ಭಾರತದಲ್ಲಿ ರಿಯಲ್‌ಮಿ ಸಂಸ್ಥೆಯಿಂದ ಮೊದಲ ಟ್ಯಾಬ್ಲೆಟ್ ಬಿಡುಗಡೆ! ವಿನ್ಯಾಸ ಹೇಗಿದೆ ?
ಟೆಕ್ ವಲಯದಲ್ಲಿ ರಿಯಲ್‌ಮಿ ಕಂಪೆನಿ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಇತರೆ ಡಿವೈಸ್‌ಗಳನ್ನು ಸಹ ಪರಿಚಯಿಸಿದೆ. ಇದೀಗ ಭಾರತದಲ್ಲಿ ತನ್ನ ಮೊದಲ ಟ್ಯಾಬ್ಲೆಟ್ ರಿಯಲ್‌ಮಿ ಪ್ಯಾಡ್ ಅನ್ನು ಲಾಂಚ್ ಮಾಡಿದೆ. ಇನ್ನು ಈ ಪ್ಯಾಡ್ ಸ್ಲಿಮ್ ವಿನ್ಯಾಸ ಮತ್ತು ಕ್ವಾಡ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಈ ಟ್ಯಾಬ್ಲೆಟ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೋ G80 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಹಾಗೆಯೇ ಡಾಲ್ಬಿ ಅಟ್ಮೋಸ್ ಸೌಂಡ್ ಅನ್ನು ಬೆಂಬಲಿಸುತ್ತದೆ.

ಹೌದು, ರಿಯಲ್‌ಮಿ ಕಂಪೆನಿ ಭಾರತದಲ್ಲಿ ತನ್ನ ಮೊದಲ ಟ್ಯಾಬ್ಲೆಟ್ ರಿಯಲ್‌ಮಿ ಪ್ಯಾಡ್ ಬಿಡುಗಡೆ ಮಾಡಿದೆ. ಈ ಪ್ಯಾಡ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ವೈ-ಫೈ-ಓನ್ಲಿ ಅಥವಾ ವೈ-ಫೈ + 4ಜಿ ರೂಪಾಂತರಗಳನ್ನು ಹೊಂದಿದೆ. ಇನ್ನು ರಿಯಲ್‌ಮಿ ಪ್ಯಾಡ್ ಜೊತೆಗೆ, ರಿಯಲ್‌ಮಿ ಕೋಬಲ್ ಬ್ಲೂಟೂತ್ ಸ್ಪೀಕರ್ ಹಾಗೂ ರಿಯಲ್‌ಮಿ ಪಾಕೆಟ್ ಬ್ಲೂಟೂತ್ ಸ್ಪೀಕರ್ ಅನ್ನು ಸಹ ಬಿಡುಗಡೆ ಮಾಡಿದೆ. ಹಾಗಾದ್ರೆ ರಿಯಲ್‌ಮಿ ಪ್ಯಾಡ್ ಮತ್ತು ಇತರೆ ಡಿವೈಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ರಿಯಲ್‌ಮಿ ಪ್ಯಾಡ್ ವಿಶೇಷತೆಗಳು
ರಿಯಲ್‌ಮಿ ಪ್ಯಾಡ್ ಟ್ಯಾಬ್ಲೆಟ್ 2,000x1,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 10.4-ಇಂಚಿನ WUXGA+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 82.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್ ಅನ್ನು ಕತ್ತಲಲ್ಲಿ ಬಳಸುವಾಗ ಕಣ್ಣಿನ ಮೇಲೆ ಯಾವುದೇ ರೀತಿಯ ಅಪಾಯ ಕಡಿಮೆ ಮಾಡಲು ನೈಟ್ ಮೋಡ್ ಅನ್ನು ಸಹ ನೀಡಲಾಗಿದೆ. ಇದು ಡಾರ್ಕ್ ಮೋಡ್ ಅನ್ನು ಕೂಡ ಬೆಂಬಲಿಸಲಿದೆ. ಈ ಟ್ಯಾಬ್ಲೆಟ್ ಮೀಡಿಯಾ ಟೆಕ್ ಹಿಲಿಯೊ G80 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB ವರೆಗೆ ಇಂಟರ್ ಸ್ಟೋರೇಜ್ ಅನ್ನು ಕೂಡ ಒಳಗೊಂಡಿದೆ. ಇದು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, 105 ಡಿಗ್ರಿ ಫೀಲ್ಡ್-ಆಫ್-ವ್ಯೂ (FoV) ಹೊಂದಿದೆ.

