ರಿಯಲ್‌ಮಿ Q3t ಸ್ಮಾರ್ಟ್‌ಫೋನ್ ಬಿಡುಗಡೆ! ಹೇಗಿದೆ ಕ್ಯಾಮೆರಾ ಫೀಚರ್ಸ್!
ರಿಯಲ್‌ಮಿ ಕಂಪೆನಿ ಇತ್ತೀಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಅತಿ ಹೆಚ್ಚು ಸೌಂಡ್ ಮಾಡುತ್ತಿರುವ ಸ್ಮಾರ್ಟ್‌ಫೋನ್ ಕಂಪೆನಿ ಎನಿಸಿಕೊಂಡಿದೆ. ತನ್ನ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಮೂಲಕ ಗಮನ ಸೆಳೆದಿರುವ ರಿಯಲ್‌ಮಿ ಏರುಗತಿಯಲ್ಲಿ ತನ್ನ ಪ್ರಸಿದ್ಧಿಯನ್ನು ಸಾಧಿಸಿದೆ. ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಇದೀಗ ತನ್ನ ಹೊಸ ರಿಯಲ್‌ಮಿ Q3t ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ರಿಯಲ್‌ಮಿ Q3s ಫೋನ್‌ನ ಮುಂದುವರೆದ ಆವೃತ್ತಿಯಾಗಿದೆ.

ಹೌದು, ರಿಯಲ್‌ಮಿ ಕಂಪೆನಿ ಹೊಸ ರಿಯಲ್‌ಮಿ Q3t ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6.6-ಇಂಚಿನ ಫುಲ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ
ರಿಯಲ್‌ಮಿ Q3t ಸ್ಮಾರ್ಟ್‌ಫೋನ್ 1,080x2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6-ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ IPS LCD ಡಿಸ್‌ಪ್ಲೇ ಆಗಿದ್ದು, 144Hz ರಿಫ್ರೆಶ್ ರೇಟ್ ಹೊಂದಿದೆ. ಜೊತೆಗೆ 600 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 90.8% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇ ಪಂಚ್-ಹೋಲ್ ಡಿಸ್‌ಪ್ಲೇ ನಾಚ್‌ಅನ್ನು ಹೊಂದಿದೆ. ವೀಡಿಯೋ ಕರೆಗಳು ಹಾಗೂ ವೀಡಿಯೊ ರೆಕಾರ್ಡಿಂಗ್‌ಗೆ ಯೋಗ್ಯವಾದ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದೆ.

ಪ್ರೊಸೆಸರ್ ಹೇಗಿದೆ?
ರಿಯಲ್‌ಮಿ Q3t ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778 5G ಪ್ರೊಸೆಸರ್ ಬಲವನ್ನ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಕಾರ್ಯಕ್ಷಮತೆಯನ್ನು ಸುಧಾರಿಸಲು ಫ್ರೀ ಸ್ಟೋರೇಜ್ ಅನ್ನು ವರ್ಚುವಲ್ RAM ಆಗಿ ಬಳಸಿಕೊಳ್ಳುವ ಡೈನಾಮಿಕ್ RAM ವಿಸ್ತರಣೆಯನ್ನು ಸಹ ಬೆಂಬಲಿಸಲಿದೆ.

ಕ್ಯಾಮೆರಾ ವಿನ್ಯಾಸ
ರಿಯಲ್‌ಮಿ Q3t ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ Q3 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್, ಮೈಕ್ರೋ-ಎಸ್‌ಡಿ ಕಾರ್ಡ್ ಸ್ಲಾಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಸಹ ಹೊಂದಿದೆ. ಇದು Android 11 ಅನ್ನು ಆಧರಿಸಿ Realme UI 2.0 ಅನ್ನು ಬೂಟ್ ಮಾಡುತ್ತದೆ. ಜೊತೆಗೆ ಅಕ್ಸಿಲೆರೊಮೀಟರ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಲೈಟ್ ಸೆನ್ಸಾರ್, ಮ್ಯಾಗ್ನೆಟೋಮೀಟರ್ ಸೆನ್ಸಾರ್, ಗೇರೋಸ್ಕೋಪ್ ಸೆನ್ಸಾರ್, ಗ್ರಾವಿಟಿ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಇನ್ನು ಈ ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆ ಆಗಿದ್ದು, 8GB RAM ಮತ್ತು 256GB ಸ್ಟೋರೇಜ್ ಮಾದರಿಯ ಆಯ್ಕೆಗೆ CNY 2,099 (ಸುಮಾರು 24,300ರೂ) ಬೆಲೆ ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ನೆಬ್ಯುಲಾ ಮತ್ತು ನೈಟ್ ಸ್ಕೈ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಸದ್ಯ ರಿಯಲ್‌ಮಿ Q3t ರಿಯಲ್‌ಮಿ ಸಂಸ್ಥೆಯ ಚೀನಾ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಿದೆ. ಇದು ಭಾರತದಲ್ಲಿ ಯಾವಾಗ ಬರಲಿದೆ ಅನ್ನೊ ಮಾಹಿತಿ ಇನ್ನು ಸ್ಪಷ್ಟವಾಗಿಲ್ಲ.


Click it and Unblock the Notifications








