Home
ಸುದ್ದಿಜಾಲ

ರಿಯಲ್‌ಮಿ ಸಂಸ್ಥೆಯಿಂದ ಹೊಸ ಟ್ಯಾಬ್‌ ಬಿಡುಗಡೆ! 190 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ ವಿಶೇಷ!

ರಿಯಲ್‌ಮಿ ಕಂಪೆನಿ ತನ್ನ ಹೊಸ ರಿಯಲ್‌ಮಿ C53 ಸ್ಮಾರ್ಟ್‌ಫೋನ್‌ನೊಂದಿಗೆ ಹೊಸ ರಿಯಲ್‌ಮಿ ಪ್ಯಾಡ್‌ 2 ಬಿಡುಗಡೆ ಮಾಡಿದೆ. ಈ ಮೂಲಕ ಟ್ಯಾಬ್ಲೆಟ್‌ ವಲದಯಲ್ಲಿ ಹೊಸ ಆಯ್ಕೆಯನ್ನು ನೀಡಿದೆ. ಇನ್ನು ರಿಯಲ್‌ಮಿ ಪ್ಯಾಡ್‌ 2 ಆಕರ್ಷಕವಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ಇದರ ರಿಯಲ್‌ ಪ್ಯಾನಲ್‌ ಸ್ಟೈಲಿಶ್‌ ಲುಕ್‌ನಿಂದ ಕೂಡಿದೆ.

ಹೌದು, ರಿಯಲ್‌ಮಿ ಪ್ಯಾಡ್‌ 2 ಭಾರತದಲ್ಲಿ ಅನಾರವಣಗೊಂಡಿದೆ. ಇದು 120Hz ರಿಫ್ರೆಶ್ ರೇಟ್ ಬೆಂಬಲಿಸುವ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಮೀಡಿಯಾಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಟ್ಯಾಬ್ಲೆಟ್ 17 ಗಂಟೆಗಳವರೆಗೆ ವೀಡಿಯೊ ಸ್ಟ್ರೀಮಿಂಗ್ ಬ್ಯಾಕಪ್ ಅನ್ನು ನೀಡುತ್ತದೆ ಎಂದು ರಿಯಲ್‌ಮಿ ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ ಈ ಹೊಸ ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್‌ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿಯಿಂದ ಹೊಸ ಟ್ಯಾಬ್‌ ಬಿಡುಗಡೆ! 190 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ

ರಿಯಲ್‌ಮಿ ಪ್ಯಾಡ್‌ 2 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್‌ 11.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2000x 1200 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದ್ದು, 120Hz ವರೆಗಿನ ಅಡಾಪ್ಟಿವ್ ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 450 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಈ ಡಿಸ್‌ಪ್ಲೇ 85.2% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ರಿಯಲ್‌ಮಿ ಪ್ಯಾಡ್‌ 2 ಪ್ರೊಸೆಸರ್‌ ಯಾವುದು?
ರಿಯಲ್‌ಮಿ ಪ್ಯಾಡ್‌ 2 ಮೀಡಿಯಾಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಟ್ಯಾಬ್ಲೆಟ್ ರಿಲೇಮ್ UI 4.0 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಒಟ್ಟು RAM ಅನ್ನು 16GB ಗೆ ಹೆಚ್ಚಿಸುವ ವರ್ಚುವಲ್ RAM ಫೀಚರ್ಸ್‌ ಅನ್ನು ಕೂಡ ನೀಡಲಾಗಿದೆ.

ರಿಯಲ್‌ಮಿ ಪ್ಯಾಡ್‌ 2 ಕ್ಯಾಮೆರಾ ವಿಶೇಷ
ರಿಯಲ್‌ಮಿ ಪ್ಯಾಡ್‌ 2 8 ಮೆಗಾಪಿಕ್ಸೆಲ್‌ ಎಐ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಕೂಡ ಪಡೆದುಕೊಂಡಿದೆ. ಇನ್ನು ಕ್ಯಾಮೆರಾವನ್ನು ಹಿಂಭಾಗದ ಪ್ಯಾನಲ್‌ನಲ್ಲಿ ವೃತ್ತಾಕಾರದ ಮಾಡ್ಯೂಲ್‌ನಲ್ಲಿ ಇರಿಸಲಾಗಿದೆ.

ರಿಯಲ್‌ಮಿಯಿಂದ ಹೊಸ ಟ್ಯಾಬ್‌ ಬಿಡುಗಡೆ! 190 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ

ರಿಯಲ್‌ಮಿ ಪ್ಯಾಡ್‌ 2 ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ ಪ್ಯಾಡ್‌ 2 ಟ್ಯಾಬ್ಲೆಟ್ 8,360mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 17 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಇದಲ್ಲದೆ 190 ಗಂಟೆಗಳವರೆಗೆ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಈ ಟ್ಯಾಬ್ಲೆಟ್‌ 33W SUPERVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಈ ಟ್ಯಾಬ್ಲೆಟ್‌ ಡಾಲ್ಬಿ ಅಟ್ಮೋಸ್‌ ಟೆಕ್ನಾಲಜಿಯಿಂದ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬರುತ್ತದೆ.

ರಿಯಲ್‌ಮಿ ಪ್ಯಾಡ್‌ 2 ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ ಪ್ಯಾಡ್‌ 2 ಬೇಸ್ ಮಾಡೆಲ್‌ 6GB RAM + 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 19,999ರೂ.ಬೆಲೆಯಲ್ಲಿ ಬರಲಿದೆ. ಇದು 8GB RAM + 256GB ಸ್ಟೋರೇಜ್ ಕಾನ್ಫಿಗರೇಶನ್‌ ಆಯ್ಕೆಯ ಬೆಲೆ 22,999ರೂ ಆಗಿದೆ. ಇನ್ನು ಈ ಪ್ಯಾಡ್‌ ಇನ್ಸ್ಪಿರೇಷನ್ ಗ್ರೀನ್ ಮತ್ತು ಇಮ್ಯಾಜಿನೇಶನ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದನ್ನು ಆಗಸ್ಟ್ 1 ರಂದು ರಿಯಲ್‌ಮಿ ಸ್ಟೋರ್‌ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮುಕ್ತ ಮಾರಾಟವನ್ನು ಪ್ರಾರಂಭಿಸಲಾಗುವುದು ಎಂದು ರಿಯಲ್‌ಮಿ ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
Realme Pad 2 With 8,360mAh Battery Launched in India: All Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+