ರಿಯಲ್‌ಮಿ ಕೋಬಲ್ ಬ್ಲೂಟೂತ್ ಸ್ಪೀಕರ್!
ಇನ್ನು ಹೊಸ ರಿಯಲ್‌ಮಿ ಕೋಬಲ್ ಬ್ಲೂಟೂತ್ ಸ್ಪೀಕರ್ ಹೊಸ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿದೆ. ಇದು 5W ಡೈನಾಮಿಕ್ ಬಾಸ್ ಬೂಸ್ಟ್ ಆಡಿಯೋ ಡ್ರೈವರ್‌ಹೊಂದಿದ್ದು, ಹೆಚ್ಚುವರಿ ನಿಷ್ಕ್ರಿಯ ರೇಡಿಯೇಟರ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಈ ಸ್ಪೀಕರ್ ಬ್ಲೂಟೂತ್ ಮೂಲಕ ಸ್ಟೀರಿಯೋ ಜೋಡಣೆಯನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ, ಸೂಪರ್-ಲೋ ಲೇಟೆನ್ಸಿ ಗೇಮ್ ಮೋಡ್ ಅನ್ನು ಒಳಗೊಂಡಿದ್ದು, ಇದು 88 ಮಿಲಿಸೆಕೆಂಡುಗಳ ಲೇಟೆನ್ಸಿ ರೇಟ್ ನಲ್ಲಿ ವಾಯರ್‌ಲೆಸ್ ಆಡಿಯೋ ಟ್ರಾನ್ಸಫರ್ ಮಾಡಲಿದೆ. ಇನ್ನು ಈ ಸ್ಪೀಕರ್ 1,500mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದ್ದು, ಸಿಂಗಲ್ ಚಾರ್ಜ್‌ನಲ್ಲಿ ಒಂಬತ್ತು ಗಂಟೆಗಳ ಬಳಕೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ರಿಯಲ್‌ಮಿ ಪಾಕೆಟ್ ಬ್ಲೂಟೂತ್ ಸ್ಪೀಕರ್!
ರಿಯಲ್‌ಮಿ ಪಾಕೆಟ್ ಬ್ಲೂಟೂತ್ ಸ್ಪೀಕರ್ ಮೊದಲೇ ಸೆಟ್ ಮಾಡಲಾದ ಈಕ್ವಲೈಜರ್‌ಗಳನ್ನು ಮತ್ತು ಟಚ್ ಕಂಟ್ರೋಲ್‌ಗಳನ್ನು ಹೊಂದಿದೆ. ಇದು 3W ಡೈನಾಮಿಕ್ ಬೂಸ್ಟ್ ಡ್ರೈವರ್ ಜೊತೆಗೆ ಪ್ಯಾಸಿವ್ ರೇಡಿಯೇಟರ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಪೀಕರ್ ಬ್ಲೂಟೂತ್ v5 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಹಾಗೆಯೇ USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ರಿಯಲ್‌ಮಿ ಪ್ಯಾಡ್ ಬೆಲೆ 3GB RAM + 32GB ವೈ-ಫೈ ಓನ್ಲಿ ವೇರಿಯಂಟ್‌ಗೆ 13,999.ರೂ ಹೊಂದಿದೆ. ಇನ್ನು ವೈ-ಫೈ + 4G ರೂಪಾಂತರದ ಆಯ್ಕೆಯಲ್ಲಿ 15,999ರೂ ಬೆಲೆ ಹೊಂದಿದೆ. ಹಾಗೆಯೇ ವೈ-ಫೈ + 4G ಕನೆಕ್ಟಿವಿಟಿಯೊಂದಿಗೆ ಟಾಪ್-ಆಫ್-ದಿ-ಲೈನ್ 4GB + 64GB ಮಾದರಿಯು 17,999ರೂ, ಬೆಲೆಯನ್ನು ಹೊಂದಿದೆ. ಈ ಎಲ್ಲಾ ಮೂರು ಆಯ್ಕೆಗಳು ರಿಯಲ್ ಗೋಲ್ಡ್ ಮತ್ತು ರಿಯಲ್ ಗ್ರೇ ಕಲರ್ ಆಯ್ಕೆಗಳಲ್ಲಿ ಲಭ್ಯವಿರುತ್ತವೆ. ಇದರಲ್ಲಿ ರಿಯಲ್‌ಮಿ ಪ್ಯಾಡ್‌ನ ವೈ-ಫೈ + 4 ಜಿ ಮಾದರಿಗಳು ಸೆಪ್ಟೆಂಬರ್ 16 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಸೇಲ್ ಆಗಲಿದೆ. ವೈ-ಫೈ ಮಾತ್ರ ರೂಪಾಂತರದ ಲಭ್ಯತೆಯ ಬಗ್ಗೆ ವಿವರಗಳನ್ನು ಇನ್ನೂ ಘೋಷಿಸಲಾಗಿಲ್ಲ.

ಇನ್ನು ರಿಯಲ್‌ಮಿ ಕೋಬಲ್ ಬ್ಲೂಟೂತ್ ಸ್ಪೀಕರ್ ಭಾರತದಲ್ಲಿ 1,799ರೂ ಬೆಲೆ ಹೊಂದಿದೆ. ಆದರೆ ಲಾಂಚ್ ಆಫರ್‌ನಲ್ಲಿ ಇದನ್ನು 1,499ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ರಿಯಲ್‌ಮಿ ಪಾಕೆಟ್ ಬ್ಲೂಟೂತ್ ಸ್ಪೀಕರ್ ಬೆಲೆ 1,099 ರೂ ಆಗಿದ್ದು, ಇದು ಕ್ಲಾಸಿಕ್ ಬ್ಲಾಕ್ ಮತ್ತು ಡೆಸರ್ಟ್ ವೈಟ್ ಶೇಡ್ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಎರಡೂ ಬ್ಲೂಟೂತ್ ಸ್ಪೀಕರ್‌ಗಳು ಸೆಪ್ಟೆಂಬರ್ 15 ರಂದು ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಫ್ಲಿಪ್‌ಕಾರ್ಟ್, Realme.com,ನಲ್ಲಿ ಸೇಲ್ ಆಗಲಿವೆ.


Click it and Unblock the Notifications








