ರಿಯಲ್‌ಮಿ Q5x ಸ್ಮಾರ್ಟ್‌ಫೋನ್ ಬಿಡುಗಡೆ!..ಫೀಚರ್ಸ್ ಹೇಗಿದೆ?
ಟೆಕ್ ಮಾರುಕಟ್ಟೆಯಲ್ಲಿ ರಿಯಲ್‌ಮಿ ಕಂಪೆನಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ವೈವಿಧ್ಯಮಯ ಫೀಚರ್ಸ್‌ಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಸದ್ಯ ಇದೀಗ ಮತ್ತೊಂದು ಆಕರ್ಷಕ ಸ್ಮಾರ್ಟ್‌ಫೋನ್ ರಿಯಲ್‌ಮಿ Q5x ಫೋನ್ ಲಾಂಚ್ ಮಾಡಿದೆ. ಇದು ರಿಯಲ್‌ಮಿ ಕಂಪೆನಿಯ Q ಸರಣಿಯಲ್ಲಿ ಬಂದಿರುವ ಮತ್ತೊಂದು ಹೊಸ ಫೋನ್ ಆಗಿದೆ. ಇನ್ನು ಈ ಫೋನ್ 10W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

ಹೌದು, ರಿಯಲ್‌ಮಿ ಕಂಪೆನಿ ಟೆಕ್ ಮಾರುಕಟ್ಟೆಯಲ್ಲಿ ರಿಯಲ್‌ಮಿ Q5x ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಬಲವನ್ನು ಒಳಗೊಂಡಿರುವುದು ಇದರ ಪ್ರಮುಖ ಹೈಲೈಟ್ ಆಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ರಿಯಲ್‌ಮಿ Q5x ಸ್ಮಾರ್ಟ್‌ಫೋನ್6.5 ಇಂಚಿನ HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 720x1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಹೊಂದಿದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ 400 ನಿಟ್ಸ್ ಸರಾಸರಿ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದ್ದು, 88.7% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ.

ಪ್ರೊಸೆಸರ್ ಯಾವುದು?
ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಕೂಡ ಹೊಂದಿದೆ.

ಕ್ಯಾಮೆರಾ ಹೇಗಿದೆ?
ರಿಯಲ್‌ಮಿ Q5x ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಕ್ಯಾಮೆರಾ ಸೆಟಪ್ ಅನ್ನು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ
ರಿಯಲ್‌ಮಿ Q5x ಸ್ಮಾರ್ಟ್‌ಫೋನ್ 10W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್ ಕಾರ್ಡ್ ಬೆಂಬಲ, ವೈ-ಫೈ, ಬ್ಲೂಟೂತ್ 5.0, ಜಿಪಿಎಸ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ Q5x ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ನ ಏಕೈಕ 4GB RAM + 64GB ಸ್ಟೋರೇಜ್ ಆಯ್ಕೆಗೆ CNY 999 (ಸುಮಾರು 11,700ರೂ)ಬೆಲೆಯನ್ನು ಪಡೆದಿದೆ. ಈ ಫೋನ್ ಇಂಕ್ ಕ್ಲೌಡ್ ಬ್ಲ್ಯಾಕ್ ಮತ್ತು ಸ್ಟಾರ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಸದ್ಯ ಚೀನಾದಲ್ಲಿ ಈ ಸ್ಮಾರ್ಟ್‌ಫೋನ್ ಪ್ರಿ-ಬುಕಿಂಗ್‌ಗೆ ಲಭ್ಯವಿದೆ, ಇದು ಜೂನ್ 23 ರಿಂದ ತನ್ನ ಮೊದಲ ಸೇಲ್ ಪ್ರಾರಂಭಿಸಿಲಿದೆ. ಈ ಫೋನ್ ಭಾರತದಲ್ಲಿ ಬಿಡುಗಡೆ ಆಗುವ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿಲ್ಲ.

