ ಫೇಸ್, ಮೋಷನ್ ಡಿಬಲ್ರ್, ಎಐ ರೆಕಾರ್ಡಿಂಗ್ ಸಾರಾಂಶ, ಎಐ ರೈಟರ್, ಗೂಗಲ್ ಸರ್ಕಲ್ ಟು ಸರ್ಚ್ ಮತ್ತು ಎಐ ರಿಪ್ಲೈ ಸೇರಿದಂತೆ ಮುಂತಾದ ಫೀಚರ್ಸ್‌ ಲಭ್ಯವಿದೆ.

Best Mobiles in India

English summary
realme P3x 5G goes on sale february 28 with launch offers: check price, pecification and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+