ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಸರಣಿ ಬಿಡುಗಡೆ! ವಿಶೇಷತೆ ಏನು?

|

ರಿಯಲ್‌ಮಿ ಸಂಸ್ಥೆ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸ್ಮಾರ್ಟ್‌ಫೋನ್‌ ಪ್ರಿಯರ ಮನ ಗೆದ್ದಿದೆ. ಸದ್ಯ ಇದೀಗ ಹೊಸ ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ರಿಯಲ್‌ಮಿ Q3, ರಿಯಲ್‌ಮಿ Q3 ಪ್ರೊ ಮತ್ತು ರಿಯಲ್‌ಮಿ Q3I ಎಂಬ ಮೂರು ಸ್ಮಾರ್ಟ್‌ಫೋನ್‌ಗಳು ಸೇರಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್‌ಗಳಾಗಿವೆ.

ರಿಯಲ್‌ಮಿ ಮಿ

ಹೌದು, ರಿಯಲ್‌ಮಿ ಮಿ ಕಂಪೆನಿ ಬಜೆಟ್‌ ಸ್ನೇಹಿ 5G ಸ್ಮಾರ್ಟ್‌ಫೋನ್‌ಗಳಾಗಿ ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಸರಣಿಯನ್ನು ಚೀನಾದಲ್ಲಿ ಲಾಂಚ್‌ ಮಾಡಿದೆ. ಇದರಲ್ಲಿ ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 750G Soc, ರಿಯಲ್‌ಮಿ Q3 ಪ್ರೊ ಮೀಡಿಯಾಟೆಕ್ ಡೈಮೆನ್ಸಿಟಿ 1100 Soc ಮತ್ತು ರಿಯಲ್‌ಮಿ Q3I ಮೀಡಿಯಾಟೆಕ್ ಡೈಮೆನ್ಸಿಟಿ 700 Soc ಪ್ರೊಸೆಸರ್‌ ಅನ್ನು ಒಳಗೊಂಡಿವೆ. ಈ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿವೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌, 180Hz ಟಚ್ ಸ್ಯಾಂಪ್ಲಿಂಗ್ ರೇಟ್‌, 90.5% ಸ್ಕ್ರೀನ್-ಟು-ಬಾಡಿ-ಅನುಪಾತ, 405ppi ಪಿಕ್ಸೆಲ್ ಸಾಂದ್ರತೆ ಮತ್ತು 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಪ್ರೊಸೆಸರ್‌

ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 75G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಕ್ಯಾಮೆರಾ ವಿಶೇಷ

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಕ್ಯಾಮೆರಾ ವಿಶೇಷ

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಎಫ್ / 2.3 ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು 30W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಮೋಡ್ 5 ಜಿ, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ.

ರಿಯಲ್‌ಮಿ Q3 ಪ್ರೊ ಸ್ಮಾರ್ಟ್‌ಫೋನ್‌

ರಿಯಲ್‌ಮಿ Q3 ಪ್ರೊ ಸ್ಮಾರ್ಟ್‌ಫೋನ್‌

ರಿಯಲ್‌ಮಿ Q3 ಪ್ರೊ ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43-ಇಂಚಿನ ಫುಲ್‌-ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌, 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಹೊಂದಿದೆ. ರಿಯಲ್‌ಮಿ Q3 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್ ಡೈಮೆನ್ಸಿಟಿ 1100 SoC ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 8 GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಸಹ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 30W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ರಿಯಲ್ Q3i ಸ್ಮಾರ್ಟ್‌ಫೋನ್‌

ರಿಯಲ್ Q3i ಸ್ಮಾರ್ಟ್‌ಫೋನ್‌

ರಿಯಲ್ Q3i ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 90 Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದು 5,000mAh ಬ್ಯಾಟರಿ ಹೊಂದಿದ್ದು, 18W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ Q3 ಸ್ಮಾರ್ಟ್‌ಫೋನ್‌ 6GB RAM + 128GB ಶೇಖರಣಾ ರೂಪಾಂತರಕ್ಕೆ ಬೆಲೆ CNY 1,299 (ಸರಿಸುಮಾರು 15,000 ರೂ.) ಹೊಂದಿದೆ. ಅಲ್ಲದೆ 8GB RAM + 128GB ಶೇಖರಣಾ ರೂಪಾಂತರಕ್ಕೆ CNY1,399 (ಸರಿಸುಮಾರು ರೂ. 16,200) ಆಗಿದೆ. ಇದನ್ನು ಸೈಕೆಡೆಲಿಕ್ ಸಿಲ್ವರ್ ಮತ್ತು ಸೈ-ಫೈ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ನೀಡಲಾಗುತ್ತದೆ.

ರಿಯಲ್‌ಮಿ Q3 ಪ್ರೊ 8GB RAM + 128GB ಶೇಖರಣಾ ರೂಪಾಂತರಕ್ಕೆ CNY 1,799 (ಸರಿಸುಮಾರು 20,800 ರೂ.) ಮತ್ತು 8GB RAM + 256GB ಶೇಖರಣಾ ಆಯ್ಕೆಯು CNY 1,999 (ಸರಿಸುಮಾರು 23,100 ರೂ.) ಬೆಲೆಯನ್ನು ಹೊಂದಿದೆ. ಪ್ರೊ ರೂಪಾಂತರವು ಎಲೆಕ್ಟ್ರಿಕ್ ಬ್ಲೂ, ಫೈರ್ ಫ್ಲೈ ಮತ್ತು ಗ್ರಾವಿಟಿ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ.

ರಿಯಲ್‌ಮೆ Q 3i 4 GB RAM + 128GB ಶೇಖರಣಾ ರೂಪಾಂತರಕ್ಕೆ CNY 999 (ಸರಿಸುಮಾರು ರೂ. 11,600) ಮತ್ತು 6GB RAM + 128GB ಶೇಖರಣಾ ರೂಪಾಂತರಕ್ಕೆ CNY 1,099 (ಸರಿಸುಮಾರು ರೂ. 12,700) ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್ ತಿಳಿ ನೀಲಿ ಮತ್ತು ಪಾರ್ಟಿಕಲ್ ಆಶ್ ಬಣ್ಣಗಳಲ್ಲಿ ನೀಡಲಾಗುತ್ತಿದ್ದು, ಇದು ಚೀನಾದಲ್ಲಿ ಮಾರಾಟದಲ್ಲಿದೆ.
ಇನ್ನು ರಿಯಲ್ಮೆ Q3 ಮತ್ತು ರಿಯಲ್ಮೆ Q3 ಪ್ರೊ ಪ್ರಸ್ತುತ ಚೀನಾದಲ್ಲಿ ಪ್ರೀ-ಆರ್ಡರ್‌ಗೆ ಸಿದ್ಧವಾಗಿದೆ ಮತ್ತು ಏಪ್ರಿಲ್ 29 ರಿಂದ ಮಾರಾಟವಾಗಲಿದೆ.

Best Mobiles in India

English summary
Realme Q3, Realme Q3 Pro, Realme Q3i Smartphones Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X