ಇದಲ್ಲದೆ ರಿಯಲ್‌ಮಿ ಕಂಪೆನಿ ಶೀಘ್ರದಲ್ಲೇ ಇನ್ನು ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ ಈಗಾಗಲೇ ಕೆಲವು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಈ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕ ಬಹಿರಂಗವಾಗಿಲ್ಲವಾದರೂ, ಸ್ಮಾರ್ಟ್‌ಫೋನ್ ಫೀಚರ್ಸ್‌ಗಳ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಸದ್ಯ ರಿಯಲ್‌ಮಿ ಕಂಪೆನಿ ಶೀಘ್ರದಲ್ಲೇ ಪರಿಚಯಿಸಲಿರುವ ಕೆಲವು ಸ್ಮಾರ್ಟ್‌ಫೋನ್‌ಗಳ ವಿವರ ಕೆಳಗಿನ ಹಂತಗಳಲ್ಲಿ ತಿಳಿಯೋಣ ಬನ್ನಿರಿ.

ರಿಯಲ್‌ಮಿ GT 2 ಎಕ್ಸ್‌ಪ್ಲೋರರ್ ಮಾಸ್ಟರ್ ಎಡಿಷನ್
ಈ ಸ್ಮಾರ್ಟ್‌ಫೋನ್ ಲಾಂಚ್ ಡೇಟ್ ಇನ್ನು ಅಧಿಕೃತವಾಗಿಲ್ಲ. ಆದರೆ ಈ ಫೋನ್ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದ್ದು, 1080 x 2412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಸ್ನಾಪ್‌ಡ್ರಾಗನ್ 8+ Gen 1 (4nm) ಪ್ರೊಸೆಸರ್ ಹೊಂದಿರುವ ನಿರೀಕ್ಷೆಯಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾ 50MP ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರುವ ಸಾಧ್ಯತೆಯಿದೆ.

ರಿಯಲ್‌ಮಿ V20 5G
ರಿಯಲ್‌ಮಿ V20 5G ಸ್ಮಾರ್ಟ್‌ಫೋನ್ ಈಗಾಗಲೇ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಆದರೆ ಭಾರತದಲ್ಲಿ ಇನ್ನು ಕೂಡ ಬಿಡುಗಡೆಯಾಗಿಲ್ಲ. ಈ ಸ್ಮಾರ್ಟ್‌ಫೋನ್ 6.5 ಇಂಚಿನ LCD ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ 1,600 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ ಸಾದ್ಯತೆಯಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಹೊಂದಿದ್ದು, 4GB RAM ಮತ್ತು 128GB ಸ್ಟೋರೇಜ್ ಬಲವನ್ನು ಹೊಂದಿರುವ ನಿರೀಕ್ಷೆಯಿದೆ. ಇನ್ನು ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ವರದಿಯಾಗಿದೆ.

ರಿಯಲ್‌ಮಿ ನಾರ್ಜೊ 50i ಪ್ರೈಮ್
ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ ಇದೇ ತಿಂಗಳೂ ಭಾರತಕ್ಕೆ ಎಂಟ್ರಿ ಕೊಡಲಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್‌ಫೋನ್ ಫೀಚರ್ಸ್ ಹೇಗಿರಲಿದೆ ಎಂಬುದರ ವಿವರಗಳು ಇನ್ನು ಬಹಿರಂಗವಾಗಿಲ್ಲ. ಆದರೆ ಈ ಫೋನ್ 5,000 mAh ಸಾಮರ್ಥ್ಯ ಬ್ಯಾಟರಿ ಹೊಂದಿರುವ ಸಾಧ್ಯತೆಯಿದೆ. ಜೊತೆಗೆ 15W ಅಥವಾ 18W ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಬೆಂಬಲಿಸುತ್ತದೆ ಎಂದು ವರದಿಯಾಗಿದೆ.


Click it and Unblock the Notifications








